LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

GOOD NEWS: 'ಬಸ್-ಮೆಟ್ರೋ'ಗೆ ಒಂದೇ ಡಿಜಿಟಲ್ ವೇದಿಕೆ: 'ನಮ್ಮ BMTC ಮೊಬೈಲ್ ಆಪ್ 2.0' ಲೋಕಾರ್ಪಣೆ

ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ಮಾರ್ಟ್, ಸುಲಭ ಹಾಗೂ ನಗದುರಹಿತವಾಗಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೂತನವಾಗಿ ಅಭಿವೃದ್ಧಿಪಡಿಸಿರುವ "ನಮ್ಮ BMTC ಮೊಬೈಲ್ ಆಪ್ 2.0" ಗೆ ಅಧಿಕೃತ ಚಾಲನೆ ದೊರೆತಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಾರಿಗೆ ಸಚಿವ ಬಿ.ಎಸ್. ಸುರೇಶ್ (ಭೈರತಿ), ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹಾಗೂ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಭಾಗವಹಿಸಿದ್ದರು.

ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಏಕೀಕೃತ ಟಿಕೆಟಿಂಗ್

ನೂತನ ಆಪ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋ (BMRCL) ಎರಡಕ್ಕೂ ಒಂದೇ ವೇದಿಕೆಯಲ್ಲಿ ಟಿಕೆಟ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಆ್ಯಪ್ ಮೂಲಕವೇ ನೇರವಾಗಿ ಮೆಟ್ರೋದ ಕ್ಯೂಆರ್ (QR) ಟಿಕೆಟ್‌ಗಳನ್ನು ಖರೀದಿಸಬಹುದಾಗಿದ್ದು, ಬಸ್ ಮತ್ತು ಮೆಟ್ರೋ ಸಂಯೋಜಿತ ಬಹುಮಾದರಿ (Multimodal) ಪ್ರಯಾಣ ಅತ್ಯಂತ ಸುಗಮವಾಗಲಿದೆ.

ಪ್ರಯಾಣಿಕರ ಬೆರಳ ತುದಿಯಲ್ಲೇ ಸಮಗ್ರ ಸೇವೆಗಳು

  • ನೇರ ಬಸ್ ಟ್ರ್ಯಾಕಿಂಗ್: ಸಂಚರಿಸುತ್ತಿರುವ ಬಸ್‌ಗಳ ನೈಜ ಸ್ಥಳ, ನಿಲ್ದಾಣಕ್ಕೆ ಬರುವ ನಿಖರ ಅಂದಾಜು ಸಮಯ ಹಾಗೂ ಮಾರ್ಗದ ವಿವರಗಳನ್ನು ಲೈವ್ ಆಗಿ ವೀಕ್ಷಿಸಬಹುದು.

  • ಪ್ರಯಾಣ ಯೋಜಕ (Journey Planner): ಪ್ರಯಾಣಿಕರು ತಾವು ಹೊರಡುವ ಸ್ಥಳ ಮತ್ತು ತಲುಪಬೇಕಾದ ತಾಣವನ್ನು ನಮೂದಿಸಿದರೆ ಬಸ್, ಮೆಟ್ರೋ ಅಥವಾ ಎರಡೂ ಸಾರಿಗೆಗಳ ಸಂಯೋಜಿತ ಮಾರ್ಗಗಳ ಆಯ್ಕೆ ಲಭ್ಯವಾಗಲಿದೆ.

  • ಡಿಜಿಟಲ್ ಬಸ್ ಪಾಸ್ ಸೌಲಭ್ಯ: ಸಾಮಾನ್ಯ ಸೇವಾ ಪಾಸ್, ಎಕ್ಸ್‌ಪ್ರೆಸ್, ವಜ್ರ ಗೋಲ್ಡ್, ವಾಯು ವಜ್ರ ಹಾಗೂ ನೈಸ್ ರಸ್ತೆ ಸೇರಿದಂತೆ ಸಂಸ್ಥೆಯ ಎಲ್ಲಾ ಮಾದರಿಯ ಪಾಸ್‌ಗಳನ್ನು ಈ ಆಪ್ ಮೂಲಕವೇ ಖರೀದಿಸಲು ಅವಕಾಶವಿದೆ.

  • ನಗದುರಹಿತ ಪಾವತಿ: ಯುಪಿಐ (UPI) ಹಾಗೂ ಮೊಬೈಲ್ ವಾಲೆಟ್‌ಗಳ ಮೂಲಕ ಸುಲಭವಾಗಿ ಟಿಕೆಟ್ ಹಾಗೂ ಪಾಸ್‌ಗಳಿಗೆ ಹಣ ಪಾವತಿಸಬಹುದು.

  • ಭಾಷಾ ಆಯ್ಕೆ: ಆಪ್ ಸಂಪೂರ್ಣವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ನಿಲ್ದಾಣಗಳ ಹೆಸರು, ರಸೀದಿಗಳು ಎರಡೂ ಭಾಷೆಗಳಲ್ಲಿ ದೊರೆಯಲಿವೆ.

ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (NCMC) ಬಳಕೆ

ಸಾರಿಗೆ ಸಂಪರ್ಕವನ್ನು ವಿಸ್ತರಿಸುವ ಅಂಗವಾಗಿ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' (NCMC) ಹೊಂದಿರುವ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಾರ್ಡ್ ಬಳಸಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ಗೂಗಲ್ ಪ್ಲೇಸ್ಟೋರ್ ಮೂಲಕ ಪ್ರಯಾಣಿಕರು ನವೀಕೃತ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ https://play.google.com/store/apps/details?id=com.bmtc.bmtcavls.two ಲಿಂಕ್ ಕ್ಲಿಕ್ ಮಾಡಿ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ತಿರುನೆಲ್ವೇಲಿ ನಡುವೆ ವಿಶೇಷ ರೈಲುಗಳ ಸಂಚಾರಅಪರೂಪದ ಕ್ಷಣಕ್ಕೆ 100 ದಿನಗಳ ದೃಢ ಕರ್ನಾಟಕದ ಸಂಕಲ್ಪ ಸಮಾರಂಭ ಸಾಕ್ಷಿ: ಫಲಾನುಭವಿಗಳಿಂದಲೇ ಕಾರ್ಯಕ್ರಮ ಉದ್ಘಾಟನೆBIG NEWS: ಬೆಂಗಳೂರಿನ ಕೆರೆಗಳ ರಕ್ಷಣೆಗೆ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಕ್ರಮ: STP ಸುಧಾರಣೆಗೆ 30 ದಿನಗಳ ಡೆಡ್ ಲೈನ್ ಫಿಕ್ಸ್!ಕುಟುಂಬಸ್ಥರ ವಿರೋಧದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಂತರ್ಧಮೀಯ ಜೋಡಿ ; ವಸತಿಗೃಹದಲ್ಲಿ ಪ್ರೇಮಕಥೆಯ ದುರಂತ ಅಂತ್ಯ !ಕೆಂಪುಕೋಟೆ ಸ್ಫೋಟ: ಬ್ಲಾಸ್ಟ್ ಗುರಿ ಬೇರೆಯೇ ಇತ್ತು; NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟದ ಹೊಸ ವಿವರಗಳುBREAKING: ಕೇಂದ್ರದಿಂದ ₹2,186 ಕೋಟಿ ಅನುದಾನ ಬಾಕಿ: ಬಿಡುಗಡೆಗೆ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ3 ಲಕ್ಷ ರೂಪಾಯಿ ಬೆಲೆಯ ಐಫೋನ್ ಡ್ಯುಯೊ ; ದುಬಾರಿ ಮೊಬೈಲ್‌ನಲ್ಲೂ ಗ್ರಾಹಕರಿಗೆ ನಿರಾಶೆ ತಂದ ಪ್ರಮುಖ ಕೊರತೆಗಳಿವು !ಆಸ್ತಿ ಮಾರಾಟಗಾರರಿಗೆ ಭರ್ಜರಿ ರಿಲೀಫ್: ಹಲವು ಮನೆಗಳನ್ನು ಖರೀದಿಸಿದರೂ ಸಿಗಲಿದೆ ಆದಾಯ ತೆರಿಗೆ ವಿನಾಯಿತಿ !ಆಂಧ್ರಪ್ರದೇಶದ ಹಾಸ್ಟೆಲ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ ; ಶಾಲೆಯಲ್ಲಿ ಯಾರಾದರೂ ಸತ್ತರೆ ರಜೆ ಸಿಗುತ್ತೆ ಅಂತ ಸಹಪಾಠಿಯನ್ನೇ ಮುಗಿಸಲು ಸಂಚು !ದುಲೀಪ್ ಟ್ರೋಫಿ ಜಯಿಸಿದ ಈಸ್ಟ್ ಝೋನ್: ಇಶಾನ್ ಕಿಶನ್ ಹಾಗೂ ವೈಭವ್ ಸೂರ್ಯವಂಶಿ ಭರ್ಜರಿ ಡ್ಯಾನ್ಸ್ ವೈರಲ್