ಬೆಂಗಳೂರು : ಬೆಂಗಳೂರಿನ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ವಿಭೂತಿಪುರದ ಕೆರೆಯಲ್ಲಿ 13 ವರ್ಷದ ಅಫ್ರಾತ್ ಶವ ಪತ್ತೆಯಾಗಿತ್ತು. ಎಚ್ ಎ ಎಲ್ ನ ರಮೇಶ್ ನಗರದ ನಿವಾಸಿಯಾಗಿರುವ ಅಫ್ರಾತ್. ಆತನ ಮೈಮೇಲೆ ಹಲ್ಲೆ ಗುರುತು ಪತ್ತೆ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದರು.
ಕ್ಷುಲ್ಲಕ ವಿಚಾರಕ್ಕೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆ ಆಗಿದೆ. ಹೀಗಾಗಿ ಅಫ್ರಾತ್ ಕೊಲೆ ಮಾಡಿದ್ದಾರೆ. ತಿಂಗಳ ಹಿಂದೆ ಆರೋಪಿಯೊಬ್ಬನ ಜೊತೆ ಅಫ್ರಾತ್ ಕಿರಿಕ್ ಮಾಡಿಕೊಂಡಿದ್ದ ಬೈಕ್ ಅಡಗಟ್ಟಿ ವಿಚಾರಕ್ಕೆ ಅಫ್ರಾತ್ ಸಹೋದರರು ಆರೋಪಿ ಜೊತೆ ಕಿರಿಕ್ ಮಾಡಿದ್ದರು ಇದೇ ವಿಚಾರಕ್ಕೆ ಅಫ್ರಾತ್ ಮತ್ತು ಆರೋಪಿ ಮದ್ಯೆ ಆಗಾಗ ಜಗಳ ಆಗುತ್ತಿತ್ತು ಅಕ್ಟೋಬರ್ 11 ರಂದು ಕೆರೆ ಬಳಿ ಹೋಗಿದ್ದಾಗ ಕೊಲೆಗೈದಿದ್ದರೂ ಮರುದಿನ ಕೆರೆ ಬಳಿ ಆಫ್ ರಾಜ್ ಮೃತದೇಹತೆಯಾಗಿತ್ತು ಸದ್ಯ ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.