LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವ ತನಕ ಮಾತ್ರ ಮೊಹಮ್ಮದ್ ನಲಪಾಡ್ ಆಟ: ಜೆಡಿಎಸ್ HM ರಮೇಶ್ ಗೌಡ ಗುಡುಗು

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯದಲ್ಲಿ ಎಲ್ಲಿಯೂ ಒಂದೇ ಒಂದು ಸಭೆ ಮಾಡಲು ಬಿಡುವುದಿಲ್ಲ ಎಂದು ಹೇಳಿರುವುದು ಸೇರಿ ನಮ್ಮ ಯುವ ನಾಯಕನ ಬಗ್ಗೆ ಲಘುವಾಗಿ ಮಾತನಾಡಿರುವ ಮೊಹಮ್ಮದ್ ನಲಪಾಡ್ ವಿರುದ್ಧ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಹರಿಹಾಯ್ದಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಲಪಾಡ್ ದುರಹಂಕಾರ ನಡೆಯುವುದಿಲ್ಲ. ಯಾರನ್ನು ಹೊಡೆದರೂ ನನ್ನದು ನಡೆಯುತ್ತದೆ ಎಂದುಕೊಂಡರೆ ಆಗುವುದಿಲ್ಲ. ನನಗೆ ಪಾಠ ಕಲಿಸುವವರು ಯಾರೂ ಇಲ್ಲ ಎಂದು ಆತ ಭಾವಿಸಿದರೆ ತಪ್ಪು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವ ತನಕ ಈತನ ಆಟ ನಡೆಯುತ್ತದೆ. ಆಮೇಲೆ ಈತನಿಗೆ ಕಾದಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಿಕ್ಕ ಸಿಕ್ಕವರ ಮೇಲೆ ಈ ನಲಪಾಡ್ ಹಲ್ಲೆ, ಮಾರಣಾಂತಿಕವಾಗಿ ಹೊಡೆಯುವುದು ನಡೆಯುತ್ತಿದೆ. ಕಳೆದ ಒಂದು ವಾರದಿಂದ ಹಲವಾರು ಪಬ್ಬುಗಳಲ್ಲಿ ಈತ ಹಲವಾರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ನನಗಿದೆ. ಸರಿಯಾಗಿರುವವರ ಕೈಗೆ ಯಾವತ್ತಾದರೂ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗೆ ಸಿಕ್ಕಾಕೊಂಡರೆ ಇವನಿಗೆ ಗೊತ್ತಾಗುತ್ತದೆ. ಇವತ್ತು ತಿಳ್ಕೊಂಡಿರಬಹುದು ಆ ಮನುಷ್ಯ, ಕಾಂಗ್ರೆಸ್ ಸರ್ಕಾರ ಇದೆ, ನಾನು ಏನು ಮಾಡಿದರೂ ನಡೆಯುತ್ತದೆ ಎಂದು. ಈತನ ಅಹಂಕಾರದ ಚಾಳಿ ಮಿತಿ ಮೀರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಈತ ನಮ್ಮ ನಾಯಕರುಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ನಮ್ಮ ಕಾರ್ಯಕರ್ತರು ರೊಚ್ಚಿಗೆದ್ದರೆ ಕಷ್ಟ. ಇವನಿಗೆ ಯಾವ ಮಟ್ಟದ ದುರಹಂಕಾರ ಬಂದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಬರೀ ಅಪರಾಧಿ ಕೃತ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾನೆ. ಈತನ ಬಗ್ಗೆ ಬೆಂಗಳೂರು ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಏನಾದರೂ ಅವಾಂತರ ಸಂಭವಿಸಿದರೆ ಅದಕ್ಕೆ ಪೊಲೀಸರೇ ಹೊಣೆ ಆಗಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಲಪಾಡ್ ಯಾರ ಯಾರ ಮೇಲೆ ಮಾರಣಾಂತಿಕ ಹಲ್ಲೆ, ದಾಳಿ ನಡೆಸಿದ್ದಾನೆ ಎಂಬುದಕ್ಕೆ ಸಿಸಿ ಟಿವಿ ದೃಶ್ಯಾವಳಿ, ಇನ್ನಿತರ ದಾಖಲೆಗಳು ಇವೆ. ಅವುಗಳ ಆಧಾರದ ಮೇಲೆ ಪೊಲೀಸರು ಕ್ರಮ ವಹಿಸಬೇಕು ಎಂದು ರಮೇಶ್ ಗೌಡ ಆಗ್ರಹಿಸಿದರು.

ಇವತ್ತಿನವರೆಗೂ ಅವನ ಮೇಲೆ ಕಂಪ್ಲೇಂಟ್ ಆಗಿಲ್ಲ ಅಂತ ಅಂದುಕೊಂಡಿದ್ದಾನೆ. ಸರಿಯಾಗಿರೋರ ಕೈಗೆ ಸಿಕ್ಕಿಲ್ಲ ಅಷ್ಟೇ. ಅಮಾಯಕರನ್ನು ಹೊಡೆದು ತಿಂದು ಬಂದಿದ್ದಾನೆ. ಕಾಂಗ್ರೆಸ್ ಸರ್ಕಾರ ಇದೆ ಎಂದು ಮೆರೆಯುತ್ತಿದ್ದಾನೆ. ನಮ್ಮ ಪಕ್ಷದ ನಾಯಕರ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಮಾತಾಡ್ತಾ ಇದ್ದಾನೆ. ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಾದರೂ ಸಭೆ ಮಾಡಿದರೆ ಬಿಡಲ್ಲ ಅಂತ ಹೇಳ್ತಾನೆ. ಅವನಿಗೆ ಧೈರ್ಯ ಇದ್ದರೆ ನಿಖಿಲ್ ಅವರ ಸಭೆಯನ್ನು ತಡೆಯಲಿ ಎಂದು ಸವಾಲು ಹಾಕಿದರು ಅವರು.

ಅವನ ಕ್ರಿಮಿನಲ್ ಹಿಸ್ಟರಿ ಏನು, ರೌಡಿ ಶೀಟರ್ ಆಗಿದ್ದಾನಾ ಅಂತ ಬೆಂಗಳೂರಿನ ಪೊಲೀಸ್ ಇಲಾಖೆ, ಪೊಲೀಸ್ ಕಮಿಷನರ್ ಅವರು ಚೆಕ್ ಮಾಡಬೇಕು. ಕಳೆದ 5-6 ತಿಂಗಳ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಬೇಕು. ಹೊಸಕೋಟೆ ಕಾಲೇಜಿನಲ್ಲಿ ಓದಿದ ದಿನದಿಂದ ಏನೇನು ಮಾಡಿದ್ದಾನೆ ಅಂತ ಎಲ್ಲರಿಗೂ ಗೊತ್ತು. ದೇವೇಗೌಡರ ಕುಟುಂಬ, ಕುಮಾರಣ್ಣನ ಮಗನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡೋದು ಸರಿಯಲ್ಲ. ಇದನ್ನು ಸಾಮಾನ್ಯ ಜನರು ಕೂಡ ಖಂಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂಥ ದುರಹಂಕಾರ ಮುಂದುವರೆದರೆ ಸರಿಯಾಗಿ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ತುರ್ತು ಕಡತ ಒಂದೇ ದಿನದಲ್ಲಿ ವಿಲೇವಾರಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ ಯೋಜನೆ ವಿಸ್ತರಣೆ65 ಕೋಟಿ ಅವ್ಯವಹಾರ ಪ್ರಕರಣ: ಬಾಲಿವುಡ್ ನಟ ಡಿನೊ ಮೊರಿಯಾ ಅರೆಸ್ಟ್BIG NEWS: ರಾಜ್ಯದಲ್ಲಿ 4.49 ಕೋಟಿ ಮತದಾರರು; ಸುಳ್ಳು ಮಾಹಿತಿ ನೀಡಿದ್ರೆ ಕೇಸ್!‘ಫ್ಲೈದುಬೈ’ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದ ಯುಎಇ: ಪೈಲಟ್ ಸ್ಮಿತ್ ಮಚ್ಚಾರ್ ಕಾರ್ಯಕ್ಕೆ ಶ್ಲಾಘನೆಸರ್ಕಾರಿ ಬಸ್ ಏರಿ ಕಂಡಕ್ಟರ್ ಆದ ಸಿಎಂ ; ಉಚಿತ ಟಿಕೆಟ್ ನೀಡಿ ಸಾರ್ವಜನಿಕರ ಜೊತೆ ಸಂವಾದ | Videoಬ್ರಹ್ಮಪುತ್ರ ಕಣಿವೆಯಲ್ಲಿ ಕಾವೇರಿದ ರಾಜಕೀಯ ಕಾಳಗ: ‘ಬಕಾಸುರ’ ಮತ್ತು ‘ಬಿರಿಯಾನಿ’ ವಾಕ್ಸಮರಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿಸಿದ ಮಹಿಳಾ ಹಾಕಿ ತಂಡ: 44 ವರ್ಷಗಳ ನಂತರ ಚಿನ್ನದ ಪದಕBREAKING: ತುರ್ತು ಕಡತ ಒಂದೇ ದಿನದಲ್ಲಿ ವಿಲೇವಾರಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವೆಟ್ರಿ ಪಯಣಂ ಯೋಜನೆಗೆ ಚಾಲನೆ ನೀಡಿದ ಸಿಎಂ ವಿಜಯ್