LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

IPL 2026: 2008ರಿಂದ ಇಲ್ಲಿಯವರೆಗೂ ಪ್ರತಿವರ್ಷ ಆರೆಂಜ್ ಕ್ಯಾಪ್ ಗೆದ್ದವರ ಪಟ್ಟಿ; ಈ ಬಾರಿ ಕೊಹ್ಲಿ ಕೈನಲ್ಲಿ ಆಗಲ್ಲ, ವೈಭವ್ ಹಿಂದಿಕ್ಕಿದರೆ ಗುಜರಾತ್‌ನ ಇಬ್ಬರಿಗಿದೆ ಅವಕಾಶ

ನಾಳೆ ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಐಪಿಎಲ್ 2026ಕ್ಕೆ ತೆರೆ ಬೀಳಲಿದೆ.

ಕಳೆದ ಬಾರಿ ಐಪಿಎಲ್ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್ ತಲುಪಿದ್ದು, ಆರ್‌ಸಿಬಿ ವಿರುದ್ಧ ಒಂದನೇ ಕ್ವಾಲಿಫಯರ್ ಸೋತು ಕ್ವಾಲಿಫಯರ್ ಎರಡರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದ ಗುಜರಾತ್ ಟೈಟನ್ಸ್ ಆರ್‌ಸಿಬಿಗೆ ಫೈನಲ್‌ನಲ್ಲಿ ಮತ್ತೆ ಎದುರಾಳಿಯಾಗಿದೆ.

ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿಹೆಚ್ಚು ರನ್ 776 ಬಾರಿಸಿರುವ ವೈಭವ್ ಸೂರ್ಯವಂಶಿ ಬಳಿ ಸದ್ಯ ಆರೆಂಜ್ ಕ್ಯಾಪ್ ಇದ್ದು, 600 ರನ್ ಗಳಿಸಿರುವ ಕೊಹ್ಲಿಗೆ ಫೈನಲ್ ಪಂದ್ಯದಲ್ಲಿ ಇದಕ್ಕಿಂತ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದುಕೊಳ್ಳುವುದು ಅಸಾಧ್ಯ. ಆದರೆ 722 ರನ್ ಗಳಿಸಿರುವ ಶುಬ್‌ಮನ್ ಗಿಲ್ ಹಾಗೂ 710 ರನ್ ಗಳಿಸಿರುವ ಸಾಯಿ ಸುದರ್ಶನ್‌ಗೆ ಫೈನಲ್‌ನಲ್ಲಿ ಉತ್ತಮ ಆ ಟವಾಡಿದರೆ ವೈಭವ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆಯುವ ಸಾಧ್ಯತೆಗಳಿವೆ.

ಇನ್ನು ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಪ್ರತಿ ಆವೃತ್ತಿಯಲ್ಲೂ ಅತಿಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

2008: ಶಾನ್ ಮಾರ್ಷ್ ( ಕಿಂಗ್ಸ್ ಇಲೆವೆನ್ ಪಂಜಾಬ್) – 616 ರನ್

2009: ಮ್ಯಾಥ್ಯೂ ಹೇಡನ್ (ಚೆನ್ನೈ ಸೂಪರ್ ಕಿಂಗ್ಸ್) – 572 ರನ್

2010: ಸಚಿನ್ ತೆಂಡೂಲ್ಕರ್ (ಮುಂಬೈ ಇಂಡಿಯನ್ಸ್) – 618 ರನ್

2011: ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 608 ರನ್

2012: ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 733 ರನ್

2013: ಮೈಕೆಲ್ ಹಸ್ಸಿ (ಚೆನ್ನೈ ಸೂಪರ್ ಕಿಂಗ್ಸ್) – 733 ರನ್

2014: ರಾಬಿನ್ ಉತ್ತಪ್ಪ (ಕೋಲ್ಕತ್ತಾ ನೈಟ್ ರೈಡರ್ಸ್) – 660 ರನ್

2015: ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್) – 562 ರನ್

2016: ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 973 ರನ್

2017: ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್) – 641 ರನ್

2018: ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್ ಹೈದರಾಬಾದ್) – 735 ರನ್

2019: ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್) – 692 ರನ್

2020: ಕೆ.ಎಲ್. ರಾಹುಲ್ (ಕಿಂಗ್ಸ್ ಇಲೆವನ್ ಪಂಜಾಬ್) – 670 ರನ್

2021: ಋತುರಾಜ್ ಗಾಯಕ್ವಾಡ್ (ಚೆನ್ನೈ ಸೂಪರ್ ಕಿಂಗ್ಸ್) – 635 ರನ್

2022: ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) – 863 ರನ್

2023: ಶುಭಮನ್ ಗಿಲ್ (ಗುಜರಾತ್ ಟೈಟನ್ಸ್) – 890 ರನ್

2024: ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 741 ರನ್

2025: ಬಿ. ಸಾಯಿ ಸುದರ್ಶನ್ (ಗುಜರಾತ್ ಟೈಟನ್ಸ್) – 759 ರನ್

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ