LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Layoffs : ಒಂದೇ ಸುತ್ತಿನಲ್ಲಿ 1 ಲಕ್ಷ ಉದ್ಯೋಗಿಗಳ ಕಡಿತ ? ವಾಹನ ದಿಗ್ಗಜ ‘ಫೋಕ್ಸ್‌ವ್ಯಾಗನ್‌’ನಿಂದ ಶಾಕಿಂಗ್ ಯೋಜನೆ !

ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಕೃತಕ ಬುದ್ಧಿಮತ್ತೆ (AI) ಪ್ರಭಾವದ ನಡುವೆ ಮತ್ತೊಂದು ವಾಹನ ದಿಗ್ಗಜ ಸಂಸ್ಥೆ ಭಾರೀ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿ ವಿಶ್ವದಾದ್ಯಂತ ಸುಮಾರು 1 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸುವ ಜೊತೆಗೆ ನಾಲ್ಕು ಕಾರ್ಖಾನೆಗಳನ್ನು ಮುಚ್ಚುವ ಯೋಜನೆ ರೂಪಿಸಿರುವುದಾಗಿ ವರದಿಯಾಗಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ, ಕೃತಕ ಬುದ್ಧಿಮತ್ತೆ (AI) ಪ್ರಭಾವ ಹಾಗೂ ವೆಚ್ಚ ನಿಯಂತ್ರಣದ ಅಗತ್ಯದ ಹಿನ್ನೆಲೆಯಲ್ಲಿ ವಿಶ್ವದ ಅನೇಕ ಪ್ರಮುಖ ಕಂಪನಿಗಳು ಉದ್ಯೋಗಿಗಳನ್ನು ಕಡಿತಗೊಳಿಸುತ್ತಿವೆ. ಇದೀಗ ಜರ್ಮನಿಯ ವಾಹನ ತಯಾರಿಕಾ ದಿಗ್ಗಜ ಫೋಕ್ಸ್‌ವ್ಯಾಗನ್ (Volkswagen) ಕೂಡ ಭಾರಿ ಪುನರ್‌ರಚನೆಗೆ ಮುಂದಾಗಿರುವ ವರದಿಗಳು ಹೊರಬಿದ್ದಿವೆ.

ವರದಿ ಪ್ರಕಾರ, ಫೋಕ್ಸ್‌ವ್ಯಾಗನ್ ಸಿಇಒ ಒಲಿವರ್ ಬ್ಲೂಮ್ (Oliver Blume) ಅವರು ಕಂಪನಿಯ 2030 Group Target Picture ಯೋಜನೆಯ ಭಾಗವಾಗಿ ವಿಶ್ವದಾದ್ಯಂತ ಸುಮಾರು 1 ಲಕ್ಷ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ರೂಪಿಸಿದ್ದಾರೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 15 ಶೇಕಡಾ ಆಗಲಿದೆ ಎನ್ನಲಾಗಿದೆ.

ಪ್ರಸ್ತುತ ಫೋಕ್ಸ್‌ವ್ಯಾಗನ್ ಗ್ರೂಪ್‌ನಲ್ಲಿ ಸುಮಾರು 6.67 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಸುಮಾರು 43 ಶೇಕಡಾ ಮಂದಿ ಜರ್ಮನಿಯಲ್ಲೇ ಕೆಲಸ ಮಾಡುತ್ತಿದ್ದಾರೆ.ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಗಳನ್ನು ಮಂಡಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಯೋಜನೆಯ ಭಾಗವಾಗಿ ಜರ್ಮನಿಯ ಹ್ಯಾನೋವರ್ (Hanover), ಜ್ವಿಕ್ಕೌ (Zwickau), ಎಮ್ಡೆನ್ (Emden) ಹಾಗೂ ಆಡಿ (Audi)ಗೆ ಸೇರಿದ ನೆಕ್ಕಾರ್ಸುಲ್ಮ್ (Neckarsulm) ಘಟಕಗಳಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಕುರಿತು ಸಹ ಚಿಂತನೆ ನಡೆದಿದೆ ಎನ್ನಲಾಗಿದೆ. ಜೊತೆಗೆ, ಮುಂದಿನ ಐದು ವರ್ಷಗಳ ಹೂಡಿಕೆ ಯೋಜನೆಗಳನ್ನು ಸುಮಾರು 15 ಶೇಕಡಾ ಕಡಿತಗೊಳಿಸುವ ಉದ್ದೇಶವಿದೆ. ವಿದ್ಯುತ್ ವಾಹನಗಳ (EV) ಉತ್ಪಾದನಾ ವೆಚ್ಚ ಹೆಚ್ಚಳ, ಚೀನಾದಿಂದ ಹೆಚ್ಚುತ್ತಿರುವ ಸ್ಪರ್ಧೆ ಹಾಗೂ ಜಾಗತಿಕ ಸುಂಕ (Tariff) ಒತ್ತಡಗಳನ್ನು ಎದುರಿಸಲು ಈ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

ಆದರೆ, ಈ ಪ್ರಸ್ತಾವನೆಗೆ ಫೋಕ್ಸ್‌ವ್ಯಾಗನ್ ವರ್ಕ್ಸ್ ಕೌನ್ಸಿಲ್ ಹಾಗೂ ಜರ್ಮನಿಯ IG Metall ಕಾರ್ಮಿಕ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಂಪನಿ ಈ ಕ್ರಮಗಳನ್ನು ಜಾರಿಗೆ ತಂದರೆ ಬಲವಾದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.ಗಮನಾರ್ಹವಾಗಿ, 2024ರಲ್ಲಿ ಫೋಕ್ಸ್‌ವ್ಯಾಗನ್ ಕಾರ್ಮಿಕ ಸಂಘಗಳೊಂದಿಗೆ ಮುಂದಿನ ಹತ್ತು ವರ್ಷಗಳವರೆಗೆ ಯಾವುದೇ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂಬ ಒಪ್ಪಂದ ಮಾಡಿಕೊಂಡಿತ್ತು. ಹೊಸ ಪ್ರಸ್ತಾವನೆ ಆ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಕಾರ್ಮಿಕ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ.ಫೋಕ್ಸ್‌ವ್ಯಾಗನ್ ಗ್ರೂಪ್ Volkswagen, Audi, Porsche, Lamborghini, Bentley ಸೇರಿದಂತೆ ಹಲವು ಐಷಾರಾಮಿ ಮತ್ತು ಪ್ರಯಾಣಿಕ ವಾಹನ ಬ್ರ್ಯಾಂಡ್‌ಗಳನ್ನು ಹೊಂದಿದ್ದು, Scania ಹಾಗೂ Ducati ಸೇರಿದಂತೆ ವಾಣಿಜ್ಯ ವಾಹನ ಮತ್ತು ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳನ್ನೂ ನಿರ್ವಹಿಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!