LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ಮೋದಿಯಿಂದ ಮೆಲೋನಿಗೆ ‘Melody’ ಚಾಕೊಲೇಟ್ ಗಿಫ್ಟ್: ಕೇವಲ ಒಂದೇ ದಿನದಲ್ಲಿ 12 ಕೋಟಿ ವ್ಯೂಸ್ ಪಡೆದು ಧೂಳೆಬ್ಬಿಸಿತು ರೋಮ್‌ನ ಕ್ಯೂಟ್ ವಿಡಿಯೋ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ರಾಜತಾಂತ್ರಿಕ ಬಾಂಧವ್ಯ ಕೇವಲ ಮಾತುಕತೆಗಷ್ಟೇ ಸೀಮಿತವಾಗಿಲ್ಲ, ಅದು ಇಂಟರ್ನೆಟ್‌ನ ಅತ್ಯಂತ ದೊಡ್ಡ ಟ್ರೆಂಡ್ ಕೂಡ ಹೌದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ರೋಮ್‌ನಲ್ಲಿ ನಡೆದ ಉಭಯ ನಾಯಕರ ಭೇಟಿಯ ವೇಳೆ ನಡೆದ ಒಂದು ಅತ್ಯಂತ ಸರಳ ಹಾಗೂ ಕ್ಯೂಟ್ ಪ್ರಸಂಗ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಮ್ಮ ಐದು ದೇಶಗಳ ಪ್ರವಾಸದ ಅಂತಿಮ ಹಂತವಾಗಿ ಇಟಲಿ ತಲುಪಿರುವ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಜನಪ್ರಿಯ ‘ಮೆಲೋಡಿ ಚಾಕೊಲೇಟ್’ (Melody Toffees) ಪ್ಯಾಕೆಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 120 ಮಿಲಿಯನ್‌ಗಿಂತಲೂ (12 ಕೋಟಿ) ಹೆಚ್ಚು ವೀಕ್ಷಣೆ ಪಡೆದಿರುವ ಈ ವೈರಲ್ ವಿಡಿಯೋದ ಕಂಪ್ಲೀಟ್ ಸ್ಟೋರಿ ಇಲ್ಲಿದೆ

https://www.instagram.com/reel/DYjNN2KsWkx/?utm_source=ig_web_copy_link&igsh=NTc4MTIwNjQ2YQ==

‘ಥ್ಯಾಂಕ್ ಯೂ ಫಾರ್ ದಿ ಗಿಫ್ಟ್’: ಇನ್‌ಸ್ಟಾಗ್ರಾಮ್‌ನಲ್ಲಿ ಮೆಲೋನಿ ಪೋಸ್ಟ್

ಈ ಅಪರೂಪದ ಕ್ಷಣದ ಪುಟ್ಟ ವಿಡಿಯೋ ಕ್ಲಿಪ್ ಅನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಉಡುಗೊರೆಗೆ ಧನ್ಯವಾದಗಳು” (Thank you for the gift) ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರೂ ನಾಯಕರು ಅತ್ಯಂತ ಹಸನ್ಮುಖಿಯಾಗಿ, ಕ್ಯಾಶುವಲ್ ಆಗಿ ಮಾತನಾಡುತ್ತಾ ಚಾಕೊಲೇಟ್ ವಿನಿಮಯ ಮಾಡಿಕೊಳ್ಳುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ವಿಶ್ವದ ಇಬ್ಬರು ಪ್ರಭಾವಿ ನಾಯಕರು ಹೈ-ಲೆವೆಲ್ ಮೀಟಿಂಗ್ ಮಧ್ಯೆ ಇಷ್ಟೊಂದು ಸರಳವಾಗಿ ಭಾರತೀಯ ಮೂಲದ ಸಿಹಿಯನ್ನು ಹಂಚಿಕೊಂಡಿರುವುದು ಇಡೀ ಸೋಶಿಯಲ್ ಮೀಡಿಯಾವನ್ನು ಆಕರ್ಷಿಸಿದೆ. ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಈ ವಿಡಿಯೋ ಸದ್ಯ ಟಾಪ್ ಟ್ರೆಂಡಿಂಗ್‌ನಲ್ಲಿದೆ.

ಮತ್ತೆ ಲೈಮ್‌ಲೈಟ್‌ಗೆ ಬಂದ ‘Melodi’ ಜುಗಲ್‌ಬಂದಿ ಟ್ರೆಂಡ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಹಳೆಯ ‘Melodi’ (ಮೆಲೋನಿ + ಮೋದಿ) ಹ್ಯಾಶ್‌ಟ್ಯಾಗ್ ಟ್ರೆಂಡ್ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ನೆಟ್ಟಿಗರು ಈ ಕ್ಷಣವನ್ನು ಇಟ್ಟುಕೊಂಡು ತರಹೇವಾರಿ ಮೀಮ್ಸ್, ಎಡಿಟ್‌ಗಳು ಮತ್ತು ತಮಾಷೆಯ ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ರಾಜಕೀಯದ ಗಂಭೀರತೆಯ ನಡುವೆ ಪಾಪ್ ಕಲ್ಚರ್ ಮಿಕ್ಸ್ ಆಗಿ ಇಂಟರ್ನ್ಯಾಷನಲ್ ಡಿಪ್ಲೊಮಸಿ ಈಗ ಯುವ ಪೀಳಿಗೆಗೆ ಇಷ್ಟವಾಗುವಂತೆ ಬದಲಾಗಿದೆ.

ನಿಮಗೆ ನೆನಪಿರಬಹುದು, 2023 ರಲ್ಲಿ ನಡೆದ COP28 ಶೃಂಗಸಭೆಯ ಸಂದರ್ಭದಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದುಕೊಂಡು ಮೊದಲ ಬಾರಿಗೆ ‘Melodi’ ಎಂದು ಬರೆದುಕೊಂಡಿದ್ದರು. ಅಂದಿನಿಂದ ಇವರಿಬ್ಬರು ಜಾಗತಿಕ ವೇದಿಕೆಯಲ್ಲಿ ಭೇಟಿಯಾದಾಗಲೆಲ್ಲಾ ಡಿಜಿಟಲ್ ಲೋಕದಲ್ಲಿ ಬಿರುಗಾಳಿ ಏಳುವುದು ಕಾಮನ್ ಆಗಿದೆ.

ಭಾರತ ಮತ್ತು ಇಟಲಿ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಕಾರಿಡಾರ್‌ಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದರೂ, ಸಾರ್ವಜನಿಕರ ಮನಸ್ಸಿನಲ್ಲಿ ಮಾತ್ರ ಈ ‘ಮೆಲೋಡಿ ಟಾಫಿ’ ವಿನಿಮಯವೇ ಈ ಪ್ರವಾಸದ ಅತ್ಯಂತ ನೆನಪಿನ ಆ ಕ್ಷಣವಾಗಿ ಉಳಿದುಕೊಂಡಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆ