LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೋಯ್ತು ಎಲ್ಲಾ ಹೋಯ್ತು, ಟ್ರಂಪ್ ನಂಬಿ ಕೆಟ್ಟರಾ ನ್ಯಾಟೋ ನಾಯಕರು? NATO Countries

ನ್ಯಾಟೋ ಅಂದ್ರೆ ಹಂಗೆ.. ನ್ಯಾಟೋ ಬಂದ್ರೆ ಹಿಂಗೆ… ಹೀಗೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ಒಕ್ಕೂಟ ‘ನ್ಯಾಟೋ’ ಬಗ್ಗೆ ಪುಂಗುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ ಕೂಡ. ಆದರೆ ಇಷ್ಟೆಲ್ಲಾ ಬಿಲ್ಡಪ್ ಕೊಡುವ ನ್ಯಾಟೋ ದೇಶಗಳ ಪಾಡು ಈಗ ಅಯ್ಯೋ ಎನ್ನುವಂತಾಗಿದೆ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಎಂದು ಬಿಲ್ಡಪ್ ಕೊಡುವ ಅಮೆರಿಕದ ಮುಖ್ಯಸ್ಥರು ಅಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತು ಕೇಳಿ ಇದೀಗ, ನ್ಯಾಟೋ ಒಕ್ಕೂಟದ ದೇಶಗಳು ದೊಡ್ಡ ಸಂಕಷ್ಟದ ಸುಳಿಗೆ ಸಿಲುಕಿರುವ ಮುನ್ಸೂಚನೆ ಕಾಣುತ್ತಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಏನೇನೋ ಆಗ್ತಾ ಇದೆ. ಅಮೆರಿಕದ ಶತ್ರುಗಳು ಯಾರು? ಮಿತ್ರರು ಯಾರು? ಅನ್ನೋ ಡೌಟ್ ಸಿಕ್ಕಾಪಟ್ಟೆ ಕಾಡುತ್ತಿದೆ ಇಡೀ ಜಗತ್ತನ್ನು. ಅದರಲ್ಲೂ ಇಷ್ಟು ದಿನಗಳ ಕಾಲ ಅಮೆರಿಕ ಸಾಕಿದ ಮಕ್ಕಳಂತೆ ಹಿಂದೆ ಹಿಂದೆ ಓಡಾಡುತ್ತಿದ್ದ ನ್ಯಾಟೋ ಎಂದರೆ ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ಒಕ್ಕೂಟ ಈಗ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಯುರೋಪಿನ ರಾಷ್ಟ್ರಗಳು ಸೇರಿದಂತೆ ನ್ಯಾಟೋ ಒಕ್ಕೂಟದ ಬಹುತೇಕ ಎಲ್ಲಾ ದೇಶಗಳು ಅನೇಕ ಕಹಿ ನಿರ್ಧಾರಗಳನ್ನು ಮೌನವಾಗಿ ಸಹಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಆರ್ಥಿಕವಾಗಿ ಬೀದಿಗೆ ಬೀಳುವ ಪರಿಸ್ಥಿತಿ?

ಟ್ರಂಪ್ ಅವರು ತಮ್ಮ ಮಾತಿನ ಮೇಲೆ ತಾವು ನಿಲ್ಲುವುದಿಲ್ಲ ಎಂಬ ಆರೋಪ ಇದೆ, ಇದಕ್ಕೆ ತಕ್ಕಂತೆ ಡೊನಾಲ್ಡ್ ಟ್ರಂಪ್ ಕೂಡ ನಡೆದುಕೊಳ್ಳುತ್ತಿದ್ದಾರೆ. ಒಂದು ದಿನ ಇರಾನ್ ವಿರುದ್ಧ ಮತ್ತೆ ಭೀಕರ ಯುದ್ಧ ಗ್ಯಾರಂಟಿ ಅಂತಾರೆ ಮತ್ತು ಇದೇ ಟ್ರಂಪ್ ಮತ್ತೊಂದು ದಿನ ಬಿಟ್ಟು ಯದ್ಧ ಮಾಡಲ್ಲ ಅಂತಾರೆ. ಇದೆಲ್ಲಾ ಹಾಳಾಗಿ ಹೋಗಲಿ ಅಂದ್ರೆ ಆ ಕಡೆ ಇರಾನ್ ವಿರುದ್ಧದ ಯುದ್ಧ ಸಮಯದಲ್ಲಿ ನಮಗೆ ಸಹಾಯ ಮಾಡಿಲ್ಲ ಎಂದು ಆರೋಪಿಸುವ ಟ್ರಂಪ್, ನ್ಯಾಟೋ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ. ಇದೆಲ್ಲವೂ ಈಗ ಜಗತ್ತಿನ ಅತಿದೊಡ್ಡ ಮಿಲಿಟರಿ ಒಕ್ಕೂಟ ನ್ಯಾಟೋ ಪಡೆಗೆ ನಡುಕ ತರಿಸಿದೆ. ಕೊರೊನಾ ವಕ್ಕರಿಸಿದ ನಂತರ ಮೊದಲೇ ಸಾಲು ಸಾಲು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ನ್ಯಾಟೋ ಮತ್ತು ಪಾಶ್ಚಿಮಾತ್ಯ ದೇಶಗಳು ಈಗ ಮತ್ತಷ್ಟು ಒದ್ದಾಟಕ್ಕೆ ಸಿಲುಕಿ ನಲುಗಿವೆ.

ಉಕ್ರೇನ್ ಯುದ್ಧ ವಿಚಾರದಲ್ಲೂ ಆಟ ಉಲ್ಟಾ!
ನಿಮಗೆಲ್ಲಾ ಗೊತ್ತಿರಲಿ, ಅಮೆರಿಕ ಎಂಬ ದೈತ್ಯ ದೇಶ 2022ರ ಸಮಯದಲ್ಲಿ ಉಕ್ರೇನ್ ಯುದ್ಧದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದೇ ರಷ್ಯಾ ಕಥೆಯನ್ನು ಪರೋಕ್ಷವಾಗಿ ಮುಗಿಸಲು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ತಕ್ಕಂತೆ ಅಮೆರಿಕ ಕೂಡ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಮಿಲಿಟರಿ ಉಪಕರಣ ಅದರಲ್ಲೂ ಗನ್, ಬಾಂಬ್, ಮಿಸೈಲ್, ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ಗಿಫ್ಟ್ ಆಗಿ ಕೊಟ್ಟು ಹೊಡೆದಾಟಕ್ಕೆ ಕಳುಹಿಸಿದೆ ಎಂಬ ಆರೋಪ ಇತ್ತು. ಉಕ್ರೇನ್ ಯಾವಾಗ ದಿಢೀರ್ ನ್ಯಾಟೋ ಒಕ್ಕೂಟ ಸೇರಲು ಸಿದ್ಧತೆ ನಡೆಸಿದೆ ಎಂಬ ಆರೋಪ ಕೇಳಿಬಂತೋ ಅದೇ ಕ್ಷಣದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಯುದ್ಧ ಸಾರಿದ್ದರು.

ಹೀಗೆ 4 ವರ್ಷದ ಹಿಂದೆ ಅಂದ್ರೆ 2022 ಫೆಬ್ರವರಿ ತಿಂಗಳಲ್ಲಿ ಶುರುವಾದ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಆಗಿನ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಮಧ್ಯಪ್ರವೇಶ ಮಾಡಿತ್ತು. ಉಕ್ರೇನ್ ಬೆನ್ನಿಗೆ ನಿಂತು ಶಸ್ತ್ರಾಸ್ತ್ರ ಪೂರೈಕೆ ಕೂಡ ಮಾಡಿತ್ತು, ಇದೇ ವೇಳೆ ಅಮೆರಿಕದ ಮಾತು ಕೇಳಿ ಯುರೋಪ್ ದೇಶಗಳು ಮತ್ತು ನ್ಯಾಟೋ ಒಕ್ಕೂಟದ ದೇಶಗಳು ಕೂಡ ಉಕ್ರೇನ್ ಬೆನ್ನಿಗೆ ನಿಂತು ಲಕ್ಷಾಂತರ ಕೋಟಿ ರೂಪಾಯಿ ಸಹಾಯ ಮಾಡಿದ್ದಾರೆ. ಹೀಗಿದ್ದಾಗ ಜೋ ಬೈಡನ್ ಸರ್ಕಾರ ಬಿದ್ದು ಹೋಗಿ, ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಉಕ್ರೇನ್ ವಿರುದ್ಧವೇ ಅಮೆರಿಕ ನಿಂತಿದೆ ಈಗ. ಇಂತಹ ಸ್ಥಿತಿಯಲ್ಲಿ ರಷ್ಯಾ ಬೆನ್ನಿಗೆ ಪರೋಕ್ಷವಾಗಿ ಟ್ರಂಪ್ ಸರ್ಕಾರ ನಿಂತಿದ್ದು, ಉಕ್ರೇನ್ ಸೋಲಿಗೆ ಹಳ್ಳ ತೋಡಿದ ಆರೋಪ ಕೂಡ ಇದೆ. ಆದರೆ ಇಂತಹ ಸ್ಥಿತಿಯಲ್ಲಿ ಏನೂ ಮಾಡಲಾಗದ ಅಸಹಾಯಕರಂತೆ ನ್ಯಾಟೋ ಒಕ್ಕೂಟದ ನಾಯಕರು ವಿಲವಿಲ ಕೈಕೈ ಹಿಸುಕಿಕೊಂಡು ಒದ್ದಾಡುತ್ತಿದ್ದಾರೆ.

ನ್ಯಾಟೋ ರಾಷ್ಟ್ರಗಳಿಗೆ ರೆಸ್ಪೆಕ್ಟ್ ಇಲ್ಲ!
ಡೊನಾಲ್ಡ್ ಟ್ರಂಪ್ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುವುದು, ಅದನ್ನ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ಫೇಮಸ್. ಅಕಸ್ಮಾತ್ ತಮ್ಮ ಹೇಳಿಕೆ ದೊಡ್ಡ ವಿವಾದ ಸೃಷ್ಟಿ ಮಾಡಿದರೆ ತಕ್ಷಣ ಉಲ್ಟಾ ಹೊಡೆದು, ನಾನು ಹಂಗೆ ಹೇಳೇ ಇಲ್ಲ ಅಂತಾ ಸುಳ್ಳು ಹೇಳ್ತಾರೆ ಎಂಬ ಆರೋಪ ಕೂಡ ಪದೇ ಪದೇ ಕೇಳಿ ಬರುತ್ತದೆ ಬಿಡಿ. ಹೀಗಿದ್ದಾಗ ನ್ಯಾಟೋ ದೇಶಗಳ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಟ್ರಂಪ್, ಅಲ್ಲದೆ ಇಡೀ ಜಗತ್ತು ತಿರುಗಿ ನೋಡುವ ನ್ಯಾಟೋ ಮಿಲಿಟರಿ ಒಕ್ಕೂಟವನ್ನು ಸ್ವಾರ್ಥದ ಒಕ್ಕೂಟ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೂಡ ಇದೆ. ಹೀಗೆಲ್ಲಾ ನ್ಯಾಟೋ ಒಕ್ಕೂಟದ ಬುಡವೇ ಅಲುಗಾಡುತ್ತಿದ್ದರೂ, ಈಗ ಇರುವ ಗಂಭೀರ ಪರಿಸ್ಥಿತಿಯಲ್ಲಿ ನ್ಯಾಟೋ ಒಕ್ಕೂಟದ ನಾಯಕರು ಬಾಯಿ ಬಿಡುವುದಕ್ಕೂ ಸಾವಿರ ಬಾರಿ ಯೋಚಿಸುವ ವಾತಾವರಣ ಇದೆ.

ಇದು ಸಾಲದು ಎನ್ನುವಂತೆ ದಿಢೀರ್ ಇರಾನ್ ಮೇಲೆ ಟ್ರಂಪ್ ಅವರ ಆಡಳಿತ ದಾಳಿ ನಡೆಸುವ ಭೀತಿಯೂ ಈಗ ನ್ಯಾಟೋ ಒಕ್ಕೂಟವನ್ನು ಕಾಡುತ್ತಿದೆ. ಅಕಸ್ಮಾತ್ ಇದು ನಿಜವಾದರೆ, ಭವಿಷ್ಯದಲ್ಲಿ ನ್ಯಾಟೋ ಒಕ್ಕೂಟ ಪೂರ್ಣ ಹೊಡೆದು ಹೋಗುವ ಮತ್ತು ಒಕ್ಕೂಟದಿಂದ ಹಲವು ಬಲಿಷ್ಠ ದೇಶಗಳು ಹೊರಗೆ ಬರುವ ಗಂಭೀರ ವಾತಾವರಣ ಕೂಡ ಈಗ ನಿರ್ಮಾಣ ಆಗುತ್ತಿದೆ. ಇಷ್ಟೆಲ್ಲದರ ನಡುವೆ ಅಮೆರಿಕದ ಪಡೆಗಳು ಇರಾನ್ ಹಡಗುಗಳ ಮೇಲೆ ಮತ್ತೆ ದಾಳಿ ನಡೆಸಿರುವ ಆರೋಪ ಮಾಡಲಾಗುತ್ತಿದೆ.

ಅಕಸ್ಮಾತ್ ಈ ಬಾರಿ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ 2ನೇ ಬಾರಿಗೆ ಯುದ್ಧ ಸಾರಿದರೆ, ಆಗ ನ್ಯಾಟೋ ಒಕ್ಕೂಟದ ದೇಶಗಳು ತಕ್ಷಣ ಬೆಂಬಲ ನೀಡುವ ಅನಿವಾರ್ಯತೆಗೆ ಸಿಲುಕಲಿವೆ. ಇಂತಹ ಸೂಕ್ಷ್ಮ ವಾತಾವರಣದಲ್ಲಿ ಇರಾನ್ ವಿರುದ್ಧದ ಬಡಿದಾಟದಲ್ಲಿ ಅಮೆರಿಕಗೆ ನ್ಯಾಟೋ ದೇಶಗಳು ಬೆಂಬಲ ನೀಡದೇ ಇದ್ದರೆ ಈಗಿನ ಸೂಕ್ಷ್ಮ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ ಅಂತಿದ್ದಾರೆ ಅಂತಾರಾಷ್ಟ್ರೀಯ ವಿಮರ್ಶಕರು…

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ