LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಲಿವುಡ್ ಅಖಾಡಕ್ಕೆ ಇಳಿದ ದಿಶಾ ಪಟಾನಿ: ಆಕ್ಷನ್ ಪ್ಯಾಕ್ಡ್ ‘ದಿ ಪೋರ್ಟಲ್ ಆಫ್ ಫೋರ್ಸ್’ ಟ್ರೈಲರ್ ಔಟ್!

ಮುಂಬೈ: ಬಾಲಿವುಡ್‌ನ ಗ್ಲಾಮರಸ್ ನಟಿ ದಿಶಾ ಪಟಾನಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅವರ ಬಹುನಿರೀಕ್ಷಿತ ಹಾಲಿವುಡ್ ಚೊಚ್ಚಲ ಚಿತ್ರ ‘ದಿ ಪೋರ್ಟಲ್ ಆಫ್ ಫೋರ್ಸ್’ (The Portal of Force) ಸಿನಿಮಾದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಸಿನಿರಸಿಕರ ಗಮನ ಸೆಳೆಯುತ್ತಿದೆ. ಇದು ಒಂದು ಸುಪರ್ ನ್ಯಾಚುರಲ್ ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ದಿಶಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ದಿಶಾ ಪಟಾನಿ ಅವರು ಕೆವಿನ್ ಸ್ಪೇಸಿ, ಟೈರಿಸ್ ಗಿಬ್ಸನ್ ಮತ್ತು ಡಾಲ್ಫ್ ಲುಂಡ್‌ಗ್ರೆನ್ ಅವರಂತಹ ಘಟಾನುಘಟಿ ಹಾಲಿವುಡ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಲಾಡೋ ಒಖೋಟ್ನಿಕೋವ್ ಸೃಷ್ಟಿಸಿರುವ ‘ಸ್ಟಾಟಿಗಾರ್ಡ್ಸ್ ವರ್ಸಸ್ ಹೊಲಿಗಾರ್ಡ್ಸ್’ ಎಂಬ ಹೊಸ ಸಿನಿಮಾ ಜಗತ್ತಿನ ಮೊದಲ ಭಾಗ ಇದಾಗಿದೆ. ಟ್ರೈಲರ್‌ನಲ್ಲಿ ದಿಶಾ ಅವರು ‘ಜೆಸ್ಸಿಕಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡು ಪುರಾತನ ಶಕ್ತಿಗಳ ನಡುವಿನ ಸಂಘರ್ಷದಲ್ಲಿ ಸಿಲುಕುವ ‘ದಿ ಚೋಸನ್ ಒನ್’ (ಆಯ್ದ ವ್ಯಕ್ತಿ) ಆಗಿ ಮಿಂಚಿದ್ದಾರೆ.

ತಮ್ಮ ಮೊದಲ ಹಾಲಿವುಡ್ ಅನುಭವದ ಬಗ್ಗೆ ಮಾತನಾಡಿರುವ ದಿಶಾ, “ಈ ವಿಶೇಷ ಪ್ರಾಜೆಕ್ಟ್‌ಗಾಗಿ ನಾನು ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅಂತರಾಷ್ಟ್ರೀಯ ಮಟ್ಟದ ಸಿನಿಮಾದಲ್ಲಿ ನಟಿಸುವುದು ರೋಮಾಂಚನಕಾರಿ ಮತ್ತು ಸವಾಲಿನ ಕೆಲಸವಾಗಿತ್ತು. ಕಥೆ ಹೇಳುವ ರೀತಿಗೆ ಭಾಷೆ ಮತ್ತು ಭೂಗೋಳದ ಹಂಗಿಲ್ಲ ಎಂಬುದು ಈ ಚಿತ್ರದಲ್ಲಿ ನಟಿಸಿದಾಗ ನನಗೆ ಅರಿವಾಯಿತು” ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ಖ್ಯಾತ ನಟ ಕೆವಿನ್ ಸ್ಪೇಸಿ ಅವರು ಎರಡು ದಶಕಗಳ ನಂತರ ಈ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅಂದಹಾಗೆ ದಿಶಾ ಪಟಾನಿ ಅವರು ಹಾಲಿವುಡ್ ಮಾತ್ರವಲ್ಲದೆ, ಬಾಲಿವುಡ್‌ನ ‘ಆವಾರಾಪನ್ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾವು ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಕರ್ನಾಟಕದಲ್ಲಿ ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ, ಪ್ರಧಾನಿ ಮೋದಿಯವರಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ದೇಶಾದ್ಯಂತ ಶಾಲೆಗಳಲ್ಲಿ ಭಾರತೀಯ ಭಾಷಾ ಬೇಸಿಗೆ ಶಿಬಿರ ಆಯೋಜನೆಪ್ರಧಾನಿ ಮೋದಿಗೆ ತಮಿಳುನಾಡು ನೂತನ ಸಿಎಂ ವಿಜಯ್ ಕೃತಜ್ಞತೆ ಸಲ್ಲಿಕೆBIG NEWS: ವಿಧಾನಸಭಾ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಮುಂದೂಡಿಕೆCBSE 12th Result 2026: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶಕ್ಕೆ ಕ್ಷಣಗಣನೆ ಡಿಜಿಲಾಕರ್‌ನಲ್ಲಿ ಬಂತು ಬಿಗ್ ಅಪ್‌ಡೇಟ್: ರಿಸಲ್ಟ್ ನೋಡುವುದು ಹೇಗೆ?ಸಚಿವ ಡಿ.ಸುಧಾಕರ್ ಅಂತಿಮ ದರ್ಶನ ಪಡೆದು ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ಮೇ 11ರಂದು ಅಪ್ರೆಂಟಿಶಿಪ್ ಮೇಳ: ಖಾಸಗಿ ಕಂಪನಿಗಳಿಂದ ಅಭ್ಯರ್ಥಿಗಳಿಗೆ ಸಂದರ್ಶನನಾವು ಕಿತ್ತಾಡುತ್ತಿಲ್ಲ, ಸಿನಿಮಾ ಗೆಲುವಿಗೆ ಶ್ರಮಿಸುತ್ತಿದ್ದೇವೆ: ಜಗಳದ ಸುದ್ದಿಗೆ ಸಾರಾ-ರಾಕುಲ್ ಸ್ಪಷ್ಟನೆತಾಯ್ತನದ ನಂತರದ ಬದಲಾವಣೆ ಕಂಡು ಭಾವುಕರಾದ ಕಿಯಾರಾ ಅಡ್ವಾಣಿ: ಮಗಳು ಹುಟ್ಟಿದ ಮೇಲೆ ಬದುಕು ಬದಲಾಯಿತು ಎಂದ ನಟಿಆಂಧ್ರಪ್ರದೇಶ ಎಫ್‌ಡಿಸಿ ನೂತನ ಅಧ್ಯಕ್ಷರಾಗಿ ಭರತ್ ಭೂಷಣ್ ನೇಮಕ: ಚಿತ್ರರಂಗದ ಸಮಸ್ಯೆಗಳಿಗೆ ಸಿಗಲಿದೆಯೇ ಪರಿಹಾರ?