LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ ಅಜೇಯ ಶತಕಕ್ಕೆ ಕೆಕೆಆರ್ ಕಂಗಾಲು

ರಾಯಪುರ: ವಿರಾಟ್ ಕೊಹ್ಲಿ ಅವರ ಅಮೋಘ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡ ಬುಧವಾರ ಕೊಲ್ಕತ್ತಾ ವಿರುದ್ಧ ಗೆದ್ದು ಬೀಗಿದೆ.

12 ಪಂದ್ಯದಗಳಲ್ಲಿ 8ನೇ ಗೆಲುವು ದಾಖಲಿಸಿದ ಆರ್.ಸಿ.ಬಿ. ಮತ್ತೆ ಅಗ್ರಸ್ಥಾನಕ್ಕೇರಿದೆ. ಪ್ಲೇ ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಕೆಕೆಆರ್ 11 ಪಂದ್ಯಗಳಲ್ಲಿ ಆರನೇ ಸೋಲು ಕಂಡಿದ್ದು, ಇನ್ನೂ ಮೂರರಲ್ಲಿ ಜಯಗಳಿಸಿದರೂ ಪ್ಲೇ ಆಫ್ ಗೇರುವುದು ಕಷ್ಟ.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 4 ವಿಕೆಟ್ ಗೆ 192 ರನ್ ಗಳಿಸಿತು. ರಘುವಂಶಿ 71, ರಿಂಕು ಸಿಂಗರ್ ಅಜೇಯ 49, ಗ್ರೀನ್ 32 ರನ್ ಗಳಿಸಿದರು. ಬೃಹತ್ ಮೊತ್ತ ಬೆನ್ನತ್ತಿದ ಆರ್.ಸಿ.ಬಿ. 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ವಿರಾಟ್ ಕೊಹ್ಲಿ ಅಜೇಯ 105, ದೇವದತ್ 39 ರನ್ ಸಿಡಿಸಿದರು.

ವಿರಾಟ್ ಕೊಹ್ಲಿ ದಾಖಲೆ

ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಒಂಬತ್ತನೇ ಶತಕ ಬಾರಿಸಿರುವುದು ದಾಖಲೆಯಾಗಿದೆ. ಜೋಸ್ ಬಟ್ಲರ್ 7, ಕೆಎಲ್ ರಾಹುಲ್, ಗೇಲ್ ತಲಾ 6, ಸ್ಯಾಮ್ಸನ್ 5 ಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ಟಿ20ಯಲ್ಲಿ 10 ಶತಕ ಬಾರಿಸಿದ್ದಾರೆ. ಇದು ಮೂರನೇ ಜಂಟಿ ಗರಿಷ್ಠವಾಗಿದೆ. ಕ್ರಿಸ್ ಗೇಲ್ 22, ಬಾಬರ್ ಆಜಮ್ 13, ವಾರ್ನರ್ 10 ಶತಕ ಸಿಡಿಸಿದ್ದಾರೆ.

ಐಪಿಎಲ್ ನ 19 ಆವೃತ್ತಿಗಳಲ್ಲಿ 12ರಲ್ಲಿ ವಿರಾಟ್ ಕೊಹ್ಲಿ 400ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಈ ಬಾರಿ ಅವರು 484 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಟಿ20ಯಲ್ಲಿ 14 ಸಾವಿರ ರನ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ, ವಿಶ್ವದ ಆರನೇ ಕ್ರಿಕೆಟಿಗರಾಗಿದ್ದಾರೆ. ಕೊಹ್ಲಿ 409 ಇನ್ನಿಂಗ್ಸ್ ಗಳಲ್ಲಿ ಈ ಮೈಲುಗಲ್ಲು ತಲುಪಿದ್ದು, ಅತಿ ವೇಗದ 14 ಸಾವಿರ ರನ್ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ ಈ ಮೈಲಿಗಲ್ಲು ತಲುಪಲು 423 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿದ್ಧರಾಮಯ್ಯ ಮುನಿಸಿನಿಂದ ಕೈತಪ್ಪಿದ ಸಚಿವ ಸ್ಥಾನ..? ಮನವೊಲಿಸಲು ಜಮೀರ್ ಅಹ್ಮದ್ ಕಸರತ್ತುಇಸ್ರೇಲ್, ಅಮೆರಿಕ ದಾಳಿಯಲ್ಲಿ ಮೃತಪಟ್ಟ 131 ದಿನಗಳ ನಂತರ ಜು. 9ರಂದು ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆSHOCKING: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವುವಿವಾಹಿತೆಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್, ಬೆತ್ತಲೆ ಚಿತ್ರ ಸೆರೆಹಿಡಿದು ಬ್ಲಾಕ್ ಮೇಲ್BREAKING: ಇನ್ನು ಯಾರೂ ಒಂದು ರೂಪಾಯಿ ಲಂಚ ಕೊಡಬೇಕಿಲ್ಲ: ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸಲು ಸಿಎಂ ಡಿಕೆ ಮಹತ್ವದ ಹೆಜ್ಜೆಶಿವಮೊಗ್ಗ: ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿ ಶವ ಪತ್ತೆಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣ: ಚಿನ್ನಯ್ಯನ ಬ್ರೇನ್ ಮ್ಯಾಪಿಂಗ್ ಹಾಗೂ ರಿಟ್ ಅರ್ಜಿ ತನಿಖೆ ನಡೆಸುವಂತೆ SITಗೆ ಗಿರೀಶ್ ಮಟ್ಟಣ್ಣನವರ್ ದೂರುBREAKING: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಯೋಜನೆ ಸೌಲಭ್ಯ ಪಡೆಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಸಿಎಂ ಡಿಕೆ ಮಾಹಿತಿದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಕೋಟ್ಯಂತರ ರೂ ಅಕ್ರಮ ಫಂಡಿಂಗ್ ಆರೋಪ: ಕರ್ನಾಟಕದ ನಾಲ್ವರು ಸೇರಿ 7 ಜನರ ವಿರುದ್ಧ FIR ದಾಖಲುಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಯೂ  ತಿಳಿಯಲೇಬೇಕಾದ ಸೀಕ್ರೆಟ್ ಪಿಎಫ್ ಕಟ್ ಆದ್ರೆ ಸಿಗುತ್ತೆ ₹7 ಲಕ್ಷದ ಬಿಗ್ ಇನ್ಶೂರೆನ್ಸ್ ಬೆನಿಫಿಟ್