ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ 2026ರಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ವಿಭಿನ್ನ ಫ್ಯಾಶನ್ ಮೂಲಕ ಭಾರತೀಯ ಪರಂಪರೆ ಮತ್ತು ಕರಕುಶಲತೆಯನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದ್ದಾರೆ. ತಮ್ಮ ಮುಂಬರುವ ಹೊಸ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಗಾಗಿ ಫ್ರಾನ್ಸ್‌ನ ಕ್ಯಾನಿನ್‌ಗೆ ಭೇಟಿ ನೀಡಿರುವ ಅವರು, ಗುಜರಾತ್‌ನ ಸಾಂಪ್ರದಾಯಿಕ ಪಟೋಲಾ ಶೈಲಿಯಿಂದ ಪ್ರೇರಿತವಾದ ಅತ್ಯಾಕರ್ಷಕ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಉಡುಪನ್ನು ಸಿದ್ಧಪಡಿಸಲು ಕುಶಲಕರ್ಮಿಗಳು ನೂರಾರು ಗಂಟೆಗಳ ಕಾಲ ಶ್ರಮಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭಾರತೀಯ ಕರಕುಶಲತೆಗೆ ಗೌರವ ರೆಡ್ ಕಾರ್ಪೆಟ್‌ನ ಸಾಂಪ್ರದಾಯಿಕ ಗೌನ್‌ಗಳ ಶೈಲಿಯಿಂದ ಹೊರಬಂದ ಮೌನಿ ರಾಯ್, ‘ದಿ ಹೌಸ್ ಆಫ್ ಪಟೋಲಾ’ ವಿನ್ಯಾಸಗೊಳಿಸಿದ ಕಾಂಟೆಂಪರರಿ ಶೈಲಿಯ ಬ್ಯಾಕ್‌ಲೆಸ್ ಗೌನ್ ಧರಿಸಿದ್ದರು. ಗುಜರಾತ್‌ನ ಐತಿಹಾಸಿಕ ಜವಳಿ ಸಂಸ್ಕೃತಿಯನ್ನು ಬಿಂಬಿಸುವ ಮಲ್ಟಿಕಲರ್ ಪಟೋಲಾ ಕಸೂತಿ ಕೆಲಸವನ್ನು ಈ ಗೌನ್ ಒಳಗೊಂಡಿತ್ತು. ಆಧುನಿಕ ವಿನ್ಯಾಸದೊಂದಿಗೆ ಸಾಂಪ್ರದಾಯಿಕ ಕಲೆಯ ಈ ಸಮ್ಮಿಲನವು ಮೌನಿ ರಾಯ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಸ್ವತಃ ಮೌನಿ ರಾಯ್ ಅವರೇ ಬಹಿರಂಗಪಡಿಸಿರುವಂತೆ, ಭಾರತೀಯ ಕುಶಲಕರ್ಮಿಗಳು ಈ ಉಡುಪಿನ ಜರಿ ಮತ್ತು ಕಸೂತಿ ಕೆಲಸವನ್ನು ಪೂರ್ಣಗೊಳಿಸಲು ಬರೋಬ್ಬರಿ 300 ಗಂಟೆಗಳ ಕಾಲ ಶ್ರಮಿಸಿದ್ದಾರೆ.
ಸರಳ ಮತ್ತು ಆಕರ್ಷಕ ಸ್ಟೈಲಿಂಗ್ ಈ ಭಾರಿ ಕಸೂತಿ ಕೆಲಸದ ಉಡುಪಿಗೆ ತಕ್ಕಂತೆ ಮೌನಿ ರಾಯ್ ತಮ್ಮ ಮೇಕಪ್ ಮತ್ತು ಸ್ಟೈಲಿಂಗ್ ಅನ್ನು ಸರಳವಾಗಿ ಇಟ್ಟುಕೊಂಡಿದ್ದರು. ಬಿಳಿ ಬಣ್ಣದ ಹೈ ಹೀಲ್ಸ್ ಧರಿಸಿದ್ದ ಅವರು, ಕಣ್ಣುಗಳಿಗೆ ಕಾಡಿಗೆ ಮತ್ತು ವಿಂಗ್ಡ್ ಐಲೈನರ್ ಹಚ್ಚಿ ಮೆರುಗು ನೀಡಿದ್ದರು. ಸೈಡ್ ಪಾರ್ಟೆಡ್ ಹೇರ್ ಸ್ಟೈಲ್ ಜೊತೆಗೆ ಪಿಂಕ್ ಲಿಪ್ಸ್ಟಿಕ್ ಧರಿಸಿ ನೈಸರ್ಗಿಕ ಸೌಂದರ್ಯಕ್ಕೆ ಆದ್ಯತೆ ನೀಡಿದ್ದರು.
ಮೊದಲ ದಿನದ ವೆಸ್ಟರ್ನ್ ಲುಕ್ ಇದಕ್ಕೂ ಮುನ್ನ ಕಾನ್ ಉತ್ಸವದ ಮೊದಲ ದಿನ ಮೌನಿ ರಾಯ್ ಸಂಪೂರ್ಣವಾಗಿ ವೆಸ್ಟರ್ನ್ ಶೈಲಿಯ ಬ್ಲ್ಯಾಕ್ ಅಂಡ್ ವೈಟ್ ಮಿನಿ ಡ್ರೆಸ್ ಧರಿಸಿ ಕಣ್ಮನ ಸೆಳೆದಿದ್ದರು. ಬಿಳಿ ಬಣ್ಣದ ಹಾಲ್ಟರ್ ನೆಕ್ ಕಾಲರ್ ಹೊಂದಿದ್ದ ಈ ಶಾರ್ಟ್ ಡ್ರೆಸ್ ಜೊತೆಗೆ ಅವರು ಕಪ್ಪು ಬಣ್ಣದ ಓವರ್‌ಸೈಜ್ಡ್ ಟ್ರೆಂಚ್ ಕೋಟ್ ಧರಿಸಿದ್ದರು. ಬೂಟುಗಳು ಮತ್ತು ವಿಶಿಷ್ಟ ಮೇಕಪ್ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಮೌನಿ, ಎರಡನೇ ದಿನ ಮಾತ್ರ ಭಾರತೀಯ ಸಂಸ್ಕೃತಿಯ ಉಡುಪಿನ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆಯನ್ನು ಎತ್ತಿಹಿಡಿದಿದ್ದಾರೆ.