LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಸ್ಟ್ರೇಲಿಯಾಗೆ ಭಾರೀ ಮುಖಭಂಗ: ಪಾಕಿಸ್ತಾನದ ಬಳಿಕ ಬಾಂಗ್ಲಾದೇಶದ ವಿರುದ್ಧವೂ ಸರಣಿ ಸೋತು ಮುಖಭಂಗಕ್ಕೊಳಗಾದ ಹಾಲಿ ವಿಶ್ವಕಪ್ ಚಾಂಪಿಯನ್ಸ್!

ಇತ್ತೀಚೆಗಷ್ಟೆ ಪಾಕಿಸ್ತಾನದ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿದ್ದ ಏಕದಿನ ಹಾಲಿ ವಿಶ್ವಕಪ್ ಚಾಂಪಿಯನ್ಸ್ ಆಸ್ಟ್ರೇಲಿಯನ್ನರು ಇದೀಗ ಬಾಂಗ್ಲಾದೇಶದ ವಿರುದ್ಧವೂ ಸಹ ಏಕದಿನ ಸರಣಿ ಸೋಲುವ ಮೂಲಕ ಭಾರೀ ಮುಖಭಂಗವನ್ನು ಅನುಭವಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 1-2 ಅಂತರದಿಂದ ಸೋತಿದ್ದ ಆಸ್ಟ್ರೇಲಿಯಾ ಸದ್ಯ ಬಂಗ್ಲಾದೇಶದಲ್ಲಿ ಬೀಡುಬಿಟ್ಟಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿ ಮುಖಭಂಗಕ್ಕೊಳಗಾಗಿದೆ.

ಜೂನ್ 9ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ 86 ರನ್‌ಗಳ ಹೀನಾಯ ಸೋಲುಂಡಿದ್ದ ಕಾಂಗರೂಗಳು ನಿನ್ನೆ ( ಜೂನ್ 11 ) ನಡೆದ ಎರಡನೇ ಪಂದ್ಯದಲ್ಲಿ 5 ವಿಕೆಟ್‌ಗಳ ಪರಾಭವ ಅನುಭವಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಳೆ ಬಂದ ಕಾರಣ 42 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್‌ ದಾಖಲಿಸಿತು. ಮಳೆಯ ಕಾರಣ ಬಾಂಗ್ಲಾದೇಶಕ್ಕೆ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್‌ಗಳಲ್ಲಿ 192 ರನ್‌ ಬಾರಿಸಬೇಕಾಯಿತು. ಬಾಂಗ್ಲಾದೇಶ 35 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಸರಣಿಯನ್ನು ವಶಪಡಿಸಿಕೊಂಡಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಮ್ಯಾಥ್ಯೂ ಶಾರ್ಟ್, ಕೂಪರ್ ಕೊನೊಲ್ಲಿ ಹಾಗೂ ಮ್ಯಾಟ್ ರೆನ್ಷಾ ಮೂವರೂ ಸಹ ಡಕ್‌ಔಟ್ ಆಗುವ ಮೂಲಕ ತಂಡ ಯಾವುದೇ ಕಲೆಹಾಕದೇ ಮೂರು ವಿಕೆಟ್ ಕಳೆದುಕೊಂಡು ಅತಿಕೆಟ್ಟ ಆರಂಭ ಪಡೆದುಕೊಂಡಿತು. ಬೆನ್ನಲ್ಲೇ ಅಲೆಕ್ಸ್ ಕ್ಯಾರಿ 13, ಜೋಶ್ ಇಂಗ್ಲಿಸ್ 34ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಕ್ಯಾಮರಾನ್ ಗ್ರೀನ್ 25 ರನ್ ಗಳಿಸಿದರೆ. ಮಾರ್ನಸ್ ಲ್ಯಾಬುಷೇನ್ ಅಜೇಯ 55 ಹಾಗೂ ಕ್ಷೇವಿಯರ್ ಬಾರ್ಟ್ಲೆಟ್ 52 ರನ್ ಬಾರಿಸಿ ತಂಡಕ್ಕೆ ಸುಧಾರಣೆ ತಂದರು. ಆಡಂ ಜಂಪಾ ಡಕ್‌ಔಟ್ ಹಾಗೂ ನಾಥನ್ ಎಲ್ಲಿಸ್ ಅಜೇಯ 2 ರನ್ ಗಳಿಸಿದರು.

ಬಾಂಗ್ಲಾದೇಶದ ಪರ ಟಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜರ್ ರಹ್ಮಾನ್ ತಲಾ ಮೂರು ವಿಕೆಟ್ ಪಡೆದರೆ, ತನ್ವಿರ್ ಇಸ್ಲಾಂ ಎರಡು ವಿಕೆಟ್ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್: ತಂಡದ ಪರ ತನ್ಜಿದ್ ಹಸನ್ ತಮಿಮ್ ಡಕ್‌ಔಟ್, ಸೌಮ್ಯ ಸರ್ಕಾರ್ 42, ನಜ್ಮುಲ್ ಹೊಸೈನ್ ಶಾಂಟೊ 41, ಲಿಟನ್ ದಾಸ್ 21, ಮೊಸದೆಕ್ ಹೊಸೈನ್ 15, ಮೆಹೆದಿ ಹಸನ್ ಅಜೇಯ 22 ಹಾಗೂ ತೌಹಿದ್ ಹೃದಯ್‌ ಅಜೇಯ 40 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಕ್ಷೇವಿಯರ್ ಬಾರ್ಟ್ಲೆಟ್, ರಿಲೆ ಮೆರೆಡಿತ್, ಆಡಂ ಜಂಪಾ, ಮ್ಯಾಟ್ ರೆನ್ಷಾ ಹಾಗೂ ಕ್ಯಾಮರಾನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಬಿಡದಿ ರೈತರು ಅಸಲಿ ರೈತರೋ ಅಲ್ಲವೋ? ನೊಂದ ಹಳ್ಳಿಗಳಿಗೆ ಬನ್ನಿ, ನಾನು ಬರುತ್ತೇನೆ: ಸಿಎಂ ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಸವಾಲುಮೋಹನ್ ಲಾಲ್ ಅಭಿನಯದ ದೃಶ್ಯಂ-3 ಸಿನಿಮಾದ ಕಾರಿನ ನಂಬರ್ ತಂದ ಕಿರಿಕಿರಿ: ದೂರು ನೀಡಿದ ಇಡುಕ್ಕಿ ರೈತ: ಏನಿದು ವಿವಾದ?ಕರ್ನಾಟಕದ ನೀರಿನ ಹಕ್ಕಿಗಾಗಿ ಡಿಕೆಶಿ ಹೋರಾಟ: ಕೇಂದ್ರ ಸಚಿವರಿಗೆ ಮಹತ್ವದ ಪ್ರಸ್ತಾವನೆಮೇಕ್ ಇನ್ ಇಂಡಿಯಾ ಮತ್ತಷ್ಟು ಬಲ: ಉದ್ಯೋಗ, ಸಂಶೋಧನೆಗೆ ಕೇಂದ್ರದ ಭಾರಿ ಒತ್ತು ಎಂದ ಹೆಚ್‌ಡಿಕೆಬೆಂಗಳೂರು ಗ್ರಾಮಾಂತರದಲ್ಲಿ ಪಂಚಾಯ್ತಿ ಆಸ್ತಿ ರಕ್ಷಣೆಗೆ ಹೊಸ ಕ್ರಮ12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ | WATCH VIDEOವಿಶ್ವಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸ್ಥಗಿತ: ಲಕ್ಷಾಂತರ ಬಳಕೆದಾರರಿಂದ ದೂರುಮಹಿಳೆಯರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಬೆಂಗಳೂರು ಟ್ರಾಫಿಕ್‌ಗೆ ಹೊಸ ಪ್ಲ್ಯಾನ್: ಸುರಕ್ಷತೆ, ನಿಯಮ ಜಾರಿ ಮತ್ತು ಪೊಲೀಸರ ಕಾರ್ಯಕ್ಷಮತೆಗೆ ಒತ್ತುಕಾಡುಗೋಡಿ ಮಗು ಸಾವಿನ ಪ್ರಕರಣ: ಕರ್ತವ್ಯ ಲೋಪಕ್ಕೆ ಮೂವರು ಪೊಲೀಸ್ ಸಿಬ್ಬಂದಿ ಅಮಾನತು