LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ವಾಟ್ಸಾಪ್’ ನಲ್ಲಿ ಮೊಬೈಲ್ ಸಂಖ್ಯೆ ಕಾಣಿಸದೇ ಇತರರೊಂದಿಗೆ ಚಾಟ್ ಮಾಡಬಹುದು.. ಹೇಗೆ ಗೊತ್ತೇ ?

ಪ್ರಸ್ತುತ ಕಾಲದಲ್ಲಿ ಬಹುತೇಕ ಎಲ್ಲರೂ ವಾಟ್ಸಾಪ್ ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಈ ಆ್ಯಪ್ ಕಡ್ಡಾಯವಾಗಿ ಇರುತ್ತದೆ. ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್ ನಿರಂತರವಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದ್ದು, ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ತಂದಿದೆ.

ಇನ್ನು ಮುಂದೆ ನಿಮ್ಮ ಮೊಬೈಲ್ ಸಂಖ್ಯೆ ಇತರರಿಗೆ ಕಾಣಿಸದೇ ವಾಟ್ಸಾಪ್‌ನಲ್ಲಿ ಚಾಟ್ ಮಾಡಬಹುದು. ಅದೂ ಯೂಸರ್‌ನೇಮ್ (Username) ಮೂಲಕ. ಇನ್‌ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಮಾದರಿಯ ಸಾಮಾಜಿಕ ಜಾಲತಾಣಗಳಲ್ಲಿ ಇರುವಂತೆ, ಈಗ ವಾಟ್ಸಾಪ್‌ನಲ್ಲೂ ಯೂಸರ್‌ನೇಮ್ ಆಧಾರಿತ ಸಂಪರ್ಕ ವ್ಯವಸ್ಥೆ ಬರಲಿದೆ.

ಈ ವೈಶಿಷ್ಟ್ಯದ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಇತರರಿಗೆ ಗೋಚರಿಸುವುದಿಲ್ಲ. ಇದರಿಂದ ವೈಯಕ್ತಿಕ ಮಾಹಿತಿಯ ರಕ್ಷಣೆ ಹೆಚ್ಚಾಗುವುದರ ಜೊತೆಗೆ, ಮೊಬೈಲ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ನಡೆಯುವ ಸೈಬರ್ ಅಪರಾಧಗಳಿಗೂ ತಡೆ ಬೀಳುವ ಸಾಧ್ಯತೆ ಇದೆ.

ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯ

ಪ್ರಸ್ತುತ ಈ ಫೀಚರ್ ವಾಟ್ಸಾಪ್‌ನ ಬೀಟಾ ಬಳಕೆದಾರರು ಹಾಗೂ ಕೆಲ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಇದು ಹಂತ ಹಂತವಾಗಿ ಲಭ್ಯವಾಗಲಿದೆ.

ಇಲ್ಲಿಯವರೆಗೆ ಯಾರನ್ನಾದರೂ ವಾಟ್ಸಾಪ್‌ನಲ್ಲಿ ಸಂಪರ್ಕಿಸಲು ಮೊಬೈಲ್ ಸಂಖ್ಯೆ ಅಗತ್ಯವಾಗಿತ್ತು. ಆದರೆ ಈ ಹೊಸ ಫೀಚರ್ ಮೂಲಕ ಯೂಸರ್‌ನೇಮ್ ಬಳಸಿ ನೇರವಾಗಿ ಚಾಟ್ ಮಾಡಬಹುದು. ಹಾಗೆಯೇ ನಿಮ್ಮ ಯೂಸರ್‌ನೇಮ್ ಮೂಲಕ ಇತರರು ಕೂಡ ನಿಮ್ಮನ್ನು ಸಂಪರ್ಕಿಸಬಹುದು.

ಯೂಸರ್‌ನೇಮ್ ಹೇಗೆ ಸೃಷ್ಟಿಸಬೇಕು?

  • ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ತೆರೆಯಿರಿ.
  • Settings ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Profile Name ಆಯ್ಕೆಮಾಡಿ.
  • ಖಾತೆ (Account) ವಿವರಗಳಿಗೆ ಹೋಗಿ.
  • ಅಲ್ಲಿ ಇರುವ Username ಆಯ್ಕೆಯನ್ನು ಆರಿಸಿ.
  • ನಿಮಗೆ ಬೇಕಾದ ಯೂಸರ್‌ನೇಮ್ ಅನ್ನು ನಮೂದಿಸಿ.
  • ಯೂಸರ್‌ನೇಮ್ 3 ರಿಂದ 35 ಅಕ್ಷರಗಳ ನಡುವೆ ಇರಬೇಕು.
  • ಕನಿಷ್ಠ ಒಂದು ಅಕ್ಷರ, ಒಂದು ಸಂಖ್ಯೆ ಮತ್ತು ಒಂದು ವಿಶೇಷ ಚಿಹ್ನೆ (Special Character) ಇರಬೇಕು.
  • ನೀವು ಆಯ್ಕೆ ಮಾಡಿದ ಯೂಸರ್‌ನೇಮ್ ಲಭ್ಯವಿದೆಯೇ ಎಂದು ವಾಟ್ಸಾಪ್ ಪರಿಶೀಲಿಸುತ್ತದೆ.
  • ಲಭ್ಯವಿದ್ದರೆ Save ಅಥವಾ Done ಮೇಲೆ ಕ್ಲಿಕ್ ಮಾಡಿ.

ಸೈಬರ್ ಅಪರಾಧಗಳಿಗೆ ಕಡಿವಾಣ

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಸಂಖ್ಯೆಗಳ ಮೂಲಕ ವಂಚನೆ, ಸ್ಪ್ಯಾಮ್ ಲಿಂಕ್‌ಗಳು ಹಾಗೂ ಆನ್‌ಲೈನ್ ಮೋಸ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ವಾಟ್ಸಾಪ್ ಈ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದರ ಮೂಲಕ ಮೊಬೈಲ್ ಸಂಖ್ಯೆ ಗೌಪ್ಯವಾಗಿದ್ದು, ಸೈಬರ್ ಅಪರಾಧಗಳಿಗೆ ಒಂದು ಮಟ್ಟಿನ ತಡೆ ಸಿಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ