ಕೋಲಾರ: ಕೋಲಾರ ನಗರದ ನಿಸಾರ್ ನಗರದಲ್ಲಿ ತಡರಾತ್ರಿ ಹಣದ ವಿಚಾರಕ್ಕೆ ಲಾಂಗ್ ನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ಬೀಡಿ ಕಾಲೋನಿ ನಿವಾಸಿ ಅಲ್ತಾಫ್(45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಲ್ತಾಫ್ ನನ್ನು ಕೊಲೆ ಮಾಡಿದ ಆರೋಪಿ ಇಮ್ರಾನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಅಲ್ತಾಫ್ ಬಳಿ ಆರೋಪಿ ಇಮ್ರಾನ್ ಬಡ್ಡಿಗೆ ಸಾಲ ಪಡೆದುಕೊಂಡಿದ್ದ. ಹಣ ವಾಪಸ್ ನೀಡುವಂತೆ ಪದೇ ಪದೇ ಕೇಳಿದ್ದಕ್ಕೆ ತಡರಾತ್ರಿ ಲಾಂಗ್ ನಿಂದ ಹೊಡೆದು ಅಲ್ತಾಫ್ ನನ್ನು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಇಮ್ರಾನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.