ಬಾಲಿವುಡ್‌ನ ಗ್ಲಾಮರಸ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಮತ್ತೊಮ್ಮೆ ತಮ್ಮ ಹಾಟ್ ಲುಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಿನಿಮಾಗಳಷ್ಟೇ ಅಲ್ಲದೆ ತಮ್ಮ ವಿಭಿನ್ನ ಫೋಟೋಶೂಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ, ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ಚಿತ್ರಗಳು ಅಭಿಮಾನಿಗಳ ನಿದ್ದೆ ಕೆಡಿಸಿವೆ.
ತಮ್ಮ ಲೇಟೆಸ್ಟ್ ಫೋಟೋಶೂಟ್‌ಗಾಗಿ ದಿಶಾ ಪಟಾನಿ ಡೀಪ್ ನೆಕ್ ಟಾಪ್ ಹಾಗೂ ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಯಾವುದೇ ಅದ್ದೂರಿ ಆಭರಣಗಳಿಲ್ಲದೆ ಸರಳವಾದ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದರೂ, ಅವರ ಈ ಬೋಲ್ಡ್ ಸ್ಟೈಲ್ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ಇಂಟರ್ನೆಟ್‌ನಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ನಟಿಯ ಸೌಂದರ್ಯಕ್ಕೆ ಫಿದಾ ಆಗಿ ವಿವಿಧ ರೀತಿಯಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.