LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಿನಾ ಬ್ಲ್ಯಾಕ್ & ವೈಟ್ ಲುಕ್‌ನಲ್ಲೇ ಕಾಣಿಸಿಕೊಳ್ಳುವ ವಿಜಯ್, ಗೆಳತಿ ತ್ರಿಶಾಗಾಗಿ ಫಂಕಿ ಶರ್ಟ್ ಧರಿಸಿದ್ದು ಯಾಕೆ? ಇದರ ಬೆಲೆ ಎಷ್ಟು ಗೊತ್ತಾ?

ಕಾಲಿವುಡ್‌ನ ಎವರ್‌ಗ್ರೀನ್ ಹಿಟ್ ಜೋಡಿ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ (Dalapathy Vijay) ಹಾಗೂ ಸೌತ್ ಕ್ವೀನ್ ತ್ರಿಶಾ ಕೃಷ್ಣನ್ (Trisha Krishnan) ಅವರ ಸ್ನೇಹದ ಬಾಂಡ್ ದಿನದಿಂದ ದಿನಕ್ಕೆ ಮತ್ತಷ್ಟು ಗಟ್ಟಿಯಾಗುತ್ತಿರುವುದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ. ಇತ್ತೀಚೆಗಷ್ಟೇ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ವಿಜಯ್ ಅವರಿಗೆ ಬರ್ತ್‌ಡೇ ದಿನ ಯಾವುದೇ ವಿಶ್ ಮಾಡದ ನಟಿ ತ್ರಿಶಾ ಒಂದು ದಿನದ ಬಳಿಕ ಇಂಟರ್ನೆಟ್‌ನಲ್ಲಿ ಸೋಷಿಯಲ್ ಮೀಡಿಯಾ ಸೈಕ್ಲೋನ್ ಎಬ್ಬಿಸುವಂತಹ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

ಸಿಎಂ ವಿಜಯ್ ಅವರ ಮಿಡ್‌ನೈಟ್ ಬರ್ತ್‌ಡೇ ಸೆಲೆಬ್ರೇಷನ್‌ನ ಅತ್ಯಂತ ಆಪ್ತವಾದ ಫೋಟೋವನ್ನು ತ್ರಿಶಾ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಕೇವಲ ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ ಲೈಕ್ಸ್ ದಾಟಿದ್ದು ಸದ್ಯ 4 ಮಿಲಿಯನ್‌ಗೂ ಅಧಿಕ ಲೈಕ್ಸ್ ದಾಖಲಿಸಿ ಟ್ರೆಂಡಿಂಗ್‌ನಲ್ಲಿದೆ.

ಬೇಬಿ ಪಿಂಕ್ ಕೇಕ್ ಹಾಗೂ ಫಂಕಿ ಶರ್ಟ್ ಹವಾ

ಕ್ಯೂಟ್ ಸೆಲೆಬ್ರೇಷನ್: ತ್ರಿಶಾ ಹಂಚಿಕೊಂಡಿರುವ ಫೋಟೋದಲ್ಲಿ ಬೇಬಿ ಪಿಂಕ್ ಮತ್ತು ವೈಟ್ ಕಾಂಬಿನೇಷನ್‌ನ ಸುಂದರವಾದ ಕೇಕ್ ಹಾಗೂ ತಿನಿಸುಗಳ ಮುಂದೆ ಕುಳಿತು ವಿಜಯ್ ಮತ್ತು ತ್ರಿಶಾ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

ವಿಜಯ್ ಧರಿಸಿದ ಶರ್ಟ್ ಬೆಲೆ ಎಷ್ಟು?: ದಿನವೂ ಸಾರ್ವಜನಿಕವಾಗಿ ಬ್ಲಾಕ್ & ವೈಟ್ ಸೂಟ್ ಅಥವಾ ಫಾರ್ಮಲ್ಸ್‌ನಲ್ಲಿ ಕಾಣಿಸಿಕೊಳ್ಳುವ ಸಿಎಂ ವಿಜಯ್, ಈ ಫೋಟೋದಲ್ಲಿ ಸಖತ್ ಕೂಲ್ ಆಗಿ ಫಂಕಿ ಶರ್ಟ್ ಧರಿಸಿದ್ದಾರೆ. ಇದು ಸದ್ಯ ಅಭಿಮಾನಿಗಳ ನಿದ್ದೆ ಗೆಡಿಸಿದೆ.

ಬ್ರ್ಯಾಂಡ್ ಡಿಟೇಲ್ಸ್: ವಿಜಯ್ ಧರಿಸಿರುವ ಈ ಸ್ಟೈಲಿಶ್ ಶರ್ಟ್ ಮ್ಯಾಂಗೋ (Mango) ಬ್ರ್ಯಾಂಡ್‌ನದ್ದಾಗಿದ್ದು, ಇದರ ಬೆಲೆ ಬರೋಬ್ಬರಿ ₹5,675. ಬ್ರ್ಯಾಂಡ್ ವೆಬ್‌ಸೈಟ್ ಪ್ರಕಾರ ಇದನ್ನು ಬ್ರೌನ್ ಕಲರ್ ಪ್ಯಾಂಟ್ ಜೊತೆ ಮ್ಯಾಚ್ ಮಾಡಲಾಗುತ್ತದೆ. ವಿಜಯ್ ಫೋಟೋ ಹೊರಬಿದ್ದ ಬೆನ್ನಲ್ಲೇ ಅವರ ಫ್ಯಾನ್ಸ್ ಗೂಗಲ್‌ನಲ್ಲಿ ಈ ಶರ್ಟ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ

https://www.instagram.com/reel/DZ9KVUexhN0/?utm_source=ig_web_copy_link&igsh=NTc4MTIwNjQ2YQ==

“Vijay makes it all worth it” ಎಂದ ತ್ರಿಶಾ

ತಡವಾಗಿ ಫೋಟೋ ಪೋಸ್ಟ್ ಮಾಡಿದರೂ ತ್ರಿಶಾ ತಮ್ಮ ಕ್ಯಾಪ್ಷನ್ ಮೂಲಕ ಪ್ರೀತಿ ತುಂಬಿದ್ದಾರೆ. Vijay makes ‘it all worth it (ವಿಜಯ್ ಎಲ್ಲವನ್ನೂ ಸಾರ್ಥಕಗೊಳಿಸುತ್ತಾರೆ) ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಹಾಕಿದ್ದಾರೆ. ತಡವಾಗಿ ಬಂದ್ರೂ ದಳಪತಿ ಮೇಲಿನ ತ್ರಿಶಾ ಪ್ರೀತಿ ಕಮ್ಮಿ ಆಗಿಲ್ಲ ಇಬ್ಬರ ಬಾಂಡ್ ಇನ್ನು ಸ್ಟ್ರಾಂಗ್ ಆಗಿದೆ ಎಂದು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಮದುವೆ ವದಂತಿಗಳ ನಡುವೆ ಹಿಟ್ ಜೋಡಿಯ ಮರು-ಸಂಚಲನ:

ಬ್ಲಾಕ್‌ಬಸ್ಟರ್ ಜೋಡಿ: ವಿಜಯ್ ಮತ್ತು ತ್ರಿಶಾ ಚಿತ್ರರಂಗದಲ್ಲಿ ಗಿಲ್ಲಿ, ಕುರುವಿ, ತಿರುಪಾಚಿ ಸೇರಿದಂತೆ ಹಲವು ಬಿಗ್ ಹಿಟ್ ಸಿನಿಮಾಗಳನ್ನು ನೀಡಿದ ಯಶಸ್ವಿ ಜೋಡಿ.

ಲಿಯೋ ಸಕ್ಸಸ್: ಹಲವು ವರ್ಷಗಳ ಗ್ಯಾಪ್ ನಂತರ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿತ್ತು. ಲಿಯೋ ಭರ್ಜರಿ ಸಕ್ಸಸ್ ಬಳಿಕ ಇವರಿಬ್ಬರ ನಡುವಿನ ಸ್ನೇಹ ಮತ್ತಷ್ಟು ಆಪ್ತವಾಗಿದೆ ಎನ್ನಲಾಗುತ್ತಿದೆ.

ಮದುವೆ ರೂಮರ್ಸ್: ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ದಟ್ಟವಾಗಿವೆ. ಆದರೆ ಈ ಬಗ್ಗೆ ಇಬ್ಬರಿಂದಲೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ವಿಜಯ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೂ ತ್ರಿಶಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ