ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದುಬಾರಿ ವಾಚ್ ಕಟ್ಟುತ್ತಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಅಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರದೀಪ್ ಈಶ್ವರ್ ನನ್ನ ಕೈಲಿ ದುಬಾರಿ ವಾಚ್ ಇದೆ ಎಂದು ಹೇಳಿದ್ದಾರೆ. ನೋಡಿ ನನ್ನ ಕೈಲಿರುವುದು ಅಂಬೇಡ್ಕರ್ ಚಿತ್ರವಿರುವ ಸಾದಾರಣ ವಾಚ್ ಕಟ್ಟಿದ್ದೇನೆ ಎಂದು ಕೈಯಲ್ಲಿ ಕಟ್ಟಿರುವ ವಾಚ್ ತೋರಿಸಿ ಹೇಳಿದ್ದಾರೆ. ಪ್ರದೀಪ್ ಈಶ್ವರ್ ಹೇಳಿದ್ದಾರೆ 75-80 ಲಕ್ಷದ ವಾಚ್ ಕಟ್ಟುತ್ತೇನೆ ಎಂದಿದ್ದಾರೆ. ನೋಡಿ ನನ್ನ ಬಳಿ ಇರುವ ವಾಚ್ ಅಂಬೇಡ್ಕರ್ ಚಿತ್ರ ಇರುವ ಸಾಧಾರಣ ಹೆಚ್ ಎಂಟಿ ವಾಚ್ ಎಂದು ಹೇಳಿದರು.
ಅವರಿಗೆ ಏನಾದರೂ ಅನುಮಾನಗಳಿದ್ದರೆ ಅವರ ಬಳಿಯೇ ಎಸ್ ಐಟಿ ಇದೆಯಲ್ಲ ತನಿಖೆ ಮಾಡಿಸಿ ತೆಗೆದುಕೊಂಡು ಹೋಗಲಿ ಎಂದು ಟಾಂಗ್ ನೀಡಿದ್ದಾರೆ.