ಚಿಕ್ಕಬಳ್ಳಾಪುರ: ನಂದಿನಿ ಮಿಲ್ಕ್ ಪಾರ್ಲರ್ ಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಈ ವಿಚಾರ ತಿಳಿದು ಮಾಲೀಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಹೊಸ ವೈದ್ಯ ಇಲಾಖೆ ಕಚೇರಿ ಸಮೀಪ ಘಟನೆ ನಡೆದಿದೆ. ಕಣಜೇನಹಳ್ಳಿ ಗ್ರಾಮದ ವೆಂಕಟೇಶ್(55) ಮೃತಪಟ್ಟವರು ಎಂದು ಹೇಳಲಾಗಿದೆ. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಮಿಲ್ಕ್ ಪಾರ್ಲರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಮಾಹಿತಿ ತಿಳಿದ ವೆಂಕಟೇಶ್ ಅಂಗಡಿಗೆ ಬಂದು ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯ ನಂತರ ಅಂಗಡಿ ಮುಂದೆ ಕುಸಿದು ಬಿದ್ದಿದ್ದಾರೆ. ಹೃದಯಘಾತದಿಂದ ಕುಸಿದುಬಿದ್ದ ವೆಂಕಟೇಶ್ ಮೃತಪಟ್ಟಿದ್ದಾರೆ. ಮಿಲ್ಕ್ ಪಾರ್ಲರ್ ಮೂಲಕವೇ ಅವರು ಬದುಕು ಕಟ್ಟಿಕೊಂಡಿದ್ದರು. ಬೆಂಕಿ ತಗುಲಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ.