LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೇಬಿ ಕೇರ್ ಸೆಂಟರ್ ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ವಿಡಿಯೋ ವೈರಲ್: ಮೂವರು ಸಿಬ್ಬಂದಿಗೆ ನೋಟಿಸ್ ಜಾರಿ

ಬೆಂಗಳೂರು: ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್‌ ಸೆಂಟರ್ ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿರುವ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ. ಹೆಚ್‌ಎಎಲ್‌ ಪೊಲೀಸರು ಬೇಬಿ ಕೇರ್ ನ ಮೂವರು ಸಿಬ್ಬಂದಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

ಇಂದು ಹೆಚ್‌ಎಎಲ್‌ ಪೊಲೀಸ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದು, ಇದರ ಜೊತೆಗೆ ಬೇಬಿಕೇರ್ ಮೈಂಟೇನೆನ್ಸ್ ಹಾಗೂ ಕಂಪನಿ ಅಡ್ಮಿನ್ ಡಿಪಾರ್ಟ್ಮೆಂಟ್‌ಗೂ ನೋಟಿಸ್ ನೀಡಲು ಸಿದ್ದತೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ವೈರಲ್ ಆಗಿರುವ ವಿಡಿಯೋ ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. CAPGEMINI TECHNOLOGY SERVICES ಕಂಪನಿ ಉದ್ಯೋಗಿಗಳಿಗಾಗಿಯೇ ಈ ಬೇಬಿಕೇರ್‌ನ ತೆರಯಲಾಗಿದ್ದು, ಅಲ್ಲಿನ ಕೆಲಸಗಾರರು ಮಕ್ಕಳನ್ನ ಬೇಬಿಕೇರ್‌ನಲ್ಲಿ ಬಿಟ್ಟು ಹೋಗುತ್ತಿದ್ದರು. ಕೆಲಸ ಮುಗಿಸಿಕೊಂಡು ಹೋಗುವಾಗ ಮಕ್ಕಳನ್ನ ವಾಪಸ್ ಕರೆದೊಯ್ಯುತ್ತಿದ್ದರು ಅನ್ನೋದು ಗೊತ್ತಾಗಿದೆ.

ಬೇಬಿ ಕೇರ್‌ನಲ್ಲಿ ಕೆಲಸ ಮಾಡೋ ಸಿಬ್ಬಂದಿಯನ್ನು ಕಂಪನಿಯವರೇ ನಿಯೋಜನೆ ಮಾಡಿದ್ದಾರೆ. ಸದ್ಯ 18 ಮಕ್ಕಳು ಬೇಬಿಕೇರ್‌ನಲ್ಲಿ ಇರುತ್ತಿದ್ದು, ಮಕ್ಕಳ ಮೇಲೆ ದೈಹಿಕ ಹಿಂಸೆ ವಿಡಿಯೋ ವೈರಲ್ ಆದ ನಂತರ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದರು. ಇದನ್ನು ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಕ್ಕಳ ಮೇಲೆ ಆಯಾಗಳು ಕ್ರೌರ್ಯ ಮೆರೆದಿರುವ ವೀಡಿಯೋ ಪರಿಶೀಲನೆ ಮಾಡಿ, ಐವರು ಆಯಾಗಳ ಮೇಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಅಮರನಾಥ ಯಾತ್ರೆಯಲ್ಲಿ ಅದೃಷ್ಟವಂತರಿಗೆ ಮಾತ್ರ ‘ಬಾಬಾ ಬರ್ಫಾನಿ’ ದರ್ಶನ..! ಯಾರು ಈ ಬಾಬಾ ಬರ್ಫಾನಿ ?SIR ಸಮೀಕ್ಷೆ ವೇಳೆ ಹಠಾತ್ ಹೈಡ್ರಾಮಾ: ವೋಟರ್ ಲಿಸ್ಟ್ ಪರಿಶೀಲನೆ ನೆಪದಲ್ಲಿ ಬಿಜೆಪಿ ಪ್ರಚಾರ? ವಿಡಿಯೋ ವೈರಲ್BIG NEWS : ಕರ್ನಾಟಕದಲ್ಲಿ ಜನಗಣತಿಗೆ ಸಿದ್ಧತೆ ಆರಂಭ ; ಜಿಲ್ಲೆ, ಪಾಲಿಕೆಗಳಿಗೆ ಸರ್ಕಾರದಿಂದ ₹134.14 ಕೋಟಿ ಅನುದಾನ ಬಿಡುಗಡೆಮಂಗಳೂರಿನಲ್ಲಿ ಚಿನ್ನದ ಉದ್ಯಮಿ ದರೋಡೆ ಕೇಸ್ ಗೆ ಬಿಗ್ ಟ್ವಿಸ್ಟ್: ಮೈಮೇಲಿದ್ದ ಒಡವೆ ಗೋಜಿಗೂ ಹೋಗದೇ; ಕಾರಿನಲ್ಲಿದ್ದ ಚಿನ್ನದ ಬಿಸ್ಕೆಟ್ ಗಾಗಿ ತಡಕಾಡಿದ ಖದೀಮರು?ಆರ್.ಎಸ್.ಎಸ್ ನೋಂದಣಿ ವಿಚಾರ: ಕೋರ್ಟ್ ನಲ್ಲಿ ಪ್ರಿಯಾಂಕ್ ಖರ್ಗೆ ತಕರಾರು: ಗೃಹ ಸಚಿವರಿಗೆ ಉತ್ತರಿಸುಯೇ ಸಮನ್ಸ್ ಜಾರಿ ಮಾಡಿದ ನ್ಯಾಯಾಲಯದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ ಪ್ರಕರಣ: ಕಾರಣ ಬಹಿರಂಗInvestment Tips : ತಿಂಗಳಿಗೆ ₹12,500 ಉಳಿತಾಯ ಮಾಡಿದರೆ ಸಾಕು ; 24 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು.!ಸತತ 3 ಪಂದ್ಯದಲ್ಲೂ ಫ್ಲಾಪ್: ಯಪ್ಪಾ ಸಾಕ್ರಪ್ಪ.. ಆತನನ್ನು ಹೊರಹಾಕಿ ವೈಭವ್ ಸೂರ್ಯವಂಶಿ ಕಣಕ್ಕಿಳಿಸಿ ಎಂದು ಕಿಡಿಕಾರಿದ ನೆಟ್ಟಿಗರು!Indian Railway Rules : ರಾತ್ರಿ ವೇಳೆ ಟಿಕೆಟ್ ಇಲ್ಲದಿದ್ರೂ ಮಹಿಳೆಯರನ್ನು ರೈಲಿನಿಂದ ಕೆಳಗಿಳಿಸಲು ಸಾಧ್ಯವಿಲ್ಲ! ಈ ರೂಲ್ಸ್ ನಿಮಗೆ ಗೊತ್ತಾ..?ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ