LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

ಬೆಂಗಳೂರು: PGCET ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವವರು, ತಮ್ಮ ಅರ್ಜಿಯಲ್ಲಿನ‌ ಮಾಹಿತಿ ತಿದ್ದುಪಡಿ ಮಾಡಬೇಕೆನ್ನುವವರು ಜುಲೈ 3ರಿಂದ 6ರವರೆಗೆ ಮಾಡಿಕೊಳ್ಳಬಹುದು.

ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಮಾರ್ಪಾಡು ಮಾಡುವ ಮುನ್ನ ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಗಮನವಿಟ್ಟು ಪರಿಶೀಲಿಸಿ ನಂತರ ತಿದ್ದುಪಡಿ ಮಾಡಬೇಕು ಹಾಗೂ ಮೀಸಲಾತಿ ವಿವರಗಳನ್ನು ತಪ್ಪದೆ ಪರಿಶೀಲಿಸಬೇಕು.

*ಎಂಇ/ಎಂ.ಟೆಕ್ : ಜು.10ರಂದು ದಾಖಲೆ ಪರಿಶೀಲನೆ

ಪ್ರಸಕ್ತ ಸಾಲಿನಲಿ ಎಂ.ಇ./ಎಂ.ಟೆಕ್. ಆಯ್ದ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜುಲೈ 10ರ ಬೆಳಿಗ್ಗೆ 10.30ರಿಂದ ಸಂಜೆ 4ರೊಳಗೆ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದು #KEA ಕಚೇರಿಗೆ ಬರಲು ಸೂಚಿಸಲಾಗಿದೆ.

ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್ ಮೆಂಟಲ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್, ಜವಳಿ ತಂತ್ರಜ್ಞಾನ, ಆರ್ಕಿಟೆಕ್ಚರ್ ಕೋರ್ಸುಗಳಿಗೆ ಇದು ಅನ್ವಯವಾಗುತ್ತದೆ.

ಪದವಿ ಪರೀಕ್ಷೆಯ ಎಲ್ಲ ಸೆಮಿಸ್ಟರ್/ವರ್ಷಗಳ ಅಂಕಪಟ್ಟಿಗಳು, ಕೆಇಎ ಆನ್ ಲೈನ್ ಅರ್ಜಿಯ ಪ್ರತಿ, ಗುರುತು ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ತರಬೇಕು. ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನಿಯಮಾನುಸಾರ ರಾಂಕಿಂಗ್ ನೀಡಲಾಗುವುದು.

ಎಂ.ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಜಿ ಸಲ್ಲಿಸಿರುವವರು ಈ ಮೇಲಿನ ಪ್ರಮಾಣ ಪತ್ರಗಳ ಜೊತೆಗೆ ಪಿಜಿಇಟಿಎ-26ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಹ ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಒಂದೇ ದಿನ ₹3,770 ಜಿಗಿದ ಚಿನ್ನದ ಬೆಲೆ, ಬೆಳ್ಳಿಯೂ ಸಖತ್ ಕಾಸ್ಟ್ಲಿ ಬೆಂಗಳೂರಲ್ಲಿ ಜು.2ರಂದು ಗೋಲ್ಡ್‌ ರೇಟ್‌ ಎಷ್ಟು?‘ಜೈಲರ್ 2’ ಬಿಡುಗಡೆ ದಿನಾಂಕ ಪ್ರಕಟ: ಸೂಪರ್ ಸ್ಟಾರ್ ರಜನಿಕಾಂತ್ ಫಸ್ಟ್ ಲುಕ್ ಬಹಿರಂಗBREAKING NEWS: ಸಿಬಿಎಸ್‌ಇ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ಪ್ರಶಾಂತ್ ಲೋಖಂಡೆ ನೇಮಕಮಾದಕವಸ್ತುಗಳ ಬಳಿಕ ಗುಟ್ಕಾ ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ; ಮೆಗಾ ಡ್ರೈವ್‌ಗೆ ಚಾಲನೆಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸ್ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿವಾಹನ ಸವಾರರಿಗೆ ಗುಡ್ ನ್ಯೂಸ್: ಕಚ್ಚಾ ತೈಲ ಬೆಲೆ ಇಳಿಕೆ ಹಿನ್ನೆಲೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿತ: ಸುಳಿವು ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ಹಾಸ್ಯಾಸ್ಪದ: ನೋಟಿಸ್ ಬರುವ ಮುನ್ನವೇ ಸುದೀರ್ಘ ಉತ್ತರ ನೀಡುತ್ತೇನೆ ಎಂದ ಸುರೇಶ್ ಕುಮಾರ್ಸಾರಿಗೆ ನೌಕರರಿಗೆ ಸರ್ಕಾರದ ಗುಡ್‌ನ್ಯೂಸ್: ದೀರ್ಘಕಾಲದ ವೇತನ ಪರಿಷ್ಕರಣೆ ಜಾರಿವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ಹಿಂಪಡೆತ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆಈ ಮಾಹಿತಿಗಳನ್ನೆಲ್ಲ ಕೊಡಬೇಕಾ?: ಗೃಹಲಕ್ಷ್ಮಿ, ಗೃಹಜ್ಯೋತಿ ಅರ್ಹತೆ ನಿರ್ಧರಿಸಲು ಸರ್ಕಾರ ಸಂಗ್ರಹಿಸುತ್ತಿರುವ ಮಾಹಿತಿಗಳ ಕುರಿತು ಜನಸಾಮಾನ್ಯರಿಗೆ ಅನುಮಾನ!