LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಆಲ್ಫಾ’ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಹೃತಿಕ್ ರೋಶನ್ ಬೆಂಕಿ ಎಂಟ್ರಿಗೆ ಫ್ಯಾನ್ಸ್ ಫಿದಾ

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾ ಕೊನೆಗೂ ಪ್ರೇಕ್ಷಕರ ಮುಂದೆ ಬಂದಿದೆ. ಆಲಿಯಾ ಭಟ್ ಮತ್ತು ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಜುಲೈ ಮೂರರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶಿವ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಮತ್ತು ಶರ್ವರಿ ಜೊತೆಗೆ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವಾರ್ ಚಿತ್ರದ ಮೇಜರ್ ಕಬೀರ್ ಪಾತ್ರದಲ್ಲಿ ನಟ ಹೃತಿಕ್ ರೋಶನ್ ನೀಡಿರುವ ಅತಿಥಿ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈಆರ್ಎಫ್ ಸ್ಪೈ ಯೂನಿವರ್ಸ್ ಸರಣಿಯಲ್ಲಿ ಇದು ಮೊದಲ ಮಹಿಳಾ ಪ್ರಧಾನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಬಂದಿದ್ದ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್ 3 ಮತ್ತು ವಾರ್ 2 ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ಹೀಗಾಗಿ ಈ ಹೊಸ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇತ್ತು.

ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿನಿಪ್ರೇಕ್ಷಕರು ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಚಿತ್ರದ ಪೋಷಕ ನಟರ ಅಭಿನಯ ಮತ್ತು ಸಾಹಸ ದೃಶ್ಯಗಳನ್ನು ಕೊಂಡಾಡಿದ್ದರೆ, ಇನ್ನೂ ಕೆಲವರು ಚಿತ್ರದ ಕಥೆ ನಿರೀಕ್ಷಿತ ಮಟ್ಟದಲ್ಲಿ ಮೂಡಿಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರವು ಸಾಮಾನ್ಯ ಮಟ್ಟದಲ್ಲಿದೆ ಮತ್ತು ಆಲಿಯಾ ಭಟ್ ಈ ಪಾತ್ರಕ್ಕೆ ಸರಿಯಾಗಿ ಹೊಂದುವುದಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ಚಿತ್ರದಲ್ಲಿನ ಕೆಲವು ಅತ್ಯಾಧುನಿಕ ಸಾಹಸ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಈ ಚಿತ್ರವು ಚಿತ್ರಮಂದಿರಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿದೆ. ಆರಂಭದಲ್ಲಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ನಂತರ ಈ ವರ್ಷದ ಏಪ್ರಿಲ್ ಗೆ ಮುಂದೂಡಲ್ಪಟ್ಟಿತ್ತು. ನಿರ್ಮಾಣದ ಹಂತದಲ್ಲಿ ಹಲವು ಬಾರಿ ಬಿಡುಗಡೆ ದಿನಾಂಕ ಬದಲಾವಣೆಯಾದ ನಂತರ ಕೊನೆಗೂ ಜುಲೈ ತಿಂಗಳ ಆರಂಭದಲ್ಲಿ ತೆರೆಗೆ ಬಂದಿದೆ.

ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಆಲ್ಫಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಸದ್ಯಕ್ಕೆ ಆರಂಭಿಕ ದಿನದ ಪ್ರದರ್ಶನಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಮಾಯಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಮೊಬೈಲ್ ಆ್ಯಪ್ ಗಳಿಂದಲೇ ಇ-ರಿಕ್ಷಾ, ಇವಿಗಳಲ್ಲಿ ಬ್ಯಾಟರಿ ಸ್ಥಗಿತ: ಅಂತಹ ಅಪ್ಲಿಕೇಶನ್‌ ತೆಗೆದುಹಾಕಲು ಗೂಗಲ್, ಆಪಲ್‌ ಗೆ ಕೇಂದ್ರ ಸರ್ಕಾರ ಆದೇಶಅಯೋಧ್ಯೆ ಶ್ರೀರಾಮಮಂದಿರ ಕಳ್ಳತನದ ಬಗ್ಗೆ ಆರ್‌ಎಸ್‌ಎಸ್‌ ತೀವ್ರ ಖಂಡನೆಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರು ಯಾವುದೇ ನಕಲಿ ಸಂದೇಶ, ವದಂತಿಗಳಿಗೆ ಕಿವಿಗೊಡದಂತೆ ಮನವಿಮಂಡ್ಯ ಜಿಲ್ಲೆಯಲ್ಲಿ ಭೂ ಅಕ್ರಮ ಪರಭಾರೆ ಬೃಹತ್ ಜಾಲ ಬಯಲು: ಕಂದಾಯ ಇಲಾಖೆಯ 8 ಅಧಿಕಾರಿಗಳು ಅರೆಸ್ಟ್ಕಾಂಗ್ರೆಸ್ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ನಡೆಸಿದೆ; ಅಶೋಕ್ ಗಂಭೀರ ಆರೋಪಇನ್‌ಸ್ಟಾಗ್ರಾಮ್‌ ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಜಾಹೀರಾತು: ಮೆಟಾ ಅಧಿಕಾರಿಗಳಿಗೆ ಕೇಂದ್ರದಿಂದ ಸಮನ್ಸ್ ಜಾರಿBREAKING: ಜು. 6 ರಿಂದ ಪ್ರಧಾನಿ ಮೋದಿ 3 ದೇಶಗಳ ಪ್ರವಾಸ: ಇಂಡೋನೇಷ್ಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾಕ್ಕೆ ಭೇಟಿBREAKING: ಲಂಚದ ಹಣ ಹಂಚಿಕೊಳ್ಳುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಂಜಿನಿಯರ್ ಗಳುಗೃಹಜ್ಯೋತಿ ಯೋಜನೆ ಮಾಹಿತಿ ಸಂಗ್ರಹಣೆ ವೇಳೆ ಜಾತಿ ಪ್ರವರ್ಗ ಮಾಹಿತಿ ನೀಡುವುದು ಕಡ್ಡಾಯವಲ್ಲ; ಬೆಸ್ಕಾಂ ಸ್ಪಷ್ಟನೆಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಸ್‌ಐಆರ್ ನಡೆಸುತ್ತಿಲ್ಲ; ಎಚ್‌ಡಿಕೆ ಕಿಡಿ