ಬಾಲಿವುಡ್‌ನ ಜನಪ್ರಿಯ ನಟಿ ಇಶಾ ಗುಪ್ತಾ ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ಪ್ಯಾರಿಸ್ ಕೌಚರ್ ವೀಕ್ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದ ನಟಿ, ತಮ್ಮ ಅತ್ಯಂತ ಆಕರ್ಷಕ ಹಾಗೂ ಬೋಲ್ಡ್ ಉಡುಪಿನ ಮೂಲಕ ನೆರೆದಿದ್ದವರ ಗಮನ ಸೆಳೆದಿದ್ದಾರೆ.
ಲೆಬನಾನ್ ದೇಶದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಟೋನಿ ವಾರ್ಡ್ ವಿನ್ಯಾಸಗೊಳಿಸಿದ ವಿಶೇಷ ಶಾಂಪೇನ್ ಗೋಲ್ಡ್ ಬಣ್ಣದ ಗೌನ್ ಧರಿಸಿ ಇಶಾ ಗುಪ್ತಾ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಲಾಂಗ್ ಗೌನ್ ನಟಿಯ ಗ್ಲಾಮರಸ್ ಶೈಲಿಗೆ ಮತ್ತಷ್ಟು ಮೆರುಗು ನೀಡುವಂತಿತ್ತು. ಸಂಪೂರ್ಣವಾಗಿ ಕ್ರಿಸ್ಟಲ್, ಮೆಟಾಲಿಕ್ ಮಣಿಗಳು ಹಾಗೂ ಹೊಳೆಯುವ ಸಿಕ್ವಿನ್ಸ್‌ಗಳಿಂದ ಈ ಉಡುಪನ್ನು ಸಿದ್ಧಪಡಿಸಲಾಗಿದ್ದು, ಫ್ಯಾಷನ್ ಪ್ರಿಯರ ಮನಗೆದ್ದಿದೆ.
ವಿಶೇಷ ವಿನ್ಯಾಸದ ನೆಕ್‌ಲೈನ್ ಹೊಂದಿದ್ದ ಈ ಟ್ರಾನ್ಸ್‌ಪರೆಂಟ್ ಸ್ಕರ್ಟ್ ಮಾದರಿಯ ಗೌನ್‌ನಲ್ಲಿ ಇಶಾ ಗುಪ್ತಾ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ಭಾರಿ ವಿನ್ಯಾಸದ ಉಡುಪಿಗೆ ತಕ್ಕಂತೆ ಅವರು ಮಿನಿಮಲ್ ಜ್ಯುವೆಲ್ಲರಿ ಆಯ್ಕೆ ಮಾಡಿಕೊಂಡಿದ್ದು, ಸರಳವಾದ ಚಿನ್ನದ ಕಿವಿಯೋಲೆ ಹಾಗೂ ನೀಟಾಗಿ ಬಾಚಿದ ಜುಟ್ಟು ಅವರ ಅಂದವನ್ನು ಹೆಚ್ಚಿಸಿತ್ತು. ಒಟ್ಟಾರೆಯಾಗಿ ಇಶಾ ಗುಪ್ತಾ ಅವರ ಈ ಹೊಸ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ಅಭಿಮಾನಿಗಳು ನಟಿಯ ಫ್ಯಾಷನ್ ಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ.


