ಮೈಸೂರು: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ನವವಿವಾಹಿತೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ.
ಮೇಘನಾ(20) ಮೃತ ದುರ್ದೈವಿ. 15 ದಿನಗಳ ಹಿಂದಷ್ಟೇ ಈಕೆಯನ್ನು ಮೂಕನಹುಂಡಿಯಿಂದ ಬಿದರಗೂಡಿಗೆ ವಿವಾಹ ಮಾಡಿಕೊಡಲಾಗಿತ್ತು. ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಈ ದುರಂತ ಸಂಭವಿಸಿದೆ.
ಹೆಲ್ಮೆಟ್ ಧರಿಸದಿದ್ದರಿಂದ ಅಪಘಾತದ ವೇಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿ ಮೇಘನಾ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಕುವೆಂಪುನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.