ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತೆಯನ್ನು ಅಪ್ರಾಪ್ತ ಕೊಲೆ ಮಾಡಿದ್ದಾನೆ. ನಾಡ ಬಂದೂಕಿನಿಂದ ಗುಂಡು ಹಾರಿಸಿ ಆರೋಪಿ ಹತ್ಯೆ ಮಾಡಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತನಿಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು. ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮತ್ತೊಬ್ಬನ ಜೊತೆಗೆ ಅಪ್ರಾಪ್ತೆ ಚಾಟಿಂಗ್ ಮಾಡುತ್ತಿದ್ದಳು.
ವಿವಾಹಿತ ಅಪ್ರಾಪ್ತೆ ಬೇರೆಯವನ ಜೊತೆಗೆ ಚಾಟಿಂಗ್ ಮಾಡುತ್ತಿದ್ದರಿಂದ ಮದುವೆಯಾದ ಮೂರೇ ತಿಂಗಳಿಗೆ ಸಂಸಾರದಲ್ಲಿ ಬಿರುಕು ಮೂಡಿತ್ತು. ಕುಪಿತಗೊಂಡು ಗುಂಡು ಹಾರಿಸಿ ಪತ್ನಿಯನ್ನು ದುರುಳ ಕೊಲೆ ಮಾಡಿದ್ದಾನೆ. ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಿ ಹೂತು ಹಾಕಿದ್ದನೆ. ಅಪ್ರಾಪ್ತ ಆರೋಪಿಗೆ ಸಹೋದರ ಮತ್ತು ಚಿಕ್ಕಪ್ಪ ಸಾಥ್ ನೀಡಿದ್ದರು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.