ಬೆಂಗಳೂರು: ಹಸಿರು ಮಾರ್ಗದಲ್ಲಿ ಸಿಆರ್‌ಆರ್‌ಸಿ(CRRC) ಸಂಸ್ಥೆಯ ನೂತನ ರೈಲುಗಳನ್ನು ಬಿಎಂಆರ್‌ಸಿಎಲ್ ಕಾರ್ಯಾಚರಣೆಗೆ ಸೇರ್ಪಡೆಗೊಳಿಸುವ ಮೊದಲು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ(CMRS) ಮುಖ್ಯ ತಪಾಸಣೆಗೆ ಪೂರ್ವಭಾವಿಯಾಗಿ, ಬಿಎಂಆರ್‌ಸಿಎಲ್ ಹಾಗೂ ಸಿಎಂಆರ್‌ಎಸ್ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ, ದಿನಾಂಕ 07.08.2026ರ ರಾತ್ರಿ ಜಂಟಿ ಪ್ರಾಯೋಗಿಕ ಸಂಚಾರ /ತಪಾಸಣೆ ನಡೆಸಲಾಗುವುದು.
ಈ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಈ ಕೆಳಕಂಡ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗುವುದು:
1. ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30ರಿಂದ 11:00 ಗಂಟೆಯವರೆಗೆ, ಪ್ರಯಾಣಿಕ ಸೇವೆ ಮುಕ್ತಾಯಗೊಳ್ಳುವವರೆಗೆ, ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
2. ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.
ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಸಹಕರಿಸುವಂತೆ ಕೋರಲಾಗಿದೆ. ಪ್ರಯಾಣಿಕರಿಗೆ ಉಂಟಾಗಬಹುದಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ತಿಳಿಸಲಾಗಿದೆ.