ಬೆಂಗಳೂರು: ಇನ್ನೇನು ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತಿದೆ. ಹೊಸ ತಿಂಗಳು ಶುರುವಾಗುತ್ತಿದ್ದಂತೆ ಪ್ರತಿಯೊಬ್ಬರೂ ಗಮನಿಸುವುದು ರಜಾದಿನಗಳ ಪಟ್ಟಿಯನ್ನು. ವಿಶೇಷವಾಗಿ ಬ್ಯಾಂಕ್ ವ್ಯವಹಾರ ಅಥವಾ ಹಣಕಾಸಿನ ಕೆಲಸಗಳಿದ್ದವರು ರಜಾದಿನಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಸೂಕ್ತ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಪ್ರಾದೇಶಿಕ ಹಬ್ಬಗಳು, ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿ ದೇಶಾದ್ಯಂತ ಹಲವು ದಿನ ಬ್ಯಾಂಕ್ ಶಾಖೆಗಳು ಮುಚ್ಚಲಿವೆ.ಎಸ್‍ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್‌ಗಳಿಗೆ ಈ ರಜೆಗಳು ಅನ್ವಯವಾಗಲಿವೆ.
ಸೆಪ್ಟೆಂಬರ್‌ನಲ್ಲಿ ಪ್ರಮುಖ ಬ್ಯಾಂಕ್ ರಜೆಗಳು:
ಸೆಪ್ಟೆಂಬರ್ 4, ಶುಕ್ರವಾರ: ಜನ್ಮಾಷ್ಟಮಿ (ವೈಷ್ಣವ) / ಕೃಷ್ಣ ಜಯಂತಿ ಹಲವು ನಗರಗಳಲ್ಲಿ ಬ್ಯಾಂಕ್ ರಜೆ.
ಸೆಪ್ಟೆಂಬರ್ 12, ಶನಿವಾರ: ಎರಡನೇ ಶನಿವಾರ ದೇಶಾದ್ಯಂತ ಬ್ಯಾಂಕ್ ಶಾಖೆಗಳು ಬಂದ್.
ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್ ರಜೆ.
ಸೆಪ್ಟೆಂಬರ್ 15, ಮಂಗಳವಾರ: ಸಂವತ್ಸರಿ, ನುಖೈ ಹಾಗೂ ಗಣೇಶ ಚತುರ್ಥಿಯ ಎರಡನೇ ದಿನ ಅಹಮದಾಬಾದ್, ಭುವನೇಶ್ವರ ಮತ್ತು ಪಣಜಿಯಲ್ಲಿ ರಜೆ.
ಸೆಪ್ಟೆಂಬರ್ 21, ಸೋಮವಾರ: ಶ್ರೀಮಂತ ಶಂಕರದೇವ / ಶ್ರೀ ನಾರಾಯಣ ಗುರು ಸಮಾಧಿ ಜನ್ಮೋತ್ಸವ ಗುವಾಹಟಿ, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ರಜೆ.
ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜೆ ರಾಂಚಿಯಲ್ಲಿ ಬ್ಯಾಂಕ್ ರಜೆ.
ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ ಜಮ್ಮು ಮತ್ತು ಶ್ರೀನಗರದಲ್ಲಿ ರಜೆ.
ಸೆಪ್ಟೆಂಬರ್ 25, ಶುಕ್ರವಾರ: ಇಂದ್ರ ಜಾತ್ರಾ ಗ್ಯಾಂಗ್ಟಾಕ್‌ನಲ್ಲಿ ರಜೆ
ಸೆಪ್ಟೆಂಬರ್ 26, ಶನಿವಾರ: ನಾಲ್ಕನೇ ಶನಿವಾರ ದೇಶಾದ್ಯಂತ ಬ್ಯಾಂಕ್ ಶಾಖೆಗಳು ಬಂದ್.
ಸೆಪ್ಟೆಂಬರ್ 6, 13, 20 ಮತ್ತು 27: ಭಾನುವಾರ ದೇಶಾದ್ಯಂತ ಬ್ಯಾಂಕ್ ರಜೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ 2026ರ ಬ್ಯಾಂಕ್ ರಜೆ
ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಮುಖವಾಗಿ 3 ದಿನ ಬ್ಯಾಂಕ್ ರಜೆ ಇರಲಿದೆ:
ಸೆಪ್ಟೆಂಬರ್ 12: ಎರಡನೇ ಶನಿವಾರ
ಸೆಪ್ಟೆಂಬರ್ 14: ಗಣೇಶ ಚತುರ್ಥಿ
ಸೆಪ್ಟೆಂಬರ್ 26: ನಾಲ್ಕನೇ ಶನಿವಾರ
ಇದರ ಜೊತೆಗೆ ಸೆಪ್ಟೆಂಬರ್ 6, 13, 20 ಮತ್ತು 27ರಂದು ಭಾನುವಾರ ಇರುವುದರಿಂದ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ