LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂಡದ ಒಡೆಯನಿಂದ ಲೀಗ್ ಮಾಲೀಕನಾಗಿ ಅಭಿಷೇಕ್ ಬಚ್ಚನ್: ಶುಭ ಕೋರಿದ ಬಿಗ್ ಬಿ

ಖ್ಯಾತ ಬಾಲಿವುಡ್ ನಟ ಅಭಿನೇಕ್ ಬಚ್ಚನ್ ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು, ಯುರೋಪ್ ಟಿ20 ಪ್ರೀಮಿಯರ್ ಲೀಗ್ (ETPL) ಸಂಸ್ಥಾಪಕ ಮತ್ತು ಸಹ-ಮಾಲೀಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ನೂತನ ಕ್ರೀಡಾ ಸಾಹಸಕ್ಕೆ ಅವರ ತಂದೆ, ನಟ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದ ಮೂಲಕ ಹೃದಯಪೂರ್ವಕ ಶುಭಾಶಯ ಕೋರಿದ್ದಾರೆ.

ಅಭಿಷೇಕ್ ಅವರು ಹಂಚಿಕೊಂಡಿದ್ದ ವಿಶೇಷ ವಿಡಿಯೋವನ್ನು ರೀಪೋಸ್ಟ್ ಮಾಡಿದ ಬಿಗ್ ಬಿ, ಈ ಹೊಸ ಪ್ರಯತ್ನಕ್ಕೆ ನನ್ನ ಎಲ್ಲಾ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳು ಇರಲಿವೆ. ಇದು ಸದಾ ಯಶಸ್ಸು ಮತ್ತು ಅಪಾರ ಕೀರ್ತಿಯನ್ನು ತರಲಿ ಎಂದು ಹಾರೈಸಿದ್ದಾರೆ.

ಈ ಹಿಂದೆ ಕಬಡ್ಡಿ ಲೀಗ್‌ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಫುಟ್‌ಬಾಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡಗಳ ಮಾಲೀಕರಾಗಿ ಕ್ರೀಡಾ ರಂಗದಲ್ಲಿ ಸಕ್ರಿಯರಾಗಿದ್ದ ಅಭಿಷೇಕ್, ಈ ಬಾರಿಯ ಟಿ20 ಸರಣಿಯಲ್ಲಿ ಕೇವಲ ಒಂದು ತಂಡಕ್ಕೆ ಸೀಮಿತವಾಗದೆ ಇಡೀ ಟೂರ್ನಿಯ ಲೀಗ್ ಮಟ್ಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ದೀರ್ಘಕಾಲೀನ ಕ್ರೀಡಾ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಈ ಲೀಗ್ ಆರಂಭಿಸಿರುವುದಾಗಿ ಅಭಿಷೇಕ್ ತಿಳಿಸಿದ್ದಾರೆ.

ಐಸಿಸಿ ಮಾನ್ಯತೆ ಪಡೆದಿರುವ ಈ ಪಂದ್ಯಾವಳಿಯು ಆಗಸ್ಟ್ 26ರಿಂದ ಸೆಪ್ಟೆಂಬರ್ 20ರವರೆಗೆ ನಡೆಯಲಿದೆ. ಐರ್ಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳ ಆರು ನಗರ ಆಧಾರಿತ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಆಮ್ಸ್ಟರ್ಡ್ಯಾಮ್ ಫ್ಲೇಮ್ಸ್, ರೊಟರ್ಡ್ಯಾಮ್ ಡಾಕರ್ಸ್, ಡಬ್ಲಿನ್ ಗಾರ್ಡಿಯನ್ಸ್, ಬೆಲ್ಫಾಸ್ಟ್ ವುಲ್ವ್ಸ್, ಗ್ಲ್ಯಾಸ್ಗೋ ಕಾಸ್ಮಿಕ್ ಹಾಗೂ ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ.

ಟೂರ್ನಿಯಲ್ಲಿ ಒಟ್ಟು 30 ಲೀಗ್ ಪಂದ್ಯಗಳು, ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ ಮಹತ್ವದ ಪಂದ್ಯಗಳು ನಡೆಯಲಿವೆ. ಆರಂಭಿಕ 17 ಪಂದ್ಯಗಳು ನೆದರ್ಲ್ಯಾಂಡ್ಸ್‌ನ ವೂರ್‌ಬರ್ಗ್ ಕ್ರಿಕೆಟ್ ಕ್ಲಬ್‌ನಲ್ಲಿ ನೆರವೇರಲಿದ್ದು, ನಂತರದ ಪಂದ್ಯಗಳು ಐರ್ಲ್ಯಾಂಡ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್‌ಗೆ ಸ್ಥಳಾಂತರಗೊಳ್ಳಲಿವೆ. ಸೆಪ್ಟೆಂಬರ್ 19ಕ್ಕೆ ಕ್ವಾಲಿಫೈಯರ್ ಹಾಗೂ ಸೆಪ್ಟೆಂಬರ್ 20ರಂದು ಜಿದ್ದಾಜಿದ್ದಿನ ಫೈನಲ್ ಪಂದ್ಯ ನಡೆಯಲಿದೆ.

ಈ ಸರಣಿಯಲ್ಲಿ ಜಾಗತಿಕ ಮಟ್ಟದ ಖ್ಯಾತ ಕ್ರಿಕೆಟಿಗರು ಅಂಗಳಕ್ಕಿಳಿಯಲಿದ್ದಾರೆ. ಆಮ್ಸ್ಟರ್ಡ್ಯಾಮ್ ತಂಡದಲ್ಲಿ ಸ್ವೀವ್ ಸ್ಮಿತ್, ಅಜಿಂಕ್ಯ ರಹಾನೆ, ಟಿಮ್ ಡೇವಿಡ್ ಇರಲಿದ್ದರೆ, ರೊಟರ್ಡ್ಯಾಮ್ ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಹೆನ್ರಿಚ್ ಕ್ಲಾಸೆನ್ ಕಾಣಿಸಿಕೊಳ್ಳಲಿದ್ದಾರೆ. ಡಬ್ಲಿನ್ ತಂಡವನ್ನು ಭಾರತದ ಆಟಗಾರ ರವಿಚಂದ್ರನ್ ಅಶ್ವಿನ್ ಮುನ್ನಡೆಸಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಸ್ಯಾಂಟ್ನರ್, ಟ್ರೆಂಟ್ ಬೋಲ್ಟ್ ಅವರಂತಹ ದಿಗ್ಗಜರು ಕೂಡ ವಿಭಿನ್ನ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

ಕೇವಲ ಆಟಗಾರರು ಮಾತ್ರವಲ್ಲದೆ ತಂಡಗಳ ಒಡೆತನದಲ್ಲೂ ದಿಗ್ಗಜರ ದಂಡೇ ಇದೆ. ರಾಹುಲ್ ದ್ರಾವಿಡ್, ಸ್ಟೀವ್ ವಾ, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಹೇಡನ್, ಜೆಂಟಿ ರೋಡ್ಸ್ ಮತ್ತು ನಟ ಜಾನ್ ಅಬ್ರಹಾಂ ಸರಣಿಯ ವಿವಿಧ ತಂಡಗಳ ಒಡೆತನ ಹಾಗೂ ಆಡಳಿತದಲ್ಲಿ ಭಾಗಿಯಾಗಿದ್ದಾರೆ.

“>

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!