LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಪಘಾತದಲ್ಲಿ ಗಾಯಗೊಂಡ ಶಾಂತಾ ಆರೋಗ್ಯ ವಿಚಾರಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರವಾಸದಲ್ಲಿದ್ದ ಮಾಜಿ ಸಚಿವೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು, ಬೆಕ್ಕಿನಕೇರಿ ಗ್ರಾಮದ ಮುಖಂಡರಾದ ನಾರಾಯಣ ಬೆಳಗಾಂವ್ಕರ್ ಅವರ ಪತ್ನಿ ಶಾಂತಾ ಅವರು ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿರುವ ವಿಷಯ ತಿಳಿದು, ತಕ್ಷಣ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ನಾರಾಯಣ ಬೆಳಗಾಂವ್ಕರ್ ಅವರು ತಮ್ಮ ಪತ್ನಿ ಶಾಂತಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಶಾಂತಾ ಅವರಿಗೆ ಗಾಯಗಳಾಗಿದ್ದವು. ವಿಷಯ ತಿಳಿದ ಕೂಡಲೇ ಲಕ್ಷ್ಮೀ ಹೆಬ್ಬಾಳಕರ್ ಅವರು ಸ್ಥಳಕ್ಕೆ ತೆರಳಿ ಶಾಂತಾ ಅವರ ಆರೋಗ್ಯದ ಸ್ಥಿತಿಗತಿಯನ್ನು ವಿಚಾರಿಸಿದರು.

ಗಾಯಗೊಂಡಿದ್ದ ಶಾಂತಾ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ ಹೆಬ್ಬಾಳಕರ್ ಅವರು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಅವರ ಆರೋಗ್ಯದ ಕುರಿತು ಕುಟುಂಬದ ಸದಸ್ಯರಿಂದಲೂ ಮಾಹಿತಿ ಪಡೆದುಕೊಂಡರು.

ಅಲ್ಲದೆ, ಹೆಚ್ಚಿನ ಚಿಕಿತ್ಸೆ ಹಾಗೂ ವೈದ್ಯಕೀಯ ತಪಾಸಣೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ತಮ್ಮ ಆಪ್ತ ಸಹಾಯಕರನ್ನು ಜೊತೆಗಿರಿಸಿ, ಶಾಂತಾ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ತುರ್ತು ಚಿಕಿತ್ಸೆ ಹಾಗೂ ಸೂಕ್ತ ವೈದ್ಯಕೀಯ ಆರೈಕೆಯನ್ನು ತಕ್ಷಣ ನೀಡುವಂತೆ ಸೂಚಿಸಿದರು.

ಜನರ ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವುದು ತಮ್ಮ ಕರ್ತವ್ಯವಾಗಿದ್ದು, ಶಾಂತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹಾರೈಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA, ತಮಿಳುನಾಡಿಗೆ ನಿತ್ಯ 6,000 ಕ್ಯೂಸೆಕ್ ನೀರು ಹರಿಸಲು ಸೂಚನೆBIG NEWS: 108 ಆಂಬುಲೆನ್ಸ್ ಸೇವೆ ಖಾಸಗೀಕರಣಕ್ಕೆ ಸಂಪುಟ ಅಂಕಿತ: ಸಿಬ್ಬಂದಿ ಮುಷ್ಕರದ ಎಚ್ಚರಿಕೆ ನಡುವೆಯೇ ಸರ್ಕಾರದ ನಿರ್ಧಾರದಕ್ಷಿಣ ವಲಯದ ರೈಲ್ವೇ ಸುರಕ್ಷತಾ ಆಯುಕ್ತರಾಗಿ ವಿ.ವೆಂಕಟಸುಬ್ರಹ್ಮಣ್ಯನ್ ಅಧಿಕಾರ ಸ್ವೀಕಾರನಗರ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ-ಗ್ರಾಮೀಣ ಬದುಕಿನ ಪರಿಚಯ: 'ಗ್ರಾಮಾನುಭವ' ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆBREAKING: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಗೆ ಹೈಕೋರ್ಟ್ ಬಿಗ್ ರಿಲೀಫ್: ಪ್ರದೋಷ್ ಮಾಫಿಸಾಕ್ಷಿಗೆ ತಡೆ, ಮರು ಆದೇಶಕ್ಕೆ ಸೂಚನೆBREAKING: ಕೊನೆಗೂ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶಕ್ಕೆ ಡಿಸಿ ಗ್ರೀನ್ ಸಿಗ್ನಲ್BIG BREAKING: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು, ವಿಧಾನಸೌಧದಲ್ಲೇ ವೈದ್ಯರಿಂದ ಚಿಕಿತ್ಸೆಪೊಲೀಸ್ ಸಿಬ್ಬಂದಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ‘ಪ್ರಾಜೆಕ್ಟ್ ಖುಷಿ’: ಗೃಹ ಸಚಿವ ಪ್ರಿಯಾಂಕ್ ಖರ್ಗೆಅಪಘಾತದಲ್ಲಿ ಗಾಯಗೊಂಡ ಶಾಂತಾ ಆರೋಗ್ಯ ವಿಚಾರಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್CWRC ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ನಿರ್ಧಾರ: ಸಚಿವ ಚಲುವರಾಯಸ್ವಾಮಿ