LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯವರು ರಣಹದ್ದುಗಳಿದ್ದಂತೆ, ಕೋಮುಗಲಭೆಗೆ ಕಾಯುತ್ತಿರುತ್ತಾರೆ: ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಭಾರತೀಯ ಜನತಾ ಪಾರ್ಟಿಯವರು (ಬಿಜೆಪಿ) ರಣಹದ್ದುಗಳಿದ್ದಂತೆ, ಎಲ್ಲಿ ಕೋಮುಗಲಭೆ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಎಂದು ಸದಾ ಕಾಯುತ್ತಿರುತ್ತಾರೆ. ದೇಶದಲ್ಲಿ ಎಲ್ಲೆಲ್ಲಿ ಕೋಮುಗಲಭೆಗಳಾಗುತ್ತವೆಯೋ ಅಲ್ಲೆಲ್ಲಾ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಂಜನಗೂಡಿನ ಬಿಳಿಗೆರೆ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರ ನಡವಳಿಕೆಯನ್ನು ಕಟುವಾಗಿ ಟೀಕಿಸಿದರು.

ಟಿ. ನರಸೀಪುರದಲ್ಲಿ ಇನ್ಸ್‌ಪೆಕ್ಟರ್‌ ಧನಂಜಯ್‌ ಅವರಿಗೆ ಧಮ್ಕಿ ಹಾಕಿ, ಅದಕ್ಕೆ ಸವಾಲಾಗಿ ನಡೆಸಲಾಗುತ್ತಿದ್ದ ಶೋಭಾಯಾತ್ರೆ ವೇಳೆ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ನೀಡಿದ್ದ ಪ್ರಚೋದನಕಾರಿ ಹೇಳಿಕೆಗೆ ಯತೀಂದ್ರ ತಿರುಗೇಟು ನೀಡಿದರು. ರಾಜಕೀಯವಾಗಿ ತಮ್ಮ ಅಸ್ತಿತ್ವ ಕಳೆದುಕೊಂಡಿರುವ ನಾಯಕರು ಈಗ ಟಿ. ನರಸೀಪುರ ಪ್ರಕರಣವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ನಡೆಯುವ ಕೋಮು ಗಲಭೆಗಳಿಗೆ ಬಿಜೆಪಿಯವರೇ ನೇರ ಕಾರಣವಾಗಿದ್ದು, ಮತ್ತೆ ರಾಜಕೀಯವಾಗಿ ಮುನ್ನೆಲೆಗೆ ಬರಲು ಇಂತಹ ಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸರ್ಕಾರವು ಎಲ್ಲ ಧರ್ಮಗಳ ಜನರನ್ನು ಒಂದೇ ರೀತಿಯಲ್ಲಿ ಸಮಾನವಾಗಿ ಕಾಣುತ್ತದೆ. ದೇವಸ್ಥಾನಗಳ ಮುಂದೆ ಪಟಾಕಿ ಸಿಡಿಸಲು ಯಾವ ರೀತಿ ಅವಕಾಶ ನೀಡಲಾಗುತ್ತದೆಯೋ, ಅದೇ ರೀತಿ ನಿಯಮಗಳ ಪ್ರಕಾರ ಚರ್ಚ್‌ ಹಾಗೂ ಮಸೀದಿಗಳ ಮುಂದೆಯೂ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷ ಟಿ.ನರಸೀಪುರದಲ್ಲಿ ಸೂಕ್ತ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಇನ್ಸ್ಪೆಕ್ಟರ್ ನಿಯಮಗಳ ಕುರಿತು ಸೂಚನೆ ನೀಡಿದ್ದರು. ಆದರೆ ಬಿಜೆಪಿಯವರು ಅದನ್ನೇ ಯಾವುದೋ ದೊಡ್ಡ ಅನಾಹುತ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ತಿವಿದರು.

ಇದೇ ವೇಳೆ ಗಣೇಶೋತ್ಸವದ ಹಿನ್ನೆಲೆಯನ್ನು ನೆನಪಿಸಿದ ಯತೀಂದ್ರ, ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆರಂಭಿಸಿದವರು ಲೋಕಮಾನ್ಯ ತಿಲಕರು, ಅವರು ಯಾವ ಪಕ್ಷದಲ್ಲಿದ್ದರು? ಹೀಗಾಗಿ ಗಣೇಶೋತ್ಸವ ಆಚರಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಬಿಜೆಪಿಯವರು ನಮಗೆ ಪಾಠ ಹೇಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ತವ್ಯನಿರತ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಧಮ್ಕಿ ನೀಡುವ ರೀತಿಯ ವರ್ತನೆ ಅತ್ಯಂತ ಖಂಡನೀಯ ಮತ್ತು ಸರಿಯಲ್ಲ. ಇಂತಹ ಬೇಜವಾಬ್ದಾರಿ ಬೆಳವಣಿಗೆಗಳಿಂದಲೇ ಬಿಜೆಪಿ ನಾಯಕರ ನೈಜ ಉದ್ದೇಶ ಏನೆಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಕುಟುಕಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಪ್ಪಳ : ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು!ಮೈಸೂರು ದಸರಾ 2026: 'ಆನ್‌ಲೈನ್‌'ನಲ್ಲಿ ಜಂಬೂಸವಾರಿ ಟಿಕೆಟ್, 'ಗೋಲ್ಡ್ ಕಾರ್ಡ್' ಬುಕಿಂಗ್ ಆರಂಭ, ಹೀಗೆ ಖರೀದಿಸಿ!ಇನ್ನೊಂದು ತಿಂಗಳಲ್ಲಿ ಮೇಷ ಸೇರಿ ಈ 5 ರಾಶಿಯವರಿಗೆ ಅತ್ಯಂತ ಕೆಟ್ಟ ಕಾಲ, ಶನಿಯಿಂದ ನಷ್ಟ ಕಟ್ಟಿಟ್ಟ ಬುತ್ತಿ!ವಿಶೇಷ ಅಧಿವೇಶನ ಆರಂಭದಲ್ಲೇ 'ವಂದೇ ಮಾತರಂ' ಜಟಾಪಟಿ: ಕಸ್ತೂರಿ ರಂಗನ್ ಚರ್ಚೆ ವೇಳೆ ಭಾರಿ ಗದ್ದಲಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಿ ವಸ್ತುನಿಷ್ಠ ನಿಲುವು ತಾಳಲು ಸದನಕ್ಕೆ ಡಿಸಿಎಂ ಮನವಿಬೆಂಗಳೂರು ನಕಲಿ ಔಷಧ ಜಾಲ: ಕರ್ತವ್ಯ ಲೋಪ ಹಿನ್ನೆಲೆ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಸ್ಪೆಂಡ್!BREAKING : ಬೆಂಗಳೂರಲ್ಲಿ ನಕಲಿ ಔಷಧ ಮಾರಾಟ ದಂಧೆಗೆ ಬ್ರೇಕ್; 24 ಫಾರ್ಮಾಗಳ ಲೈಸೆನ್ಸ್ ಕ್ಯಾನ್ಸಲ್ ಮಾಡಿದ FDA!BIG BREAKING: 'ಧರ್ಮಸ್ಥಳ ಸೌಜನ್ಯ ಪ್ರಕರಣ'ದ ಮರು ತನಿಖೆಗೆ 'ಸುಪ್ರೀಂ ಕೋರ್ಟ್' ಆದೇಶBIG NEWS : ಪ್ರಯಾಣಿಕರಿಗೆ ಗುಡ್ ನ್ಯೂಸ್ : ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆಮೈಸೂರು ದಸರಾ 2026: ಜಂಬೂ ಸವಾರಿ, ಗೋಲ್ಡ್ ಕಾರ್ಡ್ ಸೇರಿ 4 ಪ್ರಮುಖ ಟಿಕೆಟ್‌ಗಳ ಆನ್‌ಲೈನ್ ಬುಕ್ಕಿಂಗ್ ಆರಂಭ!