LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮ ಘಟ್ಟ ರಕ್ಷಣೆಗೆ, ಸ್ಥಳೀಯರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧ: ವಿಧಾನಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ಪಶ್ಚಿಮ ಘಟ್ಟಗಳ ಪರಿಸರ, ಅರಣ್ಯ, ಜೀವವೈವಿಧ್ಯ ಹಾಗೂ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ, ಅಲ್ಲಿನ ರೈತರು, ತೋಟಗಾರರು, ಆದಿವಾಸಿಗಳು ಸೇರಿದಂತೆ ಮೂಲ ನಿವಾಸಿಗಳ ಹಕ್ಕುಗಳು ಮತ್ತು ಜೀವನಾಧಾರವನ್ನು ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜುಲೈ 27, 2026ರಂದು ಹೊರಡಿಸಿರುವ ಕಸ್ತೂರಿ ರಂಗನ್ ವರದಿ ಆಧಾರಿತ 7ನೇ ಕರಡು ಅಧಿಸೂಚನೆಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಪರಿಸರ ಸೂಕ್ಷ್ಮ ಪ್ರದೇಶ (ESA) ಘೋಷಣೆಯಿಂದ ಸ್ಥಳೀಯ ಜನರ ದೈನಂದಿನ ಜೀವನ, ಕೃಷಿ, ತೋಟಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಧಕ್ಕೆಯಾಗಬಾರದು. ಯಾರನ್ನೂ ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದರು.

ಕ್ರಮ ಮತ್ತು ವಿನಾಯಿತಿಗಳು:

  • ಕಠಿಣ ಕ್ರಮ: ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ದಂದೆ, ನಿಯಮಬಾಹಿರವಾಗಿ ಗುಡ್ಡ ಕುಸಿಯುವಂತೆ ಮಾಡುವುದು ಹಾಗೂ ಪರಿಸರ ಮಾಲಿನ್ಯ ಉಂಟುಮಾಡುವ ವಾಣಿಜ್ಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು.

  • ನಿಯಂತ್ರಣದ ವಿವರ: ಕರಡು ಅಧಿಸೂಚನೆಯಂತೆ ರಾಜ್ಯದ 10 ಜಿಲ್ಲೆಗಳ 1,449 ಗ್ರಾಮಗಳ ವ್ಯಾಪ್ತಿಯ ಸುಮಾರು 20,668 ಚದರ ಕಿ.ಮೀ ಪ್ರದೇಶ ESA ವ್ಯಾಪ್ತಿಗೆ ಸೇರಲಿದೆ. ಇದರಲ್ಲಿ 16,114.08 ಚ.ಕಿ.ಮೀ ನಿಯಂತ್ರಿತ ಅರಣ್ಯ ಭಾಗವಿದ್ದರೆ, ಉಳಿದ 3,138.08 ಚ.ಕಿ.ಮೀ ಪ್ರದೇಶ ನಿಯಂತ್ರಣಕ್ಕೆ ಒಳಪಡದ ಭೂಮಿಯಾಗಿದೆ.

ಕರಡು ಅಧಿಸೂಚನೆ ತಿರಸ್ಕಾರ – ಕೃಷಿ ಭೂಮಿ ಪ್ರತ್ಯೇಕಿಸಲು ಆಗ್ರಹ:

ಸೆಪ್ಟೆಂಬರ್ 3, 2026ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ತಿರಸ್ಕರಿಸಲು ನಿರ್ಧರಿಸಲಾಗಿದೆ. ಇಡೀ ಗ್ರಾಮವನ್ನು ಒಂದೇ ಮಾನದಂಡದಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಬದಲು, ಭೂಬಳಕೆಯನ್ನು ಆಧರಿಸಿ 'ಗ್ರೌಂಡ್ ಟ್ರೂಥಿಂಗ್' (ಸ್ಥಳ ಪರಿಶೀಲನೆ) ನಡೆಸಬೇಕು ಎಂಬುದು ಸರ್ಕಾರದ ಪ್ರಮುಖ ಆಗ್ರಹವಾಗಿದೆ.

ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಗಳು:

  1. ಸರ್ವೆ ನಂಬರ್ ಆಧಾರಿತ ಗುರುತು: ಇಡೀ ಗ್ರಾಮವನ್ನು ESAಗೆ ಸೇರಿಸುವ ಬದಲು ಸರ್ವೆ ನಂಬರ್‌ಗಳ ಆಧಾರದ ಮೇಲೆ ಕೃಷಿ ಭೂಮಿ, ತೋಟ, ಜನವಸತಿ ಪ್ರದೇಶ ಮತ್ತು ಅರಣ್ಯ ಭೂಮಿಯನ್ನು ಪ್ರತ್ಯೇಕವಾಗಿ ನಕ್ಷೆ ಮಾಡಬೇಕು.

  2. ಸಾರ್ವಜನಿಕ ಸೌಲಭ್ಯಗಳ ರಕ್ಷಣೆ: ಶಾಲೆ, ಆಸ್ಪತ್ರೆ, ರಸ್ತೆ, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಅಂತಿಮ ಅಧಿಸೂಚನೆಯಲ್ಲಿ ಯಾವುದೇ ಅಡಚಣೆಯಾಗದಂತೆ ರಕ್ಷಣೆ ನೀಡಬೇಕು.

  3. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ: ಪ್ರಸ್ತಾವಿತ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಗ್ರಾಮ ಪಂಚಾಯಿತಿಗಳ ಮೂಲಕ ಸ್ಥಳೀಯರ ಆಕ್ಷೇಪಣೆಗಳನ್ನು ಆಲಿಸಬೇಕು.

  4. ವಿಶೇಷ ಅನುದಾನ ಮತ್ತು ಪರ್ಯಾಯ ಮಾರ್ಗ: ಗಣಿಗಾರಿಕೆ ನಿಷೇಧದಿಂದ ಜೀವನೋಪಾಯ ಕಳೆದುಕೊಳ್ಳುವವರಿಗೆ ಪರ್ಯಾಯ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪರಿಸರ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಕೇಂದ್ರದಿಂದ ವಿಶೇಷ ಅನುದಾನ ನೀಡಬೇಕು.

ಇದು ಅಂತಿಮ ಅಧಿಸೂಚನೆಯಲ್ಲದ ಕಾರಣ ರಾಜ್ಯ ಸರ್ಕಾರ ಸೂಕ್ತ ಆಕ್ಷೇಪಣೆ ಹಾಗೂ ಪರ್ಯಾಯ ಗಡಿ ಪ್ರಸ್ತಾವನೆಗಳನ್ನು ಸಲ್ಲಿಸಲಿದ್ದು, ಪಶ್ಚಿಮ ಘಟ್ಟಗಳ ವಿಷಯದಲ್ಲಿ ತಾರ್ಕಿಕ ಅಂತ್ಯ ಕಾಣಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ನೌಕರರ ತೀರ್ಮಾನಪಶ್ಚಿಮಘಟ್ಟದ ಮೇಲೆ ಕಸ್ತೂರಿ ರಂಗನ್ ವರದಿ ತೂಗುಗತ್ತಿ: ಸಚಿವ ಈಶ್ವರ ಖಂಡ್ರೆವಿಶ್ವವಿಖ್ಯಾತ ಮೈಸೂರು ದಸರಾ 2026: ಖಾಸಗಿ ದರ್ಬಾರ್‌ ದಿನಾಂಕ ಪ್ರಕಟಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ಹಿರಿಯೂರಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸರ ಭರ್ಜರಿ ದಾಳಿ; 13 ಮಂದಿ ಅರೆಸ್ಟ್, ₹3.36 ಲಕ್ಷ ನಗದು ಜಪ್ತಿ!BIG NEWS: ಅಕ್ಕಿಯಿಂದ 'ಆಹಾರ ಕಿಟ್'​​ಗೆ ಬದಲಾವಣೆ: 'ಇಂದಿರಾ ಕಿಟ್​ ಯೋಜನೆ' ಪುನರ್​ ರಚಿಸಲು ಮುಂದಾದ ರಾಜ್ಯ ಸರ್ಕಾರ!ಹಿರಿಯೂರಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸರ ಭರ್ಜರಿ ದಾಳಿ; 13 ಮಂದಿ ಅರೆಸ್ಟ್, ₹3.36 ಲಕ್ಷ ನಗದು ಜಪ್ತುಪಶ್ಚಿಮ ಘಟ್ಟ ರಕ್ಷಣೆಗೆ, ಸ್ಥಳೀಯರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧ: ವಿಧಾನಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆRain In Bengaluru: ಬೆಂಗಳೂರಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ವಾಹನ ಸವಾರರ ಪರದಾಟರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್BREAKING : KPSC ಹಗರಣ : ತನಿಖೆಗೆ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿ ಹೈಕೋರ್ಟ್ ಆದೇಶ