LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮಘಟ್ಟದ ಮೇಲೆ ಕಸ್ತೂರಿ ರಂಗನ್ ವರದಿ ತೂಗುಗತ್ತಿ: ಸಚಿವ ಈಶ್ವರ ಖಂಡ್ರೆ

ವಿಧಾನಸೌಧ : ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯಗಳ ಸಲಹೆ ಪರಿಶೀಲಿಸಲು ನೇಮಕವಾದ ಸಂಜಯ ಕುಮಾರ್ ಸಮಿತಿ, ಪಶ್ಚಿಮಘಟ್ಟದ ಬಾಧಿತ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯವನ್ನೇ ಪಡೆಯಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ನಿವೃತ್ತ ಅರಣ್ಯಾಧಿಕಾರಿ ಸಂಜಯ್ ಕುಮಾರ್ ಅರಣ್ಯ ಸಚಿವನಾಗಿದ್ದಾಗ ನನ್ನ ಭೇಟಿ ಮಾಡಿದ್ದರು. ನಾನು ಗ್ರಾಮ ಪಂಚಾಯತಿಗಳಿಗೆ ಹೋಗಿ, ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಭಿಪ್ರಾಯ ಪಡೆಯಲು ಸಲಹೆ ನೀಡಿದ್ದೆ. ಆದರೆ ಅವರು ತಮ್ಮ ಕರ್ತವ್ಯ ಮಾಡಲಿಲ್ಲ ಎಂದರು.

ಕಸ್ತೂರಿರಂಗನ್ ವರದಿಯಲ್ಲಿ  ನಮೂದಿಸಿರುವ 20,668 ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶದ ಪೈಕಿ 16000 ಚದರ ಕಿ.ಮೀ ಈಗಾಗಲೇ ಹುಲಿ ಸಂರಕ್ಷಿತ ಪ್ರದೇಶ, ಅಭಯಾರಣ್ಯ, ಮೀಸಲು ಅರಣ್ಯ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಶೇ.80ರಷ್ಟು ಸಂರಕ್ಷಿತವಾಗಿದೆ. ಇದರ ಹೊರತಾಗಿ 10 ಜಿಲ್ಲೆಗಳ 34 ತಾಲೂಕಿನ 1449 ಹಳ್ಳಿಗಳು ಸೂಕ್ಷ್ಮ ಪ್ರದೇಶದಲ್ಲಿವೆ ಅವರಿಗೆ ನ್ಯಾಯ ಸಿಗಬೇಕು ಎಂದರೆ ಅಷ್ಟು ಪ್ರದೇಶ ಬಿಟ್ಟು ಬಿಡಿ ಎಂದು ಕೇಳಬೇಕು ಎಂದರು.

ಕೇರಳ ರಾಜ್ಯದಲ್ಲಿ ಸುಮಾರು 13 ಸಾವಿರ ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಇತ್ತು. ಇದನ್ನು 9900 ಚ.ಕಿ.ಮೀ. ಇಳಿಸಲಾಗಿದೆ ಎಂದು ನೆನಪಿಸಿದರು.

ಅದೇ ರೀತಿ ಸಭೆ ಮಾಡಿ ಸಮೀಕ್ಷೆ ಮಾಡಬೇಕು. ಹಲವು ನದಿಗಳ ಮೂಲವಾದ ಪಶ್ಚಿಮ ಘಟ್ಟ 8ನೇ ಜೀವವೈವಿಧ್ಯ ತಾಣವಾಗಿದೆ. ಮಳೆಯ ಮಾರುತ ತಡೆದು ದೇಶವ್ಯಾಪ್ತಿ ಮಳೆ ಸುರಿಸಲು ನೆರವಾಗುತ್ತದೆ. ಹೀಗಾಗಿ ಅದನ್ನು ಸಂರಕ್ಷಿಸಬೇಕು. ಇಷ್ಟು ದಿನ ಅದು ಉಳಿದಿದ್ದರೆ ಅಲ್ಲಿನ ನಿವಾಸಿಗಳಿಂದ ಎಂದರು.

ದೊಡ್ಡ ಒತ್ತುವರಿದಾರರಿಗೆ ಅವಕಾಶ ನೀಡಬಾರದು ಎಂದೂ ಹೇಳಿದ ಈಶ್ವರ ಖಂಡ್ರೆ, ಯಾವುದೇ ರಾಜಕೀಯ ಬೆರೆಸದೆ, ಪರಿಸರ ಪ್ರಕೃತಿ ಸಂರಕ್ಷಿಸಬೇಕು, ನೇಪಾಳದ ದುರಂತ ನಮ್ಮ ಕಣ್ಣಮುಂದಿದೆ. ಜಾಗತಿಕ ತಾಪಮಾನ ಏರುತ್ತಿದೆ. ಇದನ್ನೂ ಗಮನಹರಿಸಬೇಕು. ಕೇಂದ್ರ ಅಧಿಸೂಚನೆ ಹೊರಡಿಸಿದ್ದು, ಅದಕ್ಕೂ ಉತ್ತರ ದಾಯಿತ್ವ ಇದೆ. ಹೀಗಾಗಿ ಆ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು ಎಂದರು.

ಅರಣ್ಯ ಅಧಿಕಾರಿಗಳ ದೂಷಣೆ ಸಲ್ಲ

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದೂಷಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅರಣ್ಯ ಸಂರಕ್ಷಣೆಗೆ ರಾಜ್ಯದ ಕಾಯಿದೆ ಮತ್ತು ಕೇಂದ್ರದ ಕಾಯಿದೆ ಇದೆ. ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲವೇ  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದರು.

ಒಂದೊಮ್ಮೆ ನ್ಯಾಯಲಯದ ಆದೇಶದಂತೆ ಈ ಅಧಿಸೂಚನೆಯನ್ನೇ ಅಂತಿಮಗೊಳಿಸಿದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಹಾಗೂ ಒಮ್ಮತದಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಸದನ ನಿರ್ಣಯಿಸಬೇಕಾಗುತ್ತದೆ ಎಂದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ಕೊನೆಗೂ ಸಾಗರದ ಅರೋಡಿ ವಾಣಿಶ್ರೀ ಸಾವಿಗೆ ಕಾರಣನಾದ ಆರೋಪಿ ಅಭಿಷೇಕ್ ಅರೆಸ್ಟ್!BREAKING: ಮಹಿಳಾ ಪಿಎಸ್‌ಐ ಮೇಲಿನ ಹಲ್ಲೆ ಪ್ರಕರಣ: ಕ್ಷಮೆ ಕೋರಿದ್ರೆ ನಿರೀಕ್ಷಣಾ ಜಾಮೀನೆಂದ ಹೈಕೋರ್ಟ್BREAKING: ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ನೌಕರರ ತೀರ್ಮಾನಪಶ್ಚಿಮಘಟ್ಟದ ಮೇಲೆ ಕಸ್ತೂರಿ ರಂಗನ್ ವರದಿ ತೂಗುಗತ್ತಿ: ಸಚಿವ ಈಶ್ವರ ಖಂಡ್ರೆವಿಶ್ವವಿಖ್ಯಾತ ಮೈಸೂರು ದಸರಾ 2026: ಖಾಸಗಿ ದರ್ಬಾರ್‌ ದಿನಾಂಕ ಪ್ರಕಟಿಸಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ಹಿರಿಯೂರಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸರ ಭರ್ಜರಿ ದಾಳಿ; 13 ಮಂದಿ ಅರೆಸ್ಟ್, ₹3.36 ಲಕ್ಷ ನಗದು ಜಪ್ತಿ!BIG NEWS: ಅಕ್ಕಿಯಿಂದ 'ಆಹಾರ ಕಿಟ್'​​ಗೆ ಬದಲಾವಣೆ: 'ಇಂದಿರಾ ಕಿಟ್​ ಯೋಜನೆ' ಪುನರ್​ ರಚಿಸಲು ಮುಂದಾದ ರಾಜ್ಯ ಸರ್ಕಾರ!ಹಿರಿಯೂರಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸರ ಭರ್ಜರಿ ದಾಳಿ; 13 ಮಂದಿ ಅರೆಸ್ಟ್, ₹3.36 ಲಕ್ಷ ನಗದು ಜಪ್ತುಪಶ್ಚಿಮ ಘಟ್ಟ ರಕ್ಷಣೆಗೆ, ಸ್ಥಳೀಯರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧ: ವಿಧಾನಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆRain In Bengaluru: ಬೆಂಗಳೂರಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ವಾಹನ ಸವಾರರ ಪರದಾಟ