LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆ

ಹುಬ್ಬಳ್ಳಿ: ತುಮಕೂರು-ದಾವಣಗೆರೆ ಹೊಸ ಬ್ರಾಡ್ ಗೇಜ್ ಮಾರ್ಗಕ್ಕೆ ಸಂಬಂಧಿಸಿದಂತೆ ತೊಳಹುಣಸೆಯಲ್ಲಿ ನಡೆಯುತ್ತಿರುವ ಯಾರ್ಡ್ ಕಾಮಗಾರಿ ಮತ್ತು ಅಲ್ಲಿನ ಸಂಪರ್ಕ ವ್ಯವಸ್ಥೆಗಳ ಕಾರಣದಿಂದಾಗಿ, ರೈಲು ಸೇವೆಗಳಲ್ಲಿನ ಬದಲಾವಣೆಗಳು, ರದ್ದುಗೊಳಿಸುವಿಕೆ, ಭಾಗಶಃ ರದ್ದುಗೊಳಿಸುವಿಕೆ, ಮಾರ್ಗ ಬದಲಾವಣೆ, ಸಮಯ ಬದಲಾವಣೆ, ನಿಯಂತ್ರಣ ಮತ್ತು ನಿಲ್ದಾಣಗಳ ರದ್ದತಿ ಕುರಿತು ದಿನಾಂಕ 17.09.2026ರ ಪತ್ರಿಕಾ ಪ್ರಕಟಣೆ ಸಂಖ್ಯೆ 226 ರಲ್ಲಿ ನೀಡಲಾದ ಮಾಹಿತಿಯನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ (ಪರಿಷ್ಕೃತ ಮಾಹಿತಿಯನ್ನು ದಪ್ಪ  ಅಕ್ಷರಗಳಲ್ಲಿ ಸೂಚಿಸಲಾಗಿದೆ): ವಿವರಗಳು ಹೀಗಿವೆ: 

I. ರೈಲುಗಳ ಸಂಚಾರ ರದ್ದು:

1. ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ-ಚಿಕ್ಕಮಗಳೂರು ಎಕ್ಸ್’ಪ್ರೆಸ್ ವಿಶೇಷ ರೈಲನ್ನು 03.10.2026, 04.10.2026 ಮತ್ತು 10.10.2026 ರಂದು (3 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

2. ರೈಲು ಸಂಖ್ಯೆ 07342 ಚಿಕ್ಕಮಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ವಿಶೇಷ ರೈಲನ್ನು 03.10.2026, 04.10.2026 ಮತ್ತು 10.10.2026 ರಂದು (3 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

3. ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಡೈಲಿ ಎಕ್ಸ್’ಪ್ರೆಸ್ ರೈಲನ್ನು ದಿನಾಂಕ 08.10.2026 ಮತ್ತು 09.10.2026 ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

4. ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ರೈಲನ್ನು ದಿನಾಂಕ 09.10.2026 ಮತ್ತು 10.10.2026 ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

II. ರೈಲುಗಳ ಸಂಚಾರ ಭಾಗಶಃ ರದ್ದು:

1. ದಿನಾಂಕ 22.09.2026, 23.09.2026, 27.09.2026, 01.10.2026, 02.10.2026, 03.10.2026, 06.10.2026, 07.10.2026, 08.10.2026 ಮತ್ತು 09.10.2026 ರಂದು (10 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಬೀರೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಧಾರವಾಡದ ಬದಲಿಗೆ ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

2. ದಿನಾಂಕ 23.09.2026, 24.09.2026, 28.09.2026, 02.10.2026, 03.10.2026, 04.10.2026, 07.10.2026, 08.10.2026, 09.10.2026 ಮತ್ತು 10.10.2026 ರಂದು (10 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್, ಧಾರವಾಡದ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣವನ್ನು ಆರಂಭಿಸಲಿದೆ.

3. ದಿನಾಂಕ 23.09.2026 ರಿಂದ 25.09.2026, 28.09.2026, 01.10.2026, 02.10.2026, 05.10.2026 ರಿಂದ 09.10.2026, 12.10.2026 ಮತ್ತು 13.10.2026 ರಂದು (ಒಟ್ಟು 13 ದಿನಗಳು ಮಾತ್ರ) ರಂದು ಹೊರಡುವ ರೈಲು ಸಂಖ್ಯೆ 07343 ಹೊಸಪೇಟೆ–ಅರಸೀಕೆರೆ ಡೆಮು ವಿಶೇಷ ರೈಲು ಅಮರಾವತಿ ಕಾಲೋನಿ ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ಅರಸೀಕೆರೆಯ ಬದಲಿಗೆ ಅಮರಾವತಿ ಕಾಲೋನಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

4. ದಿನಾಂಕ 23.09.2026 ರಿಂದ 25.09.2026, 28.09.2026, 01.10.2026, 02.10.2026, 05.10.2026 ರಿಂದ 09.10.2026, 12.10.2026 ಮತ್ತು 13.10.2026 ರಂದು (ಒಟ್ಟು 13 ದಿನಗಳು ಮಾತ್ರ) ರಂದು ಹೊರಡುವ ರೈಲು ಸಂಖ್ಯೆ 07344 ಅರಸೀಕೆರೆ–ಹೊಸಪೇಟೆ ಡೆಮು ವಿಶೇಷ ರೈಲು ಅರಸೀಕೆರೆಯ ಬದಲಿಗೆ ಅಮರಾವತಿ ಕಾಲೋನಿಯಿಂದಲೇ ತನ್ನ ನಿಗದಿತ ನಿರ್ಗಮನ ಸಮಯದಲ್ಲಿ ಪ್ರಯಾಣವನ್ನು ಆರಂಭಿಸಲಿದೆ

5. ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್’ಪ್ರೆಸ್ ರೈಲು ಹರಿಹರ ಮತ್ತು ಚಿತ್ರದುರ್ಗ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಚಿತ್ರದುರ್ಗದ ಬದಲಿಗೆ ಹರಿಹರದಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

6. ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 17348 ಚಿತ್ರದುರ್ಗ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್, ಚಿತ್ರದುರ್ಗದ ಬದಲಿಗೆ ಹರಿಹರದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

7. ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ಎಕ್ಸ್’ಪ್ರೆಸ್ ಬೀರೂರು ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೆಳಗಾವಿಯ ಬದಲಿಗೆ ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

8. ದಿನಾಂಕ 26.09.2026, 27.09.2026, 28.09.2026, 02.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 20675 ಬೆಳಗಾವಿ–ಮೈಸೂರು ಎಕ್ಸ್’ಪ್ರೆಸ್ ಬೆಳಗಾವಿಯ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

III. ರೈಲುಗಳ ಮಾರ್ಗ ಬದಲಾವಣೆ:

1. ದಿನಾಂಕ 21.09.2026 ಮತ್ತು 05.10.2026 ರಂದು (2 ದಿನಗಳು ಮಾತ್ರ) ಉದಯಪುರ ಸಿಟಿಯಿಂದ ಹೊರಡುವ ರೈಲು ಸಂಖ್ಯೆ 19667 ಉದಯಪುರ ಸಿಟಿ–ಮೈಸೂರು ಹಮ್ಸಫರ್ ಸಾಪ್ತಾಹಿಕ ಎಕ್ಸ್’ಪ್ರೆಸ್ ಎಸ್ಎಸ್ಎಸ್ ಹುಬ್ಬಳ್ಳಿ–ಬಳ್ಳಾರಿ–ಗುಂತಕಲ್–ಧರ್ಮಾವರಂ–ಕೆಎಸ್ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ದಾವಣಗೆರೆಯಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

2. ದಿನಾಂಕ 21.09.2026 ಮತ್ತು 05.10.2026 ರಂದು (2 ದಿನಗಳು ಮಾತ್ರ) ಶ್ರೀ ಗಂಗಾನಗರದಿಂದ ಹೊರಡುವ ರೈಲು ಸಂಖ್ಯೆ 22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್  ಎಸ್ಎಸ್ಎಸ್ ಹುಬ್ಬಳ್ಳಿ–ಬಳ್ಳಾರಿ–ಗುಂತಕಲ್–ಧರ್ಮಾವರಂ–ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಬಾಣಸವಾಡಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

3. ದಿನಾಂಕ 21.09.2026 ರಿಂದ 13.10.2026 ರವರೆಗೆ (23 ದಿನಗಳು ಮಾತ್ರ) ಹರಿಹರದಿಂದ ಹೊರಡುವ ರೈಲು ಸಂಖ್ಯೆ 56529 ಹರಿಹರ–ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು ಹರಿಹರ–ಅಮರಾವತಿ ಕಾಲೋನಿ–ತೇಲಗಿ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

4. ದಿನಾಂಕ 21.09.2026 ರಿಂದ 13.10.2026 ರವರೆಗೆ (23 ದಿನಗಳು ಮಾತ್ರ) ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 56530 ಹೊಸಪೇಟೆ–ಹರಿಹರ ಡೈಲಿ ಪ್ಯಾಸೆಂಜರ್ ರೈಲು ತೇಲಗಿ–ಅಮರಾವತಿ ಕಾಲೋನಿ–ಹರಿಹರ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

5. ದಿನಾಂಕ 22.09.2026, 23.09.2026, 27.09.2026, 01.10.2026, 02.10.2026, 03.10.2026, 06.10.2026, 07.10.2026, 08.10.2026, 09.10.2026 ಮತ್ತು 11.10.2026 ರಂದು (11 ದಿನಗಳು ಮಾತ್ರ) ವಾಸ್ಕೋ-ಡ- ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಡೈಲಿ ಎಕ್ಸ್’ಪ್ರೆಸ್  ರೈಲು ಎಸ್ಎಸ್ಎಸ್ ಹುಬ್ಬಳ್ಳಿ– ಬಳ್ಳಾರಿ ಬೈಪಾಸ್ –ರಾಯದುರ್ಗ–ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಹಾವೇರಿ, ರಾಣಿಬೆನ್ನೂರು, ಹರಿಹರ ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

6. ದಿನಾಂಕ 22.09.2026, 23.09.2026, 01.10.2026, 02.10.2026, 06.10.2026, 07.10.2026, 08.10.2026 ಮತ್ತು 09.10.2026 ರಂದು (8 ದಿನಗಳು ಮಾತ್ರ) ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್  ರೈಲು ಚಿಕ್ಕಜಾಜೂರು–ರಾಯದುರ್ಗ–ಗಿಣಿಗೆರಾ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಮಾಯಕೊಂಡ, ಕೋಡಗನೂರು, ದಾವಣಗೆರೆ, ಹರಿಹರ, ಚಳೇಗೇರಿ, ರಾಣಿಬೆನ್ನೂರು, ದೇವರಗುಡ್ಡ, ಬ್ಯಾಡಗಿ, ಎಸ್ಎಮ್ಎಮ್ ಹಾವೇರಿ, ಕರಜಗಿ, ಕಳಸೂರು ಹಾಲ್ಟ್, ಸವಣೂರು, ಯಲವಿಗಿ, ಕಳಸ ಹಾಲ್ಟ್, ಗುಡಗೇರಿ, ಸಂಶಿ, ಕುಂದಗೋಳ, ಎಸ್ಎಸ್ಎಸ್ ಹುಬ್ಬಳ್ಳಿ, ಶಿಶ್ವಿನಹಳ್ಳಿ, ಅಣ್ಣಿಗೇರಿ, ಗದಗ, ತಳಕಲ್, ಭಾಣಾಪುರ ಮತ್ತು ಕೊಪ್ಪಳ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

7. ದಿನಾಂಕ 26.09.2026 ರಂದು (1 ದಿನ ಮಾತ್ರ) ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16281 ಮೈಸೂರು–ಅಜ್ಮೀರ್ ಸಾಪ್ತಾಹಿಕ ಎಕ್ಸ್’ಪ್ರೆಸ್, ದಾವಣಗೆರೆ, ಕೊಟ್ಟೂರು ಮತ್ತು ತುಂಗಭದ್ರಾ ಅಣೆಕಟ್ಟು ಮಾರ್ಗದ ಮೂಲಕ ಸಂಚರಿಸಲಿದ್ದು, ಚಿಕ್ಕಜಾಜೂರು–ರಾಯದುರ್ಗ–ಬಳ್ಳಾರಿ ಬೈಪಾಸ್–ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

8. ದಿನಾಂಕ 03.10.2026 ಮತ್ತು 10.10.2026 ರಂದು (2 ದಿನಗಳು ಮಾತ್ರ) ಪ್ರಯಾಗ್’ರಾಜ್’ನಿಂದ  ಹೊರಡುವ ರೈಲು ಸಂಖ್ಯೆ 04113 ಪ್ರಯಾಗ್’ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್’ಪ್ರೆಸ್  ವಿಶೇಷ ರೈಲು ದೋಣ್–ಗುತ್ತಿ–ಗುಂತಕಲ್–ಬಳ್ಳಾರಿ–ಎಸ್ಎಸ್ಎಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಹಾವೇರಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

9. ದಿನಾಂಕ 05.10.2026 ರಂದು (1 ದಿನ ಮಾತ್ರ) ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 14805 ಯಶವಂತಪುರ–ಬಾರ್ಮೇರ್ ಸಾಪ್ತಾಹಿಕ ಎಸಿ ಎಕ್ಸ್’ಪ್ರೆಸ್ ರೈಲು ಬೀರೂರು–ಚಿಕ್ಕಜಾಜೂರು–ರಾಯದುರ್ಗ– ಬಳ್ಳಾರಿ ಬೈಪಾಸ್ –ಗದಗ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

10. ದಿನಾಂಕ 05.10.2026 ರಂದು (1 ದಿನ ಮಾತ್ರ) ಕೊಲ್ಲಂನಿಂದ ಹೊರಡುವ ರೈಲು ಸಂಖ್ಯೆ 07314 ಕೊಲ್ಲಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಕೃಷ್ಣರಾಜಪುರಂ –ಧರ್ಮಾವರಂ–ಗುಂತಕಲ್–ಬಳ್ಳಾರಿ–ಎಸ್ಎಸ್ಎಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಎಸ್.ಎಂವಿಟಿ ಬೆಂಗಳೂರು,  ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ ಮತ್ತು ಹಾವೇರಿ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

11. ದಿನಾಂಕ 06.10.2026 ರಂದು (1 ದಿನ ಮಾತ್ರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 04114 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗ್ರಾಜ್ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ–ಬಳ್ಳಾರಿ–ಗುಂತಕಲ್–ಗುತ್ತಿ–ದೋಣ್  ಮಾರ್ಗವಾಗಿ ಸಂಚರಿಸಲಿದ್ದು, ಹೀಗಾಗಿ ಹಾವೇರಿ, ದಾವಣಗೆರೆ, ಅರಸೀಕೆರೆ, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ನಿಲ್ದಾಣಗಳಲ್ಲಿ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.

IV. ತಡವಾಗಿ ಸಂಚಾರ (ಮರುವೇಳಾಪಟ್ಟಿ):

1. ದಿನಾಂಕ 20.09.2026 ಮತ್ತು 28.09.2026 ರಂದು (2 ದಿನಗಳು ಮಾತ್ರ) ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ–ಯಶವಂತಪುರ ಡೈಲಿ ಎಕ್ಸ್’ಪ್ರೆಸ್ ರೈಲು ವಾಸ್ಕೋ ಡ ಗಾಮಾದಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

2. ದಿನಾಂಕ 23.09.2026 ಮತ್ತು 07.10.2026 ರಂದು (2 ದಿನಗಳು ಮಾತ್ರ) ರೈಲು ಸಂಖ್ಯೆ 12777 ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

3. ದಿನಾಂಕ 04.10.2026 ರಂದು (1 ದಿನ ಮಾತ್ರ) ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ–ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್  ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

4. ದಿನಾಂಕ 05.10.2026 ರಂದು (1 ದಿನ ಮಾತ್ರ) ರೈಲು ಸಂಖ್ಯೆ 07356 ರಾಮೇಶ್ವರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ  ಎಕ್ಸ್’ಪ್ರೆಸ್  ರೈಲು ರಾಮೇಶ್ವರಂನಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

5. ದಿನಾಂಕ 12.10.2026 ರಂದು (1 ದಿನ ಮಾತ್ರ) ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್  ರೈಲು ಧಾರವಾಡದಿಂದ 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

6. ದಿನಾಂಕ 24.09.2026, 28.09.2026, 02.10.2026, 03.10.2026, 04.10.2026, 08.10.2026, 09.10.2026 ಮತ್ತು 10.10.2026 ರಂದು (8 ದಿನಗಳು ಮಾತ್ರ) ರಂದು ರೈಲು ಸಂಖ್ಯೆ 26751 ಬೆಳಗಾವಿ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್ ಬೆಳಗಾವಿಯಿಂದ 60 ನಿಮಿಷಗಳಷ್ಟು ತಡವಾಗಿ ಹೊರಡಲಿದೆ (ಮರುನಿಗದಿಪಡಿಸಲಾಗುವುದು). ಇದಲ್ಲದೆ, ಈ ರೈಲನ್ನು 24.09.2026 ಮತ್ತು 08.10.2026 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ಹಾಗೂ 02.10.2026 ರಿಂದ 04.10.2026 ರವರೆಗೆ ಮತ್ತು 09.10.2026 ಹಾಗೂ 10.10.2026 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

V. ರೈಲುಗಳ ಸಂಚಾರ ನಿಯಂತ್ರಣ:

1. ದಿನಾಂಕ 21.09.2026 ಮತ್ತು 29.09.2026 ರಂದು (2 ದಿನಗಳು ಮಾತ್ರ) ಧಾರವಾಡದಿಂದ ಹೊರಡುವ ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

2. ದಿನಾಂಕ 22.09.2026 ರಂದು (1 ದಿನ ಮಾತ್ರ) ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ  ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

3. ದಿನಾಂಕ 22.09.2026 ಮತ್ತು 06.10.2026 ರಂದು (2 ದಿನಗಳು ಮಾತ್ರ) ಬಿಕಾನೇರ್ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್–ಯಶವಂತಪುರ ದ್ವಿ-ಸಾಪ್ತಾಹಿಕ  ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 70 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

4. ದಿನಾಂಕ 23.09.2026, 24.09.2026, 02.10.2026, 03.10.2026, 07.10.2026 ಮತ್ತು 08.10.2026 ರಂದು (6 ದಿನಗಳು ಮಾತ್ರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

5. ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 26751 ಬೆಳಗಾವಿ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್  ರೈಲು ದಿನಾಂಕ 24.09.2026 ಮತ್ತು 08.10.2026 ರಂದು (2 ದಿನಗಳು ಮಾತ್ರ) ಮಾರ್ಗಮಧ್ಯೆ 120 ನಿಮಿಷಗಳು; ದಿನಾಂಕ 28.09.2026 ರಂದು (1 ದಿನ ಮಾತ್ರ) 60 ನಿಮಿಷಗಳು; ಹಾಗೂ ದಿನಾಂಕ 02.10.2026, 03.10.2026, 04.10.2026, 09.10.2026 ಮತ್ತು 10.10.2026 ರಂದು (5 ದಿನಗಳು ಮಾತ್ರ) 90 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.

6. ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16587 ಯಶವಂತಪುರ–ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್’ಪ್ರೆಸ್  ರೈಲು ದಿನಾಂಕ 25.09.2026 ರಂದು (1 ದಿನ ಮಾತ್ರ) ಮಾರ್ಗಮಧ್ಯೆ 100 ನಿಮಿಷಗಳು; ದಿನಾಂಕ 27.09.2026 ರಂದು (1 ದಿನ ಮಾತ್ರ) 45 ನಿಮಿಷಗಳು; ಹಾಗೂ ದಿನಾಂಕ 11.10.2026 ರಂದು (1 ದಿನ ಮಾತ್ರ) 150 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.

7. ದಿನಾಂಕ 25.09.2026 ರಂದು (1 ದಿನ ಮಾತ್ರ) ತಿರುಚ್ಚಿರಾಪಳ್ಳಿಯಿಂದ ಹೊರಡುವ ರೈಲು ಸಂಖ್ಯೆ 22498 ತಿರುಚ್ಚಿರಾಪಳ್ಳಿ–ಶ್ರೀ ಗಂಗಾನಗರ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

8. ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ದಿನಾಂಕ 25.09.2026 ಮತ್ತು 26.09.2026 ರಂದು (2 ದಿನಗಳು ಮಾತ್ರ) ಮಾರ್ಗಮಧ್ಯೆ 30 ನಿಮಿಷಗಳು; ಹಾಗೂ ದಿನಾಂಕ 05.10.2026 ಮತ್ತು 11.10.2026 ರಂದು (2 ದಿನಗಳು ಮಾತ್ರ) 60 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.

9. ದಿನಾಂಕ 25.09.2026 ಮತ್ತು 01.10.2026 ರಂದು (2 ದಿನಗಳು ಮಾತ್ರ) ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 20675 ಬೆಳಗಾವಿ–ಮೈಸೂರು ವಿಶ್ವಮಾನವ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

10. ದಿನಾಂಕ 01.10.2026 ರಂದು (1 ದಿನ ಮಾತ್ರ) ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 19668 ಮೈಸೂರು–ಉದಯಪುರ ಸಿಟಿ ಸಾಪ್ತಾಹಿಕ  ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

11. ದಿನಾಂಕ 03.10.2026 ರಂದು (1 ದಿನ ಮಾತ್ರ) ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

12. ದಿನಾಂಕ 01.10.2026, 05.10.2026, 06.10.2026 ಮತ್ತು 11.10.2026 ರಂದು (4 ದಿನಗಳು ಮಾತ್ರ) ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 26752 ಕೆಎಸ್ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್  ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

13. ದಿನಾಂಕ 01.10.2026, 05.10.2026, 06.10.2026 ಮತ್ತು 11.10.2026 ರಂದು (4 ದಿನಗಳು ಮಾತ್ರ) ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

14. ದಿನಾಂಕ 08.10.2026 ರಂದು (1 ದಿನ ಮಾತ್ರ) ಬಾರ್ಮೇರ್ನಿಂದ ಹೊರಡುವ ರೈಲು ಸಂಖ್ಯೆ 14806 ಬಾರ್ಮೇರ್–ಯಶವಂತಪುರ ಸಾಪ್ತಾಹಿಕ ಎಸಿ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

15. ದಿನಾಂಕ 08.10.2026 ರಂದು (1 ದಿನ ಮಾತ್ರ) ತಿರುವನಂತಪುರಂ ನಾರ್ತ್ನಿಂದ ಹೊರಡುವ ರೈಲು ಸಂಖ್ಯೆ 12778 ತಿರುವನಂತಪುರಂ ನಾರ್ತ್–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

16. ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್’ಪ್ರೆಸ್  ರೈಲು ದಿನಾಂಕ 09.10.2026 ರಂದು (1 ದಿನ ಮಾತ್ರ) ಮಾರ್ಗಮಧ್ಯೆ 75 ನಿಮಿಷಗಳು; ಹಾಗೂ ದಿನಾಂಕ 10.10.2026 ರಂದು (1 ದಿನ ಮಾತ್ರ) 90 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.

17. ದಿನಾಂಕ 09.10.2026 ಮತ್ತು 10.10.2026 ರಂದು (2 ದಿನಗಳು ಮಾತ್ರ) ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12079 ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿ  ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

18. ದಿನಾಂಕ 12.10.2026 ರಂದು (1 ದಿನ ಮಾತ್ರ) ಕೊಲ್ಲಂನಿಂದ ಹೊರಡುವ ರೈಲು ಸಂಖ್ಯೆ 07314 ಕೊಲ್ಲಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

19. ದಿನಾಂಕ 12.10.2026 ರಂದು (1 ದಿನ ಮಾತ್ರ) ರಾಮೇಶ್ವರಂನಿಂದ ಹೊರಡುವ ರೈಲು ಸಂಖ್ಯೆ 07356 ರಾಮೇಶ್ವರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

20. ದಿನಾಂಕ 12.10.2026 ರಂದು (1 ದಿನ ಮಾತ್ರ) ದಾದರ್ನಿಂದ ಹೊರಡುವ ರೈಲು ಸಂಖ್ಯೆ 11005 ದಾದರ್–ಪುದುಚೇರಿ ತ್ರಿ-ಸಾಪ್ತಾಹಿಕ ಎಕ್ಸ್’ಪ್ರೆಸ್  ರೈಲು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

VI. ತೊಳಹುಣಸೆಯಲ್ಲಿ ರೈಲುಗಳ ನಿಲುಗಡೆ ರದ್ದು:

1. ದಿನಾಂಕ 21.09.2026 ರಿಂದ 08.10.2026 ರವರೆಗೆ ಹಾಗೂ 11.10.2026 ರಿಂದ 13.10.2026 ರವರೆಗೆ (21 ದಿನಗಳು ಮಾತ್ರ) ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್  ರೈಲು ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

2. ದಿನಾಂಕ 21.09.2026 ರಿಂದ 07.10.2026 ರವರೆಗೆ ಹಾಗೂ 10.10.2026 ರಿಂದ 13.10.2026 ರವರೆಗೆ (21 ದಿನಗಳು ಮಾತ್ರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಡೈಲಿ ಎಕ್ಸ್’ಪ್ರೆಸ್  ರೈಲು ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

3. ದಿನಾಂಕ 21.09.2026 ರಿಂದ 24.09.2026 ರವರೆಗೆ, 26.09.2026 ರಂದು, 28.09.2026 ರಿಂದ 30.09.2026 ರವರೆಗೆ, 02.10.2026 ರಿಂದ 04.10.2026 ರವರೆಗೆ ಹಾಗೂ 07.10.2026 ರಿಂದ 10.10.2026 ರವರೆಗೆ (15 ದಿನಗಳು ಮಾತ್ರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್’ಪ್ರೆಸ್  ರೈಲು ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

4. ದಿನಾಂಕ 21.09.2026 ರಿಂದ 24.09.2026 ರವರೆಗೆ, 26.09.2026 ರಂದು, 28.09.2026 ರಿಂದ 30.09.2026 ರವರೆಗೆ, 02.10.2026 ರಿಂದ 04.10.2026 ರವರೆಗೆ ಹಾಗೂ 07.10.2026 ರಿಂದ 10.10.2026 ರವರೆಗೆ (15 ದಿನಗಳು ಮಾತ್ರ) ಚಿತ್ರದುರ್ಗದಿಂದ ಹೊರಡುವ ರೈಲು ಸಂಖ್ಯೆ 17348 ಚಿತ್ರದುರ್ಗ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್  ರೈಲು ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

5. ದಿನಾಂಕ 21.09.2026, 22.09.2026, 29.09.2026 ಮತ್ತು 30.09.2026 ರಂದು (4 ದಿನಗಳು ಮಾತ್ರ) ರಂದು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 07343 ಹೊಸಪೇಟೆ–ಅರಸೀಕೆರೆ ಡೆಮು ವಿಶೇಷ ರೈಲು, ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

6. ದಿನಾಂಖ 21.09.2026, 22.09.2026, 29.09.2026 ಮತ್ತು 30.09.2026 ರಂದು (4 ದಿನಗಳು ಮಾತ್ರ)  ರಂದು ಅಸೀಕೆರೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07344 ಅರಸೀಕೆರೆ–ಹೊಸಪೇಟೆ ಡೆಮು ವಿಶೇಷ ರೈಲು ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಹೊಂದಿರುವುದಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಕಾಲುವೆಗೆ ಉರುಳಿದ ವಾಹನ: 24 ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಗಾಯ, ತಪ್ಪಿದ ಭಾರಿ ದುರಂತಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗುJOB ALERT: 'PU ಕಾಲೇಜು ಉಪನ್ಯಾಸಕ'ರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: '814 ಹುದ್ದೆ' ಭರ್ತಿಗೆ ಅಧಿಸೂಚನೆ ಪ್ರಕಟಜೋಳದ ರಾಶಿ ಕಾಯುತ್ತಿದ್ದವರಿಗೆ ಬಡಿದ ಸಿಡಿಲು; ಓರ್ವ ರೈತ ದುರ್ಮರಣ, ಮತ್ತೋರ್ವನಿಗೆ ಗಂಭೀರ ಗಾಯಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!₹5,000 ಲಂಚ ಸ್ವೀಕರಿಸುವಾಗ ಮಂಗಳೂರಿನ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ: ಮುಕ್ತ ಮನಸ್ಸಿನಿಂದ ನಿರ್ಧಾರ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ!