LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!

ರಾಯಚೂರು : ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿರುವ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ಬಲಭೀಮ ಆಂಜನೇಯಸ್ವಾಮಿ ದೇವಸ್ಥಾನದ ನಿರ್ಮಾಣ ಹಂತದ ಮಹಾದ್ವಾರದ ಗೋಪುರಕ್ಕೆ ಏಕಾಏಕಿ ಸಿಡಿಲು ಬಡಿದಿದ್ದು, ಗೋಪುರವು ತೀವ್ರವಾಗಿ ಹಾನಿಗೊಳಗಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚದ ಗೋಪುರಕ್ಕೆ ಹಾನಿ

ಗ್ರಾಮಸ್ಥರು ಅತ್ಯಂತ ಶ್ರದ್ಧಾಭಕ್ತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಮಹಾಗೋಪುರವನ್ನು ನಿರ್ಮಿಸುತ್ತಿದ್ದು, ಕಾಮಗಾರಿಯು ಅಂತಿಮ ಹಂತ ತಲುಪಿತ್ತು. ಆದರೆ, ಸಿಡಿಲು ಬಡಿದ ರಭಸಕ್ಕೆ ಮಹಾದ್ವಾರದ ಮೇಲ್ಭಾಗದಲ್ಲಿದ್ದ ಭಗವಾಧ್ವಜಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಗೋಪುರದಲ್ಲಿದ್ದ ಸುಂದರ ಅಲಂಕಾರಿಕ ಮૂર્ತಿಗಳ ಭಾಗಗಳು ಮುರಿದುಬಿದ್ದಿದ್ದು, ಇಡೀ ಗೋಪುರದಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡಿವೆ.

ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಹೆಚ್ಚಿದ ಆತಂಕ

ದೇವಸ್ಥಾನದ ಪ್ರಮುಖ ಮಹಾದ್ವಾರದ ಗೋಪುರಕ್ಕೆ ಸಿಡಿಲು ಬಡಿದ ಘಟನೆಯಿಂದಾಗಿ ವಂದಲಿ ಗ್ರಾಮದ ನಿವಾಸಿಗಳು ಹಾಗೂ ಆಂಜನೇಯಸ್ವಾಮಿಯ ಭಕ್ತರಲ್ಲಿ ತೀವ್ರ ಆತಂಕ ಹಾಗೂ ಆಘಾತ ಮೂಡಿದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಸುಂದರ ಗೋಪುರ ಕಣ್ಣೆದುರೇ ಹಾನಿಗೊಳಗಾಗಿರುವುದು ಗ್ರಾಮಸ್ಥರಲ್ಲಿ ಕಳವಳ ತಂದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಕಾಲುವೆಗೆ ಉರುಳಿದ ವಾಹನ: 24 ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಗಾಯ, ತಪ್ಪಿದ ಭಾರಿ ದುರಂತಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗುJOB ALERT: 'PU ಕಾಲೇಜು ಉಪನ್ಯಾಸಕ'ರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: '814 ಹುದ್ದೆ' ಭರ್ತಿಗೆ ಅಧಿಸೂಚನೆ ಪ್ರಕಟಜೋಳದ ರಾಶಿ ಕಾಯುತ್ತಿದ್ದವರಿಗೆ ಬಡಿದ ಸಿಡಿಲು; ಓರ್ವ ರೈತ ದುರ್ಮರಣ, ಮತ್ತೋರ್ವನಿಗೆ ಗಂಭೀರ ಗಾಯಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!₹5,000 ಲಂಚ ಸ್ವೀಕರಿಸುವಾಗ ಮಂಗಳೂರಿನ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ: ಮುಕ್ತ ಮನಸ್ಸಿನಿಂದ ನಿರ್ಧಾರ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ!