LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನ

ಕಲಬುರಗಿ: ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು, ಇರುಮುಡಿ ಸಮರ್ಪಿಸಿ ಸಂತಸದಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದ ಮಾಲಧಾರಿಯೊಬ್ಬರು ಮಾರ್ಗಮಧ್ಯೆ ಸಂಭವಿಸಿದ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ದುಃಖದ ಘಟನೆ ನಡೆದಿದೆ.

ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿ ಮಹಾದೇವ ಅಟ್ಟೂರ (58) ಮೃತಪಟ್ಟ ದುರದೃಷ್ಟಕರ ಅಯ್ಯಪ್ಪ ಭಕ್ತ.

ರೈಲಿನಲ್ಲಿ ಪ್ರಯಾಣಿಸುವಾಗ ಹೃದಯಾಘಾತ

ಮಹಾದೇವ ಅವರು ತಮ್ಮ ಪುತ್ರ ಹಾಗೂ ಇತರ ಸ್ವಾಮಿಗಳೊಂದಿಗೆ ಶಬರಿಮಲೆ ಯಾತ್ರೆ ಪೂರ್ಣಗೊಳಿಸಿ, ರೈಲಿನಲ್ಲಿ ಕಲಬುರಗಿಗೆ ವಾಪಸಾಗುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ಗುಂತಕಲ್ ರೈಲ್ವೆ ನಿಲ್ದಾಣದ ಸಮೀಪ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ರೈಲಿನಿಂದ ಇಳಿಸಿ ನಿಲ್ದಾಣದಲ್ಲಿಯೇ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.

ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಮೂಲತಃ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದವರಾದ ಮಹಾದೇವ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಭೌತಿಕ ಶರೀರವನ್ನು ಕಲಬುರಗಿಯ ಬ್ರಹ್ಮಪುರದ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಸೋಮವಾರ ಸಂಜೆ ಅಟ್ಟೂರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಕುಟುಂಬಸ್ಥರು ಹಾಗೂ ಬಂಧುಗಳ ಅಶ್ರುತರ್ಪಣದ ನಡುವೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸ್ವಾಮಿಯ ದರ್ಶನ ಮುಗಿಸಿ ಮನೆಗೆ ಮರಳಬೇಕಿದ್ದ ಮಾಲಧಾರಿ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯ ಅಯ್ಯಪ್ಪ ಮಾಲಧಾರಿಗಳಲ್ಲಿ ತೀವ್ರ ಶೋಕ ತಂದೊಡ್ಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದಲ್ಲಿ ಕಾಲುವೆಗೆ ಉರುಳಿದ ವಾಹನ: 24 ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಗಾಯ, ತಪ್ಪಿದ ಭಾರಿ ದುರಂತಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ ಗುಡುಗುJOB ALERT: 'PU ಕಾಲೇಜು ಉಪನ್ಯಾಸಕ'ರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: '814 ಹುದ್ದೆ' ಭರ್ತಿಗೆ ಅಧಿಸೂಚನೆ ಪ್ರಕಟಜೋಳದ ರಾಶಿ ಕಾಯುತ್ತಿದ್ದವರಿಗೆ ಬಡಿದ ಸಿಡಿಲು; ಓರ್ವ ರೈತ ದುರ್ಮರಣ, ಮತ್ತೋರ್ವನಿಗೆ ಗಂಭೀರ ಗಾಯಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಅಯ್ಯಪ್ಪ ಮಾಲಧಾರಿ ಹೃದಯಾಘಾತದಿಂದ ನಿಧನಸಿಡಿಲು ಬಡಿದು ಬಿರುಕು ಬಿಟ್ಟ ದೇವಸ್ಥಾನದ ಮಹಾಗೋಪುರ, ಭಕ್ತರಲ್ಲಿ ಆತಂಕ!₹5,000 ಲಂಚ ಸ್ವೀಕರಿಸುವಾಗ ಮಂಗಳೂರಿನ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ಸಮಯ ಪರಿಷ್ಕರಣೆಸೌಜನ್ಯ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ: ಮುಕ್ತ ಮನಸ್ಸಿನಿಂದ ನಿರ್ಧಾರ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರಇಂದಿನ ವಿಶೇಷ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದ್ದೇನು? ಇಲ್ಲಿದೆ ಓದಿ!