LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೀವು ಮುಖ್ಯಮಂತ್ರಿ ಆಗಿರೋದಕ್ಕೆ ಲಾಯಕ್ಕಿಲ್ಲ, ರಾಜೀನಾಮೆ ನೀಡಿ: ಸಿಎಂಗೆ ಆರ್.ಅಶೋಕ್ ಆಗ್ರಹ

ಬೆಂಗಳೂರು: ಹಣಕಾಸು ಇಲಾಖೆ ನಿಭಾಯಿಸಲು ಇವರಿಂದ ಆಗುತ್ತಿಲ್ಲ. ಆದ್ದರಿಂದ ನೀವು ಮುಖ್ಯಮಂತ್ರಿ ಆಗಿರೋಕೆ ಲಾಯಕ್ಕಿಲ್ಲ. ತಕ್ಷಣವೇ ರಾಜೀನಾಮೆ ಕೊಡಿ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬೆಳಿಗ್ಗೆ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಹಣಕಾಸು ಇಲಾಖೆ ನಿಯಂತ್ರಿಸಲು ನಿಮಗೆ ಶಕ್ತಿ ಇಲ್ಲ ಎಂದು ಆಕ್ಷೇಪಿಸಿದರು.

ಡಿಕೆ ದಿವಾಳಿ! ಇದು ಪಾಪರ್ ಸರ್ಕಾರ ಇವತ್ತು ಕರ್ನಾಟಕದಲ್ಲಿ ಸರ್ಕಾರ ನಡೆಸುವಂತ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ ಇವತ್ತು. ಹಣ ಇಲ್ಲದೆ ಕಾಂಗ್ರೆಸ್ ಪಾರ್ಟಿಯ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಸರ್ಕಾರ ಹಣದ ಕೊರತೆ ದಿವಾಳಿ ಆಗಿರೋದಕ್ಕೆ ಒಂದು ಹಣಕಾಸು ಇಲಾಖೆಯವರು ಒಂದು ಶ್ವೇತಪತ್ರನೇ ಬಿಡುಗಡೆ ಮಾಡಿಬಿಟ್ಟಿದ್ದಾರೆ ಎಂದು ಗಮನ ಸೆಳೆದರು.

ಡಿ.ಕೆ. ಶಿವಕುಮಾರಣ್ಣ ನೀನು ಎಲ್ಲಿ ಮೊನ್ನೆ ಮಂಗಳೂರಿಗೆ ಹೋಗಿದ್ದೆ, 32 ಸಾವಿರ ಕೋಟಿ, ಮಂಗಳೂರಲ್ಲಿ ಮೀನು ತಿಂದ್ಮೇಲೆ 32 ಸಾವಿರ ಕೋಟಿ ಘೋಷಿಸಿದ್ದಾರೆ. ಗುಲ್ಬರ್ಗಾಗೆ ಹೋಗಿದ್ರಿ ಸಿದ್ದರಾಮಯ್ಯನವರು ಅಲ್ಲಿ 40 ಸಾವಿರ ಕೋಟಿ, ಚಾಮರಾಜನಗರಕ್ಕೆ ಹೋಗಿದ್ರಿ 20 ಸಾವಿರ ಕೋಟಿ, ಅಲ್ಲಿ ಇಲ್ಲಿ ಕ್ಯಾಬಿನೆಟ್ ಮಾಡಿದ್ವಿ 25 ಸಾವಿರ ಕೋಟಿ, ಬಾಗಲಕೋಟೆಯಲ್ಲಿ ಕ್ಯಾಬಿನೆಟ್ ಅಲ್ಲಿ ಒಂದು 50 ಸಾವಿರ ಕೋಟಿ ಪ್ರಕಟಿಸಿದ್ದೀರಿ ಎಂದು ಟೀಕಿಸಿದರು.

ಕಾಂಗ್ರೆಸ್ ಪಾರ್ಟಿ ಖಾಲಿ ಡಬ್ಬ ಅನ್ನೋದು ಇವತ್ತು ಸ್ಪಷ್ಟ ಆಗ್ತಾ ಇದೆ. ಜನರ ಪಾಲಿಗೆ ಚೊಂಬು ಬರಕ್ಕೆ ದುಡ್ಡು ಕೊಡೋಕಾಗಿಲ್ಲ ನಾಲ್ಕು ತಿಂಗಳು ಆಯ್ತು ಬರ ಐದು ತಿಂಗಳಿಂದ ಪೆನ್ಷನ್ ಹಣ ಕೊಟ್ಟಿಲ್ಲ. ಐದು ತಿಂಗಳು ಆಯ್ತು; ಬಡವರು ಸಾಯ್ತಾ ಇದ್ದಾರೆ. ಶಿಕ್ಷಕರಿಗೆ ಸಂಬಳ ಇಲ್ಲ, ರೈತರಿಗೆ ಕರೆಂಟ್ ಇಲ್ಲ. ಹಾಲು ಉತ್ಪಾದಕರು ಯಾರಿದ್ದಾರೋ ಅವರಿಗೆ 12 ತಿಂಗಳಿಂದ ಅವರಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ, ಸಾವಿರಾರು ರೂಪಾಯಿ ಕೊಡಬೇಕು ಎಂದು ಆಕ್ಷೇಪಿಸಿದರು.

ಕ್ಯಾಬಿನೆಟ್ ಮಾಡಿದ್ದೆ ಮಾಡಿದ್ದು; ಏನು ಹೇಳಿದ್ದು ಹೇಳಿದ್ದೆ, ಘೋಷಣೆ. ಘೋಷಣೆಗಳ ಸರ್ಕಾರ, ಬೋಗಸ್ ಸರ್ಕಾರ. ಇವತ್ತು ಹಣಕಾಸು ಇಲಾಖೆಯವರು ಹೇಳಿದ್ದಾರೆ, ನೀವೊಬ್ಬರು ನಾಲಾಯಕ್ ಅನ್ನೋ ರೀತಿ ಅವರು ಹೇಳಿಲ್ಲ, ಆದರೆ ಅದರ ಅರ್ಥ ನೀವು ಫೈನಾನ್ಸ್ ಇಲಾಖೆಯನ್ನು ಅರ್ಥ ಮಾಡಿಕೊಂಡೆ, ನಿಮಗೆ ಮನಸ್ಸಿಗೆ ಬಂದಂಗೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀರಾ. ನ್ಯಾಯವೇ? ಎಂದು ಕೇಳಿದರು.

ಹಣಕಾಸು ಇಲಾಖೆಯವರು ಕೇಳುತ್ತಿದ್ದಾರೆ. ಮನಸ್ಸಿಗೆ ಬಂದಂಗೆ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀಯಲ್ಲಪ್ಪ ನ್ಯಾಯವೇ? ಫೈನಾನ್ಸ್ ಡಿಪಾಟ್ಮೆರ್ಂಟ್ ಅಲ್ಲಿ ಹಣನೇ ಇಲ್ಲ, ಸಾಲ ಕೊಡೋ ಗತಿಯೇ ಇಲ್ಲ ಇವತ್ತು ನಮಗೆ. ಕರ್ನಾಟಕ ಸರ್ಕಾರಕ್ಕೆ ಸಾಲ ಕೊಡಲ್ಲ ಅಂತ ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು 22 ಸಾವಿರ ಕೋಟಿ ಕೊರತೆ ಮಾಡಿ ತೆರಳಿದ್ದಾರೆ. 2 ಲಕ್ಷ ಕೋಟಿ ಬಿಲ್ ಬಾಕಿ ಇದೆ ಎಂದು ಹಣಕಾಸು ಇಲಾಖೆಯವರು ಹೇಳಿದ್ದಾರೆ. ಸಾರಿಗೆ ಇಲಾಖೆಗೆ 5,000 ಕೋಟಿ ಬಾಕಿ ಇದೆ. ವಿದ್ಯುತ್ ಇಲಾಖೆಗೆ ಸಬ್ಸಿಡಿ ಬಾಕಿ ಇದೆ. ನೀವು ಮಂಗಳೂರಲ್ಲಿ ಘೋಷಣೆ, ಬೆಂಗಳೂರಲ್ಲಿ ಘೋಷಣೆ ಮಾಡುತ್ತೀರಿ ಎಂದು ಟೀಕಿಸಿದರು. ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಬೆತ್ತಲೆ ಮಾಡಿಬಿಟ್ಟಿದ್ದಾರೆ. ಒಂದು ಭಿಕಾರಿ ತರ ಇವತ್ತು ಸರ್ಕಾರ ಇವತ್ತು ಕರ್ನಾಟಕದಲ್ಲಿ ಇರೋದು ಭಿಕಾರಿ ಸರ್ಕಾರ ಎಂದು ಆರೋಪಿಸಿದರು.

ಬರಕ್ಕೆ ಒಂದು ಪೈಸೆ ಸಾಲ ಕೊಡಲ್ಲ ಅಂತ ಬರೆದಿದ್ದಾರೆ. ನಾಚಿಕೆ ಆಗಲ್ವಾ ನಿಮಗೆ? ಏನು ಆಕಾಶನೇ ಇಳಿಸೋ ರೀತಿ ಮಾತಾಡ್ತಾ ಇದ್ದೀರಿ ಎಂದರು. ನಿಮಗೆ ಅಧಿಕಾರ ಕೊಟ್ಟರೆ ನೀವು ರಾಹುಲ್ ಗಾಂಧಿಗೋಸ್ಕರ ಹಣ ಸಂಗ್ರಹಿಸುತ್ತಾ ಇದ್ದೀರಿ ಎಂದು ದೂರಿದರು.

ಪೆನ್ಷನ್ ಸಕಾಲಕ್ಕೆ ಕೊಡುತ್ತಿಲ್ಲ.  ಆದರೆ ಎಟಿಎಂ ಮಾತ್ರ ರಾಹುಲ್ ಗಾಂಧಿಗೆ ಹೋಗೋ ಎಟಿಎಂ ಕರೆಕ್ಟ್ ಆಗಿ ಟೈಮ್ ಟು ಟೈಮ್ ಹೋಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆ