LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತ್ರೇತಾಯುಗದಲ್ಲೂ ಚಶ್ಮಾ ಇತ್ತಾ? ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಪೋಸ್ಟರ್ ನೋಡಿ ನೆಟ್ಟಿಗರ ಸಖತ್ ಟ್ರೋಲ್

ರಣಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ರಾಮಾಯಣ ಸಿನಿಮಾ ತೆರೆಗೆ ಬರುವ ಮುನ್ನವೇ ಅದೇ ಕಥಾಹಂದರ ಹೊಂದಿರುವ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರ ಚಿತ್ರಮಂದಿರಗಳಿಗೆ ಪ್ರವೇಶಿಸಿದೆ. ಲಾಕ್‌ಅಪ್ ಖ್ಯಾತಿಯ ಅಂಜಲಿ ಅರೋರಾ, ದೇವ್ ಶರ್ಮಾ ಮತ್ತು ರಜನೀಶ್ ದುಗ್ಗಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಶುಕ್ರವಾರ ತೆರೆಕಂಡಿದೆ. ಆದರೆ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಚಿತ್ರತಂಡ ಹಂಚಿಕೊಂಡ ಪೋಸ್ಟರ್‌ ಒಂದರ ಹಿನ್ನೆಲೆಯಲ್ಲಿ ನಟರೊಬ್ಬರು ಆಧುನಿಕ ಕನ್ನಡಕ ಧರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಾಸ್ಯಕ್ಕೆ ಗ್ರಾಸವಾಗಿದೆ.

ಚಿತ್ರದಲ್ಲಿ ಸುಗ್ರೀವನ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಹಿನ್ನೆಲೆಯಲ್ಲಿ ನಿಂತಿರುವ ಕ್ಯಾರೆಕ್ಟರ್‌ ಆರ್ಟಿಸ್ಟ್ ಒಬ್ಬರು ಚಶ್ಮಾ ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನು ಗಮನಿಸಿದ ಜಾಲತಾಣಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ. “ತ್ರೇತಾಯುಗದಲ್ಲೂ ಕನ್ನಡಕ ಇತ್ತೇ?”, “ಎಡಿಟಿಂಗ್ ಮಾಡುವಾಗ ಕನಿಷ್ಠ ಇದನ್ನಾದರೂ ತೆಗೆಯಬಾರದಿತ್ತೇ?” ಎಂದೆಲ್ಲಾ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಈ ಸಿನಿಮಾದ ಟೀಸರ್ ಬಿಡುಗಡೆಯಾದ ದಿನದಿಂದಲೂ ಇದರ ಪಾತ್ರವರ್ಗದ ಆಯ್ಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿಶೇಷವಾಗಿ ‘ಕಚ್ಚಾ ಬದಾಮ್’ ವೈರಲ್ ಹಾಡಿನ ಮೂಲಕ ಪ್ರಸಿದ್ಧಿಗೆ ಬಂದಿದ್ದ ಅಂಜಲಿ ಅರೋರಾ ಅವರನ್ನು ಸೀತಾಮಾತೆಯ ಪಾತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಟ್ರೋಲ್‌ಗಳಿಗೆ ಉತ್ತರಿಸಿದ್ದ ಅಂಜಲಿ, “ನಾವು ಸಾರ್ವಜನಿಕ ರಂಗದಲ್ಲಿರುವ ಕಲಾವಿದರು, ನಮ್ಮನ್ನು ವಿಮರ್ಶಿಸುವ ಹಕ್ಕು ಜನರಿಗಿದೆ. ಸೀತಾಮಾತೆಯ ಪಾತ್ರಕ್ಕೆ ನನ್ನ ಶೇಕಡಾ 100 ರಷ್ಟು ಶ್ರಮ ಹಾಕಿದ್ದೇನೆ” ಎಂದು ಹೇಳಿಕೊಂಡಿದ್ದರು. ಆದರೆ ಈಗ ಬಿಡುಗಡೆಯಾದ ಪೋಸ್ಟರ್‌ನ ಎಡವಟ್ಟು ಸಿನಿಮಾ ತಂಡಕ್ಕೆ ಮುಜುಗರ ತಂದಿಟ್ಟಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
CBSE ಹೊಸ ಅಧ್ಯಕ್ಷರಾಗಿ IAS ಅಧಿಕಾರಿ ಮಂದೀಪ್ ಭಂಡಾರಿ ನೇಮಕಪೌರ ಕಾರ್ಮಿಕರ 'ಉಪಹಾರ ಭತ್ಯೆ' ಹೆಚ್ಚಿಸಿದ ಸಿಎಂ ಡಿ.ಕೆ. ಶಿವಕುಮಾರ್‌ಗೆ 'DSS ಸಂಚಾಲಕ ಲಕ್ಷ್ಮಣ್ ಸಾಗರ್' ಧನ್ಯವಾದಪಿತೃ ಪಕ್ಷ ಎಂದರೇನು? ಇದು ಪಿತೃ ಪಕ್ಷದ ಮಹತ್ವ!ಪ್ರಧಾನಿ ಮೋದಿಯವರೊಂದಿಗೆ ಮಾರ್ಫ್ ಮಾಡಿದ ಮಹಿಳೆ ಫೋಟೋ: ಸಿಜೆಪಿ ನಾಯಕ ಅಭಿಜಿತ್ ಡಿಪ್ಕೆ ಸೇರಿ ಹಲವರಿಗೆ ನೋಟಿಸ್, ತಿದ್ದಿದ ಚಿತ್ರ ತೆಗೆಯಲು ಮೆಟಾಗೆ ದೆಹಲಿ ಹೈಕೋರ್ಟ್ ಆದೇಶಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ ದೇಶದ್ರೋಹ ಕೇಸ್ ದಾಖಲಿಸಲು 'ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ' ಒತ್ತಾಯBREAKING: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ: ಹಾಸನದ ಶಂಕಿತ ಯುವಕ ಅರೆಸ್ಟ್!ಬೆಂಗಳೂರು ನಗರ ಜಿಲ್ಲೆಯ BWSSB ವ್ಯಾಪ್ತಿ ವಿಸ್ತರಿಸಿ ಸರ್ಕಾರ ಗೆಜೆಟ್ ಅಧಿಸೂಚನೆ ಪ್ರಕಟ!ಬ್ಯಾಂಕ್ ಮುಷ್ಕರ ಹಿನ್ನಲೆ: ಅ.1ರವರೆಗೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಕಾಷನ್ ಡೆಪಾಸಿಟ್ ಕಟ್ಟಲು ಸಮಯ ವಿಸ್ತರಣೆಜ್ಞಾನೇಶ್ ಕುಮಾರ್ ರಾಜೀನಾಮೆ ಬೇಡಿಕೆ: ರಾಹುಲ್ ಗಾಂಧಿ ಆರೋಪಗಳ ನಡುವೆ ಚಿರಾಗ್ ಪಾಸ್ವಾನ್‌ರಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಸಲಹೆವಿಮಾನ ಹತ್ತುವ ಮುನ್ನ ಮದ್ಯಪಾನ ಮಾಡಿರುವುದು ಪತ್ತೆ: ಏರ್ ಇಂಡಿಯಾ ಪೈಲಟ್ ಕರ್ತವ್ಯದಿಂದ ವಜಾ