LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾಜಿ ಸಿಎಂ: ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ರಾಜಕೀಯದ ಬಳಿಕ ಇದೀಗಾ ಸಿನಿಮಾ ಲೋಕಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಸಿನಿಮಾವೊಂದರಲ್ಲಿ ಅಭಿನಯಿಸಲು ಬಣ್ಣ ಹಚ್ಚಿದ್ದಾರೆ.

ಹೌದು. ಮಾಜಿ ಸಿಎಂ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದು, ಚುನಾವಣಾ ರಾಜಕೀಯದಿಂದ ದೂರ ಸರಿಯುವ ಮಾತಿನ ಬೆನ್ನಲ್ಲೇ ಸಿದೀಗ ಬೆಳ್ಳಿತೆರೆಗೆ ಕಾಲಿಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ.

ನಿಜ ಜೀವನದಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, ಈಗ ರೀಲ್ ಲೈಫ್‌ನಲ್ಲೂ ಮುಖ್ಯಮಂತ್ರಿಯ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ನಟ ಹಾಗೂ ನಿರ್ಮಾಪಕ ರಾಜೇಶ್ ಗೌಡ ಅವರ ಆರ್.ಎ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ ಹೊಸ ಸಿನಿಮಾಗೆ ‘ಮುಖ್ಯಮಂತ್ರಿ’ ಎಂಬ ಟೈಟಲ್ ಇಡುವ ಸಾಧ್ಯತೆಯಿದ್ದು, ಈಗಾಗಲೇ ನಿರ್ದೇಶಕರು ಹೇಳಿದ ಕಥೆಯನ್ನು ಕೇಳಿ ಮೆಚ್ಚಿಕೊಂಡಿರುವ ಸಿದ್ದರಾಮಯ್ಯ ಅವರು, ಸಿನಿಮಾದಲ್ಲಿ ಪ್ರಮುಖವಾಗಿ ಬರುವ ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಿನಿಮಾದ ಚಿತ್ರಕಥೆ ಬರೆಯುವುದರಿಂದ ಹಿಡಿದು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವವರೆಗಿನ ಎಲ್ಲಾ ಹಂತಗಳನ್ನು ಕೇವಲ 48 ಗಂಟೆಗಳಲ್ಲಿ ಮುಗಿಸಿ ವಿಶ್ವ ದಾಖಲೆ ಬರೆಯುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚಿತ್ರತಂಡ ಹೊಂದಿದ್ದು, ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಮಾಜಿ ಸಿಎಂ ಸಿದ್ದರಾಮಯ್ಯ. ಸುದೀರ್ಘ ಮುಖ್ಯಮಂತ್ರಿ ಎಂಬ ದಾಖಲೆ ನಿರ್ಮಿಸಿದ್ದ ಸಿದ್ದರಾಮಯ್ಯ ಇದೀಗ ಸಿನಿಲೋಕದಲ್ಲಿಯೂ ಕೇವಲ 48 ಗಂಟೆಗಳಲ್ಲಿ ಸಿನಿಮಾ ಮುಗಿಸುವ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲಾದರೂ ಅವರಿಗೆ ನಟನೆ ಹಾಗೂ ಸಿನಿಮಾ ಹೊಸದೇನಲ್ಲ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, 2017 ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ಸಮ್ಮರ್ ಹಾಲಿಡೇಸ್ ಎಂಬ ಮಕ್ಕಳ ಚಿತ್ರದಲ್ಲೂ ಸಣ್ಣದೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ, ಸಿದ್ದರಾಮಯ್ಯ ಅವರ ಜೀವನಗಾಥೆಯನ್ನಾಧರಿಸಿದ ಲೀಡರ್ ರಾಮಯ್ಯ ಎಂಬ ಬಯೋಪಿಕ್ ಚಿತ್ರದ ಕೆಲಸಗಳೂ ಪ್ರತ್ಯೇಕವಾಗಿ ನಡೆಯುತ್ತಿದ್ದು, ಅದರಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ ಸೇತುಪತಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಬಗ್ಗೆ ಸಿದ್ದರಾಮಯ್ಯನವರ ಆಪ್ತ ಹೆಚ್​​ಎಂ ರೇವಣ್ಣ ಮಾತನಾಡಿದ್ದು, ಹಿಂದೆ ಅದ್ಯಾವುದೋ ಸಿನಿಮಾದಲ್ಲಿ ನಟಿಸಿದ್ರು. ಮೊದ ಮೊದಲು ಹೇ ಬೇಡ ಇದೆಲ್ಲ ಆಗಲ್ಲ ಅಂತ ಹೇಳಿದ್ರು. ಆಮೆಲೇ ಹೇಳಿ ಒಪ್ಪಿಸಿದ್ದೇವೆ. 48 ಗಂಟೆಗಳಲ್ಲಿ ಸಿನಿಮಾವನ್ನು ಶೂಟ್ ಮಾಡಲು ತಂಡ ಪ್ಲಾನ್ ಮಾಡಿದ್ದು, ಇದರಲ್ಲಿ ಡಿ.ಕೆ ಶಿವಕುಮಾರ್, ಉಮಾಶ್ರಿ ಅವರು ನಟಿಸೋ ಸಾಧ್ಯತೆ ಇದೆ ಎಂದಿದ್ದಾರೆ.

ಕೇವಲ ಸಿದ್ದರಾಮಯ್ಯ ಜೊತೆ ರಾಜ್ಯದ ಪ್ರಮುಖ ರಾಜಕೀಯ ದಿಗ್ಗಜರನ್ನೇ ಒಂದೇ ಸಿನಿಮಾದಲ್ಲಿ ತರಲು ರಾಜೇಶ್ ಗೌಡ ಯೋಜನೆ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರ ಸಿನಿಮ ಅಜರ್ನಿ ಹೇಗಿರಲಿದೆ ಎಂಬುದು ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
CBSE ಹೊಸ ಅಧ್ಯಕ್ಷರಾಗಿ IAS ಅಧಿಕಾರಿ ಮಂದೀಪ್ ಭಂಡಾರಿ ನೇಮಕಪೌರ ಕಾರ್ಮಿಕರ 'ಉಪಹಾರ ಭತ್ಯೆ' ಹೆಚ್ಚಿಸಿದ ಸಿಎಂ ಡಿ.ಕೆ. ಶಿವಕುಮಾರ್‌ಗೆ 'DSS ಸಂಚಾಲಕ ಲಕ್ಷ್ಮಣ್ ಸಾಗರ್' ಧನ್ಯವಾದಪಿತೃ ಪಕ್ಷ ಎಂದರೇನು? ಇದು ಪಿತೃ ಪಕ್ಷದ ಮಹತ್ವ!ಪ್ರಧಾನಿ ಮೋದಿಯವರೊಂದಿಗೆ ಮಾರ್ಫ್ ಮಾಡಿದ ಮಹಿಳೆ ಫೋಟೋ: ಸಿಜೆಪಿ ನಾಯಕ ಅಭಿಜಿತ್ ಡಿಪ್ಕೆ ಸೇರಿ ಹಲವರಿಗೆ ನೋಟಿಸ್, ತಿದ್ದಿದ ಚಿತ್ರ ತೆಗೆಯಲು ಮೆಟಾಗೆ ದೆಹಲಿ ಹೈಕೋರ್ಟ್ ಆದೇಶಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ ದೇಶದ್ರೋಹ ಕೇಸ್ ದಾಖಲಿಸಲು 'ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ' ಒತ್ತಾಯBREAKING: ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ಆರೋಪ: ಹಾಸನದ ಶಂಕಿತ ಯುವಕ ಅರೆಸ್ಟ್!ಬೆಂಗಳೂರು ನಗರ ಜಿಲ್ಲೆಯ BWSSB ವ್ಯಾಪ್ತಿ ವಿಸ್ತರಿಸಿ ಸರ್ಕಾರ ಗೆಜೆಟ್ ಅಧಿಸೂಚನೆ ಪ್ರಕಟ!ಬ್ಯಾಂಕ್ ಮುಷ್ಕರ ಹಿನ್ನಲೆ: ಅ.1ರವರೆಗೆ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಕಾಷನ್ ಡೆಪಾಸಿಟ್ ಕಟ್ಟಲು ಸಮಯ ವಿಸ್ತರಣೆಜ್ಞಾನೇಶ್ ಕುಮಾರ್ ರಾಜೀನಾಮೆ ಬೇಡಿಕೆ: ರಾಹುಲ್ ಗಾಂಧಿ ಆರೋಪಗಳ ನಡುವೆ ಚಿರಾಗ್ ಪಾಸ್ವಾನ್‌ರಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಸಲಹೆವಿಮಾನ ಹತ್ತುವ ಮುನ್ನ ಮದ್ಯಪಾನ ಮಾಡಿರುವುದು ಪತ್ತೆ: ಏರ್ ಇಂಡಿಯಾ ಪೈಲಟ್ ಕರ್ತವ್ಯದಿಂದ ವಜಾ