LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳದಲ್ಲಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ಆರೋಪ : ಸರ್ಕಾರಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು

ಕೊಪ್ಪಳ: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲೆಯೊಂದರ ಶಿಕ್ಷಕ ಅಂದನಗೌಡ ಎಂಬಾತನ ವಿರುದ್ಧ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಶಿಕ್ಷಕನ ದುರ್ವರ್ತನೆ ಕುರಿತು ಜಾಗೃತರಾದ ಮಕ್ಕಳು ಮಕ್ಕಳ ಸಹಾಯವಾಣಿಗೆ (Childline) ಕರೆ ಮಾಡಿ ದೂರು ನೀಡಿದ್ದರು. ಮಾಹಿತಿ ತಿಳಿದು ಶಾಲೆಗೆ ಭೇಟಿ ನೀಡಿದ್ದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿಯೂ ವಿದ್ಯಾರ್ಥಿನಿಯರು ಶಿಕ್ಷಕನ ಕೃತ್ಯವನ್ನು ವಿವರವಾಗಿ ತೆರೆದಿಟ್ಟಿದ್ದಾರೆ.

ಈ ಭೀಕರ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆರೋಪಿ ಶಿಕ್ಷಕ ಅಂದನಗೌಡನನ್ನು ಸೇವೆಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!