LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವರು ಅಂದ್ರೆ ಹೀಗೆ ಇರಬೇಕು! ಒಂದೇ ಒಂದು ಮನವಿಗೆ ಕುಡಿಯುವ ನೀರಿನ ಸಮಸ್ಯೆ ಕ್ಲಿಯರ್!

ಹೊಸನಗರ: ನಾಲ್ಕು ವರ್ಷಗಳ ಹಿಂದೆ ಅಳವಡಿಸಿದ್ದ ಪೈಪ್‌‌ಲೈನ್, ಊರ ನಡುವೆ ಎದ್ದುನಿಂತಿದ್ದ ಬೃಹತ್ ನೀರಿನ ಟ್ಯಾಂಕ್... ಆದರೆ ನಲ್ಲಿ ತಿರುಗಿಸಿದರೆ ಹನಿ ನೀರೂ ಬರುತ್ತಿರಲಿಲ್ಲ! ಜಲಜೀವನ್ ಮಿಷನ್ ಯೋಜನೆಯ ಈ ಅಣಕಕ್ಕೆ ಬೇಸತ್ತು ಹೋಗಿದ್ದ ಮಲೆನಾಡಿನ ಕುಗ್ರಾಮವೊಂದರ ಜನರ ಬಾಯಾರಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಗ್ರಾಮಸ್ಥರ ದಶಕದ ಕೂಗಿಗೆ ಸ್ಪಂದಿಸಿದ ಸಚಿವರ ತ್ವರಿತ ನಡೆಗೆ ಹಳ್ಳಿಗರು ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊನ್ನೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಟಗಾರು ಮತ್ತು ಕಡಸೂರು ಹಳ್ಳಿಗಳಲ್ಲಿ ಈ ಸಂಭ್ರಮ ಮನೆಮಾಡಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಪೈಪ್‌ಲೈನ್ ಅಳವಡಿಸಿ, ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಿದ್ದರು. ಆದರೆ ನೀರನ್ನೇ ಒದಗಿಸದೆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅತ್ತ ಸುಳಿಯಲೇ ಇಲ್ಲ. ಪರಿಣಾಮ, ಲಕ್ಷಾಂತರ ರೂಪಾಯಿ ವೆಚ್ಚದ ವ್ಯವಸ್ಥೆ ಕಣ್ಣಮುಂದಿದ್ದರೂ ಜನರಿಗೆ ಒಂದು ಹನಿ ನೀರೂ ಸಿಗದೆ ಪರದಾಡುವಂತಾಗಿತ್ತು.

ಸಚಿವರ ಗಮನ ಸೆಳೆದ ಸಾಮಾಜಿಕ ಹೋರಾಟಗಾರ

ಗ್ರಾಮಸ್ಥರ ಈ ಗೋಳನ್ನು ಕಂಡ ಬೆಂಗಳೂರಿನ ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರು ಸಮಸ್ಯೆ ಬಗೆಹರಿಸಲು ಮುಂದಾದರು. ವಿಷಯದ ಗಂಭೀರತೆಯನ್ನು ಮನಗಂಡು, ನೇರವಾಗಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಹಳ್ಳಿಯ ದುಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು.

ಕ್ಷಣಾರ್ಧದಲ್ಲಿ ಆದೇಶ, ಸ್ಥಳಕ್ಕೆ ಬಂತು ಕೊಳವೆಬಾವಿ ವಾಹನ!

ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಗ್ರಾಮಕ್ಕೆ ಶಾಶ್ವತ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸಚಿವರ ಕಟ್ಟುನಿಟ್ಟಿನ ಆದೇಶ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಇಂದು ಬೋರ್‌ವೆಲ್ ಕೊರೆಯುವ ಯಂತ್ರದೊಂದಿಗೆ ಗ್ರಾಮಕ್ಕೆ ಧಾವಿಸಿ, ಕೊಳವೆಬಾವಿ ಕೊರೆಯುವ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.

ವರ್ಷಗಳಿಂದ ಬಾಯಾರಿ ಕಂಗಾಲಾಗಿದ್ದ ಗ್ರಾಮಕ್ಕೆ ಬೋರ್‌ವೆಲ್ ವಾಹನ ಬರುತ್ತಿದ್ದಂತೆಯೇ ಸ್ಥಳೀಯರಲ್ಲಿ ಹರ್ಷದ ಹೊನಲು ಹರಿಯಿತು. ಸಚಿವ ಈಶ್ವರ್ ಖಂಡ್ರೆ ಕ್ಷಿಪ್ರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯ ಮುಖಂಡರಾದ ಸುರೇಶ್ ಭಟ್, ಪಿ. ರಾಜೇಂದ್ರ, ಸದಾನಂದ, ಅವಿನಾಶ್, ಸದಾಶಿವ, ಗಿರೀಶ್ ಕೊಠಾರಿ, ನರಸಿಂಹ ಕೊಠಾರಿ ಹಾಗೂ ಗಣಪತಿ ಭಟ್ ಸೇರಿದಂತೆ ಗ್ರಾಮಸ್ಥರು ಸಚಿವರ ಭಾವಚಿತ್ರವನ್ನು ಹಿಡಿದು ಕೃತಜ್ಞತೆ ಸಲ್ಲಿಸಿದರು. ಹೋರಾಟಕ್ಕೆ ಸಾಥ್ ನೀಡಿದ ಎಚ್.ಎಂ. ವೆಂಕಟೇಶ್ ಅವರಿಗೂ ಹಳ್ಳಿಗರು ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟಾರೆಯಾಗಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕೊಟ್ಟ ಒಂದೇ ಒಂದು ಮನವಿ, ಮನವರಿಕೆಯ ವಿಚಾರವು ಕ್ಷಿಪ್ರ ನಡೆಯನ್ನು ಇಡುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ. ಗ್ರಾಮೀಣಾಭಿವೃದ್ಧಿ ಸಚಿವರಾದ ನಂತ್ರ ಈಶ್ವರ್ ಖಂಡ್ರೆ ಅವರ ಇಂತಹ ಕಾರ್ಯ ದಿನೇ ದಿನೇ ಹೆಚ್ಚಾಗುತ್ತಿವೆ. ಆ ಮೂಲಕ ಇಲಾಖೆಯನ್ನು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅಣಿಗೊಳಿಸುತ್ತಿರುವುದು ಅಭಿನಂದನಾರ್ಹ ಎಂಬುದು ಸಾರ್ವಜನಿಕರ ಮಾತಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಜನತೆಗೆ ಮತ್ತೊಂದು ಶಾಕ್: ಶೀಘ್ರದಲ್ಲೇ KSRTC ಬಸ್ ಟಿಕೆಟ್ ದರ ಹೆಚ್ಚಳವೆಂದ ಸಾರಿಗೆ ಸಚಿವರುಯುವ ಕಾಂಗ್ರೆಸ್ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಟೈಸ್ ಕಾಪಿ ಬಿಡುಗಡೆಗೊಳಿಸಿದ ಅಧ್ಯಕ್ಷ ಮಂಜುನಾಥ್ ಗೌಡಮುಂದಿನ 2 ತಿಂಗಳಲ್ಲಿ ಮಹಿಳೆಯರಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ: ಸಚಿವ ಬೈರತಿ ಸುರೇಶ್BREAKIN: ಶೀಘ್ರದಲ್ಲೇ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಿರ್ಧಾರ: ಸಚಿವ ಬೈರತಿ ಸುರೇಶ್BREAKING: ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ, ಓರ್ವನ ಕೊಲೆ!BIG UPDATE: ಮಂಗಳೂರಿನ MRPLನಲ್ಲಿ ಭೀಕರ ಸ್ಫೋಟ: ಓರ್ವ ಸಾವು!ವಾಟ್ಸಾಪ್ ಬ್ಯುಸಿನೆಸ್ ಬಳಕೆದಾರರಿಗೆ ಬಿಗ್ ಶಾಕ್; ನಾಳೆಯಿಂದ ಮೆಸೇಜ್’ಗಳಿಗೆ ಶುಲ್ಕ.!SHOCKING: ಮಧ್ಯ ಆಕಾಶದಲ್ಲೇ ಪೈಲಟ್‌ಗಳ ನಡುವೆ ಹೊಡೆದಾಟ! 17,000 ಅಡಿಗೆ ಕುಸಿದ ವಿಮಾನ; ಮುಂದೇನಾಯ್ತು?ವಿಧಾನಸೌಧದಲ್ಲಿ ಉರ್ದು ದಿನಾಚರಣೆಗೆ ಬಿಜೆಪಿ ಕೆಂಡ: ಸರ್ಕಾರದ ತೀರ್ಮಾನಕ್ಕೆ ಸುರೇಶ್ ಕುಮಾರ್ ಆಕ್ಷೇಪ!ಚಾಮುಂಡಿ ಬೆಟ್ಟಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿ: ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಕೆ