LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಟಿಂಗ್ ಆಪರೇಷನ್ ಆರೋಪದ ಸಿಬಿಐ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಬೆಂಗಳೂರು: ಕಾಂಗ್ರೆಸ್ಸಿನ ನಾಯಕರು ಅವರ ಪಕ್ಷದವರ ಸ್ಟಿಂಗ್ ಆಪರೇಷನ್ ಮಾಡಿ, ಕಾಂಗ್ರೆಸ್ ಅನ್ನೇ ಮುಗಿಸುವ ಕೆಲಸವನ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. 

ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಇರಲಿ; ಬೇರೆ ಯಾರೇ ಇರಲಿ. ಆರೋಪ ಮಾಡಿದ ಮೇಲೆ ಬದ್ಧತೆ ಇರಬೇಕು. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಅನುಮಾನ ಯಾರ ಮೇಲೆ ಬರುತ್ತದೆ ಎಂದು ಕೇಳಿದರು. ಸಿದ್ದರಾಮಯ್ಯನವರು ತನಿಖೆ ಕೋರಿ ಮುಖ್ಯಮಂತ್ರಿಗಳಿಗೆ ಅಥವಾ ಜಿಲ್ಲಾಧಿಕಾರಿಗೆ ಪತ್ರ ಬರೆಯಲಿ. ನೀವು ಸಿಬಿಐ ತನಿಖೆ ನಂಬದೇ ಇದ್ದರೆ ಯಾವುದಾದರೂ ಮಾಡಿಸಿ. ಅಥವಾ ನಿಮಗೆ ನಿಜವಾದ ಸತ್ಯ ಬರಲೇಬೇಕು ಅನ್ನೋದಾದ್ರೆ ಸಿಬಿಐಗೆ ಕೊಡಿ, ಸತ್ಯ ಹೊರಗಡೆ ಬರಲಿ ಎಂದು ಒತ್ತಾಯಿಸಿದರು. 

ಸತ್ಯ ಹೊರಕ್ಕೆ ಬರಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶವೇ ಎಂದು ಕೇಳಿದರು. ಒಟ್ಟಾರೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದವರನ್ನು ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂದು ದೂರಿದರು.

ರಾಹುಲ್, ಸೋನಿಯಾ, ಖರ್ಗೆ ಹೆಸರು ಬಿಟ್ಟು ಹೋಗಿದೆಯೇ?

ಎಸ್‍ಐಆರ್ ವಿಚಾರವನ್ನು ಇವರೇ ಮೈಮೇಲೆ ಹಾಕಿಕೊಂಡಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಏನಾದರೂ ಎಸ್‍ಐಆರ್ ನಲ್ಲಿ ಕೈಬಿಟ್ಟಿದೆಯಾ? ಸೋನಿಯಾ ಗಾಂಧಿಯವರ ಹೆಸರನ್ನು ಕೈಬಿಟ್ಟಿದೆಯಾ? ಖರ್ಗೆಯವರದ್ದು ಕೈಬಿಟ್ಟಿದೆಯಾ? ಡಿ.ಕೆ. ಶಿವಕುಮಾರ್ ಅವರದ್ದು ಕೈಬಿಟ್ಟಿದೆಯಾ? ಎಂದು ಅವರು ಪ್ರಶ್ನಿಸಿದರು. ಯಾರ ಹೆಸರು ತೆಗೆದಿದೆ. ತೆಗೆದುಕೊಂಡು ಬನ್ನಿ. ಅವನ್ನು ಸೇರಿಸಲು ಚುನಾವಣಾ ಆಯೋಗವನ್ನು ಭೇಟಿ ಮಾಡೋಣ ಎಂದು ಸವಾಲು ಹಾಕಿದರು. ಬೆಂಕಿಯೇ ಇಲ್ಲ; ನೀವೇ ಹೊಗೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು.

ಕಾಂಗ್ರೆಸ್ಸಿಗೆ ನಾಯಕತ್ವ ಇಲ್ಲ..

ಆನೆ ನಡೆದಿದ್ದೇ ದಾರಿ ಎಂಬಂತೆ ನಡೆದರೆ ಈ ದೇಶದ ಜನರು ಒಪ್ಪುವುದಿಲ್ಲ ಎಂದು ನುಡಿದರು. ಅಂಥ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಅವರಿಗೆ ನಾಯಕತ್ವ ಇಲ್ಲ. ಅವರು ಜನರಿಂದ ಕಣ್ಮರೆ ಆಗುವ ಸ್ಥಿತಿ ಬಂದಿದೆ ಎಂದು ತಿಳಿಸಿದರು. 

ರಾಹುಲ್ ಗಾಂಧಿ ಯಾವತ್ತೂ ದೇಶದ ಪ್ರಧಾನಮಂತ್ರಿ ಆಗುವುದಿಲ್ಲ. ಯಾಕೆಂದರೆ ಆ ಶಕ್ತಿ, ಆ ಪ್ರೌಢಿಮೆ, ಬುದ್ಧಿವಂತಿಕೆ ಅವರಲ್ಲಿ ಇಲ್ಲ. ಆದ್ದರಿಂದ ಜನ ಅವರನ್ನು ಈಗಾಗಲೇ ತಿರಸ್ಕಾರ ಮಾಡಿ ಆಗಿದೆ. ನನ್ನ ಪ್ರಕಾರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಅವರು ಯೋಗ್ಯರಲ್ಲ, ಅವರು ರಾಜೀನಾಮೆ ಕೊಡುವಂತದ್ದು ಸೂಕ್ತ ಅಂತ ನಾನು ಅವರಿಗೆ ಸಲಹೆ ಕೊಡಲಿಕ್ಕೆ ಬಯಸುತ್ತೇನೆ ಎಂದು ಹೇಳಿದರು.

ವಯಸ್ಸಾದವರ ಜೊತೆ ಇಬ್ಬರು ಕ್ಲರ್ಕುಗಳು..

ಸೋನಿಯಾ ಗಾಂಧಿಯವರು, ಮಲ್ಲಿಕಾರ್ಜುನ ಖರ್ಗೆಯವರು ಇಬ್ಬರೂ ಹಿರಿಯರು, ಪಾಪ ಇಬ್ಬರಿಗೂ ವಯಸ್ಸಾಗಿದೆ, ಅವರಿಗೆ 84-85 ವರ್ಷಗಳಾಗಿದೆ. ಅವರನ್ನು ಬಿಟ್ಟರೆ ಇಬ್ಬರು ಕ್ಲರ್ಕುಗಳಿದ್ದಾರೆ. ವೇಣುಗೋಪಾಲ್ ಮತ್ತು ಸುರ್ಜೇವಾಲಾ- ಇಬ್ಬರು ಕ್ಲರ್ಕುಗಳು, ಅವರ ಹಿಂದೆ ಒಬ್ಬರು ಬರೋದಿಲ್ಲ. ಅಧಿಕಾರ ಇದ್ದರೆ ಎಟಿಎಂ ನಡೆಸೋಕೆ ಮಾತ್ರ ಅವರು ಇರೋದು ಎಂದು ವ್ಯಂಗ್ಯವಾಡಿದರು.

ಅಂಥವರನ್ನಿಟ್ಟುಕೊಂಡು ಈ ದೇಶ ನಡೆಸಲಿಕ್ಕಾಗುತ್ತಾ ಅಥವಾ ಇವರನ್ನು ಕಟ್ಟಿಕೊಂಡು ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡಲು ಸಾಧ್ಯವೇ ಎಂದು ಕೇಳಿದರು. ಎಸ್‍ಐಆರ್, ಎಸ್‍ಐಆರ್ ಎಂದು ಇಷ್ಟೆಲ್ಲಾ ಮಾತಾಡ್ತಾರೆ. ಅದರಿಂದ ಯಾರಿಗೆ ಅನ್ಯಾಯ ಆಗಿದೆ ಅಂತ ಒಬ್ಬರೂ ಹೊರಗಡೆ ಬಂದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶವನ್ನು ಅಭದ್ರಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ನವರಿಗೆ ಜ್ಞಾನವೇ ಇಲ್ಲ..

ಪ್ರತಿಭಟನೆ ವೇಳೆ ‘ಸುಪ್ರೀಂ ಕೋರ್ಟ್ ಚಲೋ' ಈ ದೇಶದಲ್ಲಿ ಯಾರಾದರೂ ಮಾಡಲು ಸಾಧ್ಯವೇ? ಕಾಂಗ್ರೆಸ್ ನವರಿಗೆ ಜ್ಞಾನವೇ ಇಲ್ಲ, ಅಜ್ಞಾನಿಗಳಂತೆ ನಡೆದುಕೊಂಡಿದ್ದಾರೆ. ಅವರು ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಬಿಟ್ಟಿದ್ದಾರೆ. ದೇಶದಲ್ಲಿ ಅಭದ್ರತೆ ಸೃಷ್ಟಿ ಮಾಡಬೇಕು ಎಂಬ ಅವರಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ವಿಶ್ಲೇಷಿಸಿದರು. ನೀವೇನೇ ಇದ್ದರೂ ಕೋರ್ಟ್ ಹಾಲ್ ನಲ್ಲಿ ಬಂದು ಕೇಸ್ ಇದ್ದಲ್ಲಿ ಕೇಸ್ ಹಾಕಿ, ಅರ್ಜಿ ಹಾಕಿದ್ರೆ ಕೋರ್ಟ್ ಹಾಲ್ ನಲ್ಲಿ ಭೇಟಿಯಾಗೋಣ ಎನ್ನುವ ಮೂಲಕ ಕಪಾಳಮೋಕ್ಷ ಮಾಡಿದ್ದಾರೆ ಎಂದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!