LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್. ವಿ.ಸಂಕನೂರ ಪರ ಸಂಸದ ಬಸವರಾಜ ಬೊಮ್ಮಾಯಿ ಪ್ರಚಾರ

ಹಾವೇರಿ: ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗದಂತೆ ಬದಲಾವಣೆಗಳು ಆಗುತ್ತಿವೆ. ಆದರೆ, ಇಂದಿನ ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ತಂತ್ರಜ್ಞಾನವು ಇಡೀ ದೇಶದ ಜನಪ್ರತಿನಿಧಿಗಳನ್ನು ಅಥವಾ ದೇಶದ ಪ್ರಜಾಪ್ರಭುತ್ವವನ್ನು ಮೀರಿ ಬೆಳೆದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಅವರು ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ವಕೀಲರ ಸಂಘಕ್ಕೆ ಭೇಟಿ ನೀಡಿ  ಪಶ್ಚಿಮ ಪದವೀಧರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ  ಎಸ್.ವಿ ಸಂಕನೂರ ಅವರ ಪರ ಮತಯಾಚನೆಯನ್ನು ಮಾಡಿದರು. 

ಪ್ರಜಾಪ್ರಭುತ್ವದ ತಳಹದಿ

ನಮ್ಮ ಪ್ರಜಾಪ್ರಭುತ್ವವು ಪ್ರಜಾಪ್ರತಿನಿಧಿಗಳ ಪ್ರಜಾಪ್ರಭುತ್ವವಾಗಿದ್ದು, ಇದು ಪಕ್ಷ ಆಧಾರಿತ  ಪ್ರಜಾಪ್ರಭುತ್ವವಾಗಿದೆ  ಎಲ್ಲಾ  ಪದವೀಧರರು ಮತ್ತು ಬುದ್ಧಿವಂತರು ತಮ್ಮ ಪ್ರತಿನಿಧಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.  
​​ಯುವಕರ ಉತ್ಸಾಹ ಮತ್ತು ನ್ಯಾಯವಾದಿಗಳ ಪಾತ್ರ: ಇಂದಿನ ಯುವಕರಲ್ಲಿ ಅತ್ಯಂತ ಉತ್ಸಾಹ ಮತ್ತು ಬಿಸಿ ರಕ್ತವಿರುವುದರಿಂದ, ಕೆಲವೊಮ್ಮೆ ಅವರು ಪರೀಕ್ಷೆಗೆ ಒಳಪಡುವ ಮುಂಚೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಭಾವಕ್ಕೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ದೇಶದ ಕಾನೂನು ತಜ್ಞರು, ನ್ಯಾಯವಾದಿಗಳು, ಕೋರ್ಟ್‌ಗಳು ಹಾಗೂ ಬುದ್ಧಿವಂತರು ದೇಶಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೇಳಿದರು. 

​ಪ್ರಜಾಪ್ರಭುತ್ವ ಮತ್ತು ಜನರ ಅಭಿಪ್ರಾಯ:

ಇವತ್ತಿನ ಪ್ರಜಾಪ್ರತಿನಿಧಿಯ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಇದ್ದು, "ಜನರ ಮಾತು ಅಂತಿಮ"  ಎನ್ನುವ ತತ್ವವನ್ನು ಜೀವಂತವಾಗಿಡಲು ಎಲ್ಲರ ಪ್ರಯತ್ನವಿರಬೇಕು. ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ, ಅತ್ಯಂತ ನ್ಯಾಯಸಮ್ಮತವಾಗಿ ತಮ್ಮ ಕೆಲಸವನ್ನು ಸರ್ವ ಸ್ವತಂತ್ರವಾಗಿ ಮಾಡಬೇಕೆನ್ನುವುದೇ ನ್ಯಾಯಾಂಗದ ಶಕ್ತಿಯಾಗಿದೆ ಎಂದು ಹೇಳಿದರು.
​ಬದಲಾಗುತ್ತಿರುವ ಸವಾಲುಗಳು: ಹೊಸ ತಂತ್ರಜ್ಞಾನಗಳು ಬಂದಾಗ ಮತ್ತು ಆರ್ಥಿಕತೆ ಅಭಿವೃದ್ಧಿಯಾದಾಗ ಜೀವನದ ಶೈಲಿ ಹಾಗೂ ಮೌಲ್ಯಗಳಲ್ಲಿ ಬದಲಾವಣೆಯಾಗುತ್ತದೆ, ಇದರಿಂದ ಸಮಾಜದಲ್ಲಿ ಆಗಾಗ ಹೊಸ ಸವಾಲುಗಳು ಹುಟ್ಟಿಕೊಳ್ಳುತ್ತವೆ.  

​ಸಂಕನೂರ ಸೇವೆ

ಎಸ್. ವಿ. ಸಂಕನೂರವರು ಒಬ್ಬ ಸದೃಢ ರಾಜಕಾರಣಿ ಹಾಗೂ ಸುಮಾರು 25-30 ವರ್ಷಗಳ ಕಾಲ ಟೀಚರ್ ಆಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ಅಭಿವೃದ್ಧಿಗೆ ಹಾಗೂ ಕರ್ನಾಟಕ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾಗಿ ಅವರು ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರಶಂಸಿಸಿದರು.  

ಜನರ ಬೆಂಬಲಕ್ಕೆ ಮನವಿ

ಸಂಕನೂರ ಅವರ 12 ವರ್ಷಗಳ ಅದ್ಭುತ ಸೇವೆಯನ್ನು ಸ್ಮರಿಸಿರುವ ಅವರು, ಸಾರ್ವಜನಿಕರು ಹಾಗೂ ವಕೀಲರು ಇಂತಹ ನಾಯಕರಿಗೆ ಪ್ರಥಮ ಆದ್ಯತೆಯ ಮತ ನೀಡಿ ಬೆಂಬಲಿಸಬೇಕೆಂದ ವಿನಂತಿ ಮಾಡಿಕೊಂಡರು.  
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಕೀಲರ ಸಂಘದ ಅಧ್ಯಕ್ಷರಾದ  ಬಿ.ಹೆಚ್ ಬುರಡಿಕಟ್ಟಿ, ಮುಖಂಡರುಗಳಾದ ಎಸ್.ಎಸ್. ಶಿರಗಂಬಿ, ಕೆ.ಶಿವಲಿಂಗಪ್ಪ,  ಎಸ್.ಎಸ್ ರಾಮಲಿಂಗಣ್ಣವರ, ಡಾ. ಬಸವರಾಜ ಕೇಲಗಾರ,  ಹೆಚ್.ಹೆಚ್ ತಿಮ್ಮೇನಹಳ್ಳಿ, ಶಿವಕುಮಾರ ಮುದ್ದಪ್ಪನವರ, ಭೋಜರಾಜ ಕರೂದಿ,  ಮಂಜುನಾಥ ಕಾಟೆ,  ಸಿದ್ದು ಚಿಕ್ಕಬಿದರಿ ಸೇರಿದಂತೆ ವಕೀಲರ ಸಂಘದ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆ