LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆಯಿಂದ ಮೂರು ದಿನ ಸಾಗರದಲ್ಲಿ ಮೆಸ್ಕಾಂನಿಂದ ಪಿಎಂ ಸೂರ್ಯಘರ್ ಸೋಲಾರ್ ಮೇಳ ಆಯೋಜನೆ

ಸಾಗರ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ವತಿಯಿಂದ ಸಾಗರ ನಗರ ಮತ್ತು ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯ ಗ್ರಾಹಕರಿಗಾಗಿ ‘ಪಿ.ಎಂ ಸೂರ್ಯಘರ್ ಸೇವಾಸೇತು’ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ.

​ದಿನಾಂಕ 15.10.2026 ರಿಂದ 17.10.2026 ರ ವರೆಗೆ ಪ್ರತಿದಿನ ಬೆಳಗ್ಗೆ 10:30 ರಿಂದ ಸಾಗರ ನಗರ ಕಚೇರಿಯ ಆವರಣದಲ್ಲಿ ಈ ಶಿಬಿರವು ನಡೆಯಲಿದೆ.

​ಪಿ.ಎಂ ಸೂರ್ಯಘರ್ ಯೋಜನೆಯಡಿ ಮನೆಯ ಛಾವಣಿಯ ಮೇಲೆ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಳ್ಳಲು ಇಚ್ಛಿಸುವ ಗ್ರಾಹಕರಿಗೆ ಸಂಪೂರ್ಣ ಮಾರ್ಗದರ್ಶನ ನೀಡುವುದು ಈ ಶಿಬಿರದ ಉದ್ದೇಶವಾಗಿದೆ.

ಶಿಬಿರದಲ್ಲಿ ಸೋಲಾರ್ ರೂಫ್ ಟಾಪ್ ಮಾರಾಟಗಾರರು ಹಾಗೂ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಯೋಜನೆಯ ಮಾಹಿತಿ, ಅರ್ಜಿ ನೋಂದಣಿ, ಸರ್ಕಾರದ ಸಹಾಯಧನ (ಸಬ್ಸಿಡಿ) ಮತ್ತು ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಸ್ಥಳದಲ್ಲೇ ವಿವರಗಳನ್ನು ಒದಗಿಸಲಿದ್ದಾರೆ.

​ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಗ್ರಾಹಕರು ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ತರಬೇಕಾಗಿರುತ್ತದೆ. ಸಾಗರ ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಮೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದಲ್ಲಿ CJP ಪ್ರತಿಭಟನೆಗೆ ಅಮೆರಿಕದಿಂದ ಹಣಕಾಸು ನೆರವು ? ಗಾಯಕಿ ಮೇರಿ ಮಿಲ್ಬೆನ್‌ ಗಂಭೀರ ಆರೋಪ!ರಷ್ಯಾ ಸೇನೆಗೆ ಸೇರಿದ ಭಾರತೀಯರೆಷ್ಟು? ಎಷ್ಟು ಮಂದಿ ಸಾವು, ಎಷ್ಟು ಜನ ನಾಪತ್ತೆ? ಸುಪ್ರೀಂಕೋರ್ಟ್‌ಗೆ ಕೇಂದ್ರದ ಮಾಹಿತಿಮನೆಯ ಹಿತ್ತಲಲ್ಲಿ ಬೃಹತ್ ಹೆಬ್ಬಾವು ಪತ್ತೆ | WATCH VIDEOಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ15,000 ಲಂಚ ಪಡೆಯುತ್ತಿದ್ದಾಗಲೇ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆBREAKING: ಜೆಡಿಎಸ್ ಸೋಶಿಯಲ್ ಮೀಡಿಯಾ ತಂಡದ ಯುವಕ ಪೊಲೀಸರು ವಶಕ್ಕೆ: HDK ಕಿಡಿಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಸಿಬ್ಬಂದಿಗೆ ಸಿಬಿಐ ಎಸ್ಪಿ ಆನಂದಕೃಷ್ಣನ್ ಅವರಿಂದ ವಿಶೇಷ ಉಪನ್ಯಾಸಬೆಂಗಳೂರಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ರಿಯಾಕ್ಟರ್ ಸ್ಫೋಟ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ, ಓರ್ವನ ಸ್ಥಿತಿಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಕಬ್ಬು ಬೆಳೆಗಾರರ ಬೇಡಿಕೆ ಪರಿಶೀಲನೆಗೆ ಕೇಂದ್ರದ ಮಹತ್ವದ ಕ್ರಮ: ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ