ಬೆಂಗಳೂರು : ಓವರ್ ಟೆಕ್ ಮಾಡುವ ಬರದಲ್ಲಿ ಲಾರಿಗೆ ಟಚ್ ಆಗಿ ಬೈಕ್ ಸವಾರರೊಬ್ಬ ಕೆಳಗೆ ಬಿದ್ದಿದ್ದಾನೆ ರಸ್ತೆಗೆ ಬಿದ್ದ ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದ ಪರಿಣಾಮ ಜಡಿಗೇನಹಳ್ಳಿ ಬಳಿ ಬಿಹಾರ ಮೂಲಕ ಕಮಲಕಾಂತ್ (36) ಸಾವನಪ್ಪಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಕಮಲಕಾಂತ್ ಸ್ಥಳದಲ್ಲಿ ಸಾವನ್ನಪ್ಪಿದ್ದು ಮಾಲೂರಿನಿಂದ ಹೊಸಕೋಟೆ ಕಡೆಗೆ ಬರುತ್ತಿದ್ದ ವೇಳೆ ಈ ಒಂದು ಅಪಘಾತ ಸಂಭವಿಸಿದೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಬೈಕ್ ಸವಾರ ಪಾರಾಗಿದ್ದಾನೆ ಘಟನಾ ಸ್ಥಳಕ್ಕೆ ಹೊಸಕೋಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.