LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹ್ಯಾಂಡ್‌ಶೇಕ್ ಮಾಡುವಾಗ ಭುಗಿಲೆದ್ದ ಉದ್ವಿಗ್ನತೆ:ಅಭಿಷೇಕ್ ಹಾಗೂ ಕೀಮೋ ಪಾಲ್ ನಡುವಿನ ವಾಗ್ವಾದ ವೈರಲ್!

ಹೈದರಾಬಾದ್‌ನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ20 ಪಂದ್ಯದ ರೋಚಕ ಮುಕ್ತಾಯದ ಬಳಿಕ ಮೈದಾನದಲ್ಲಿ ಮತ್ತೊಂದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಕೈಕುಲುಕುವ (ಹ್ಯಾಂಡ್‌ಶೇಕ್) ಸಂದರ್ಭದಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀಮೋ ಪಾಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಂಪೈರ್‌ಗಳು ಮಧ್ಯಪ್ರವೇಶಿಸಬೇಕಾಯಿತು.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 24 ರನ್‌ಗಳ ರೋಚಕ ಗೆಲುವು ಸಾಧಿಸಿ, ಐದು ಪಂದ್ಯಗಳ ಸರಣಿಯನ್ನು 2-2 ಸಮಬಲಗೊಳಿಸಿತ್ತು. ಪಂದ್ಯದ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಸಾಂಪ್ರದಾಯಿಕವಾಗಿ ಹ್ಯಾಂಡ್‌ಶೇಕ್ ಮಾಡುತ್ತಿದ್ದ ವೇಳೆ, ಅಭಿಷೇಕ್ ಶರ್ಮಾ ಮತ್ತು ಕೀಮೋ ಪಾಲ್ ಪರಸ್ಪರ ತೀವ್ರವಾಗಿ ವಾಗ್ವಾದಕ್ಕಿಳಿದರು. ಇಬ್ಬರ ನಡುವಿನ ಮಾತಿನ ಯುದ್ಧ ಗಯ್ಯಾಳಿ ತಿರುವು ಪಡೆಯುತ್ತಿದ್ದಂತೆ ಎಚ್ಚೆತ್ತ ಮೈದಾನದ ಅಂಪೈರ್‌ಗಳು ಮತ್ತು ಸಹ ಆಟಗಾರರು ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಅಜೇಯ 102 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರೆ, ಭಾರತದ ಪರ ಸಂಜು ಸ್ಯಾಮ್ಸನ್ 56 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಕೀಮೋ ಪಾಲ್ ಕೇವಲ 41 ರನ್ ನೀಡಿ 5 ವಿಕೆಟ್ ಪಡೆದು ಭಾರತದ ಗೆಲುವಿನ ಕನಸಿಗೆ ಅಡ್ಡಿಯಾದರು. ಪಂದ್ಯದ ಸೋಲು-ಗೆಲುವಿನ ಬಿಸಿ ನಡುವೆ ಆಟಗಾರರ ನಡುವಿನ ಈ ಮಾತಿನ ಚಕಮಕಿ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸರಣಿಯು ಈಗ ಸಮಬಲಗೊಂಡಿದ್ದು, ಅಂತಿಮ ಹಾಗೂ ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ  ರಾಜ್ಯಪಾಲರಾದ ಡಾ.ಸುಧಾ ಯಾದವ್ಅಭಿಜಿತ್ ದೀಪ್ಕೆ ಬೆನಲ್ಲೇ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಕೂಡ ಪೊಲೀಸ್ ವಶಕ್ಕೆತನಗಿಂತ 45 ವರ್ಷ ಹಿರಿಯ, 75ರ ವೃದ್ಧನನ್ನು ವಿವಾಹವಾಗಲು ಸಜ್ಜಾದ 30ರ ಸೋಷಿಯಲ್ ಮೀಡಿಯಾ ಬ್ಲಾಗರ್BREAKING: ಸಿಜೆಪಿ ತಿರಂಗ ಯಾತ್ರೆ ಆರಂಭ: ರ್ಯಾಲಿಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆಪತಿಯನ್ನು ಕೊಂದು ಹಾವು ಕಚ್ಚಿದೆ ಎಂದು ನಾಟಕ! ಪತ್ನಿ, ಪ್ರಿಯಕರನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್ಸಿಜೆಪಿ ಪ್ರತಿಭಟನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ ? ಬಿಜೆಪಿ ನಾಯಕ ಬ್ರಿಜ್ ಭೂಷಣ್ ಗಂಭೀರ ಆರೋಪ!ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ ಜತೆಗಿನ ವಿಶೇಷ ಕ್ಷಣ ಸ್ಮರಿಸಿದ ಪದಕ ವಿಜೇತ ಜಯ್ ಮೀನಾ!ಭಾರತ-ವೆಸ್ಟ್ ಇಂಡೀಸ್ 5ನೇ ಟಿ20 ಪಂದ್ಯ: ಗಾಯಗೊಂಡ ಅರ್ಷ್‌ದೀಪ್ ಸಿಂಗ್ ಬದಲಿಗೆ ತಂಡಕ್ಕೆ ಕಂಬ್ಯಾಕ್ ಮಾಡಿದ ಭುವನೇಶ್ವರ್ ಕುಮಾರ್!ತಿರಂಗಾ ಮೆರವಣಿಗೆ ನಡೆಸಿದರೆ ‘ಅಭಿಜೀತ್ ದೀಪ್ಕೆ’ ಬಂಧನವಾಗುತ್ತಾ? ದೆಹಲಿ ಪೊಲೀಸರ ನೋಟಿಸ್‌ನ ಅರ್ಥವೇನು?ಸಾಮಾಜಿಕ-ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಒಂದು ವಾರದ ಗಡುವು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ;