LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ  ರಾಜ್ಯಪಾಲರಾದ ಡಾ.ಸುಧಾ ಯಾದವ್

ಬೆಂಗಳೂರು: ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರೊಂದಿಗೆ  ನಗರದ  ಸುರಭಾರತಿ ಸಂಸ್ಕೃತ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಶಾರದಾ ದೇವಾಲಯಕ್ಕೆ ಸಂಜೆ  ಭೇಟಿ ನೀಡಿದರು. 

ಸರ್ವಜ್ಞ ನಗರ ವಿಧಾನಸಭಾ  ಕ್ಷೇತ್ರದ ಸುರಭಾರತಿ ಕ್ಷೇತ್ರಕ್ಕೆ ರಾಜ್ಯಪಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಜಾರ್ಜ್,  ಪ್ರತಿಷ್ಠಾನದಲ್ಲಿ ಪೂಜಾ ವಿಧಿವಿಧಾನಗಳು ಸಂಪನ್ನಗೊಳ್ಳುವವರೆಗೂ ಅವರ ಜತೆ ಇದ್ದರು.

 ಶರನ್ನವರಾತ್ರಿ ಮಹೋತ್ಸವದ ಆರನೇ ದಿನದ ವಿಶೇಷ ಸಂದರ್ಭದಲ್ಲಿ ವೀಣಾಪಾಣಿಯಾದ ಶ್ರೀಶಾರದೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.  ವೇದ ಮಂತ್ರ ಘೋಷಗಳ ನಡುವೆ ಲಕ್ಷ ಕುಂಕುಮಾರ್ಚನೆಯೂ ನಡೆಯಿತು. ಈ  ಧಾರ್ಮಿಕ ಕೈಂಕರ್ಯದಲ್ಲಿ ರಾಜ್ಯಪಾಲರು ಮತ್ತು ಸಚಿವರು ಪಾಲ್ಗೊಂಡರು.

ಡಾ. ಸುಧಾ ಯಾದವ್ ಅವರು ಪ್ರಮಾಣ ವಚ‌ನ ಸ್ವೀಕರಿಸಿ ಲೋಕಭವನ ಅಧಿಕಾರ ವಹಿಸಿಕೊಂಡ ಬಳಿಕ ಗಣ್ಯರ ಶುಭ ಹಾರೈಕೆ ಸ್ವೀಕರಿಸಿ ಶ್ರೀಶಾರದಾಂಬೆಯ ದರ್ಶನಾಶಿರ್ವಾದ ಪಡೆದುಕೊಂಡರು.  ಬಳಿಕ ವಿಶೇಷ ಗೊಂಬೆಗಳ‌  ಪ್ರದರ್ಶನವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲರೊಂದಿಗೆ ಅವರ ಕುಟುಂಬಸ್ಥರೂ ಇದ್ದರು. ಶ್ರೀ ಸುರಭಾರತೀ ಪ್ರತಿಷ್ಠಾನದ ಟ್ರಸ್ಟಿ ನಾಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ  ರಾಜ್ಯಪಾಲರಾದ ಡಾ.ಸುಧಾ ಯಾದವ್ಅಭಿಜಿತ್ ದೀಪ್ಕೆ ಬೆನಲ್ಲೇ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಕೂಡ ಪೊಲೀಸ್ ವಶಕ್ಕೆತನಗಿಂತ 45 ವರ್ಷ ಹಿರಿಯ, 75ರ ವೃದ್ಧನನ್ನು ವಿವಾಹವಾಗಲು ಸಜ್ಜಾದ 30ರ ಸೋಷಿಯಲ್ ಮೀಡಿಯಾ ಬ್ಲಾಗರ್BREAKING: ಸಿಜೆಪಿ ತಿರಂಗ ಯಾತ್ರೆ ಆರಂಭ: ರ್ಯಾಲಿಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆಪತಿಯನ್ನು ಕೊಂದು ಹಾವು ಕಚ್ಚಿದೆ ಎಂದು ನಾಟಕ! ಪತ್ನಿ, ಪ್ರಿಯಕರನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್ಸಿಜೆಪಿ ಪ್ರತಿಭಟನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ ? ಬಿಜೆಪಿ ನಾಯಕ ಬ್ರಿಜ್ ಭೂಷಣ್ ಗಂಭೀರ ಆರೋಪ!ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ ಜತೆಗಿನ ವಿಶೇಷ ಕ್ಷಣ ಸ್ಮರಿಸಿದ ಪದಕ ವಿಜೇತ ಜಯ್ ಮೀನಾ!ಭಾರತ-ವೆಸ್ಟ್ ಇಂಡೀಸ್ 5ನೇ ಟಿ20 ಪಂದ್ಯ: ಗಾಯಗೊಂಡ ಅರ್ಷ್‌ದೀಪ್ ಸಿಂಗ್ ಬದಲಿಗೆ ತಂಡಕ್ಕೆ ಕಂಬ್ಯಾಕ್ ಮಾಡಿದ ಭುವನೇಶ್ವರ್ ಕುಮಾರ್!ತಿರಂಗಾ ಮೆರವಣಿಗೆ ನಡೆಸಿದರೆ ‘ಅಭಿಜೀತ್ ದೀಪ್ಕೆ’ ಬಂಧನವಾಗುತ್ತಾ? ದೆಹಲಿ ಪೊಲೀಸರ ನೋಟಿಸ್‌ನ ಅರ್ಥವೇನು?ಸಾಮಾಜಿಕ-ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಒಂದು ವಾರದ ಗಡುವು: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ;