ಟಾಲಿವುಡ್ನ ಚಾರ್ಮಿಂಗ್ ಬ್ಯೂಟಿ ಶ್ರೀಲೀಲಾ ಅವರ ಬಹುನಿರೀಕ್ಷಿತ ಹಿಂದಿ ಚೊಚ್ಚಲ (ಬಾಲಿವುಡ್) ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದೆ. ಖ್ಯಾತ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸುತ್ತಿರುವ ಈ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಚಿತ್ರಕ್ಕೆ ಪ್ರಸಿದ್ಧ ನಿರ್ದೇಶಕ ಅನುರಾಗ್ ಬಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುದೀರ್ಘ ದಿನಗಳಿಂದ ಚಿತ್ರೀಕರಣ ಹಂತದಲ್ಲಿದ್ದ ಈ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಅಪಾರ ಸಂತಸ ತಂದಿದೆ.
ಚಿತ್ರೀಕರಣದ ವಿಳಂಬ ಹಾಗೂ ಕಾಲ್ಶೀಟ್ ಸಮಸ್ಯೆಗಳಿಂದಾಗಿ ಹಲವು ದಿನಗಳಿಂದ ತಡೆಹಿಡಿಯಲ್ಪಟ್ಟಿದ್ದ ಈ ಶೀರ್ಷಿಕೆ ಇಡದ ಪ್ರೇಮಕಥೆಯು, 2027 ರ ಏಪ್ರಿಲ್ 30 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಮೊದಲು ಈ ಸಿನಿಮಾ ಪ್ರಸಿದ್ಧ ‘ಆಶಿಕಿ 3’ ಸರಣಿಯ ಭಾಗವಾಗಿರಲಿದೆ ಎಂದು ವದಂತಿಗಳು ಹರಿದಾಡಿದ್ದವು. ಆದರೆ ತಾಜಾ ವರದಿಗಳ ಪ್ರಕಾರ, ಈ ಚಿತ್ರಕ್ಕೂ ‘ಆಶಿಕಿ’ ಸರಣಿಗೂ ಯಾವುದೇ ಸಂಬಂಧವಿಲ್ಲ ಉಲ್ಲೇಖಿಸಲಾಗಿದ್ದು, ‘ತು ಮೇರಿ ಜಿಂದಗಿ ಹೈ’ ಎಂಬ ಶೀರ್ಷಿಕೆಯಲ್ಲಿ ಸ್ವತಂತ್ರ ಪ್ರೇಮಕಥೆಯಾಗಿ ಮೂಡಿಬರುತ್ತಿದೆ ಎನ್ನಲಾಗಿದೆ.
ಈ ಬಹುನಿರೀಕ್ಷಿತ ಪ್ರೇಮಕಥಾ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಸಂಗೀತ ಸಂಯೋಜಿಸುತ್ತಿದ್ದು, ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಅವರು ಅತ್ಯಂತ ಬೃಹತ್ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಕ್ಸಸ್ ಕಂಡ ಬಳಿಕ ಬಾಲಿವುಡ್ಗೆ ಕಾಲಿಡುತ್ತಿರುವ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಜೋಡಿಯನ್ನು ಬೆಳ್ಳಿಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.