ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಬ್ಬರು ಹೈಟೆಕ್ ಭೀಕ್ಷುಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಟರ್ಮಿನಲ್ ಎರಡರ ನಿರ್ಗಮನ ದ್ವಾರದ ಬಳಿ ಅರೆಸ್ಟ್ ಮಾಡಲಾಗಿದೆ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾಲಾ ವೇಷಧಾರಿಯಾಗಿ ಬಂದು ಭಿಕ್ಷಾಟನೆ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮೊದಲು ಎಚ್ಚರಿಕೆ ನೀಡಿ ಕಳುಹಿಸಿದರು ಕೂಡ ಮತ್ತೆ ಬಂದು ಭಿಕ್ಷಾಟನೆ ಮಾಡಿದ್ದಾರೆ. ವೆಂಕಟೇಶ್ ಕುಮಾರ್ ಮತ್ತು ಪ್ರತೀಕ್ ಬಾಟಿಯ ಎಂಬವರನ್ನು ಅರೆಸ್ಟ್ ಮಾಡಲಾಗಿದೆ. ಏರ್ಪೋರ್ಟ್ಗೆ ಕಳೆದ ಎರಡು ದಿನಗಳಿಂದ ಇಬ್ಬರು ಬಂದಿದ್ದರು ಎಚ್ಚರಿಕೆ ನೀಡಿ ಕಳುಹಿಸಿದರು ಮತ್ತೆ ಬಂದಾಗ ಅರೆಸ್ಟ್ ಮಾಡಲಾಗಿದೆ.