LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಡೋಮ್ ಜಾಹೀರಾತು ಎಂದವರಿಗೆ ರಾಕಿ ಭಾಯ್ ಕಡಕ್ ತಿರುಗೇಟು: ಯಶ್ ನೀಡಿದ ಪವರ್‌ಫುಲ್ ಉತ್ತರವೇನು?

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಪ್ರಾದೇಶಿಕ ಭೇದಭಾವ ಬದಿಗಿಟ್ಟು ಉತ್ತಮ ಸಿನಿಮಾಗಳನ್ನು ಬೆಂಬಲಿಸಬೇಕು ಎಂದು ನಟ ರಾಕಿಂಗ್ ಸ್ಟಾರ್ ಯಶ್ ಕರೆ ನೀಡಿದ್ದಾರೆ. ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ವಿಶೇಷ ಮನವಿ ಮಾಡುವ ಮೂಲಕ ಸಿನಿಮಾ ಕುರಿತ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಗ್ಗೆ ಈ ಹಿಂದೆ ಕೆಲವು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ‘ರಾಮಾಯಣ’ ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರ ಮಾತುಗಳು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿವೆ.

‘ಈ ಸಿನಿಮಾ ಕುಟುಂಬ ಸಮೇತ ಕುಳಿತು ನೋಡುವಂಥದ್ದು’

ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಯಶ್, “ಎಂಟೈರ್ ಕನ್ನಡಿಗರಿಗೆ ನನ್ನ ಕಡೆಯಿಂದ ರಿಕ್ವೆಸ್ಟ್ ಮಾಡಿಕೊಳ್ತೇನೆ. ಯಾರು ಏನೇ ಮಾತಾಡಲಿ, ಈ ಸಿನಿಮಾ ಮನೆಮಂದಿಯೆಲ್ಲ, ಮಕ್ಕಳೆಲ್ಲ ಕುಳಿತುಕೊಂಡು ನೋಡುವಂಥ ಸಿನಿಮಾ. ಯಾವ ಸಿನಿಮಾ ಯಾರಿಗಾಗಿ ಮಾಡಬೇಕು ಅಂತ ನಮಗೆ ಗೊತ್ತಿರುತ್ತೆ” ಎಂದು ಹೇಳಿದರು.

ಈ ಮೂಲಕ ಸಿನಿಮಾಗಳನ್ನು ನೋಡುವ ಮೊದಲೇ ಅವುಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವವರಿಗೂ ಅವರು ಪರೋಕ್ಷವಾಗಿ ಉತ್ತರ ನೀಡಿದರು.

‘ಒಳಜಗಳ ಮಾಡಿಕೊಂಡರೆ ಜಗತ್ತಿಗೆ ಸವಾಲು ಹಾಕಲು ಸಾಧ್ಯವಿಲ್ಲ’

ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೆಳೆಯಬೇಕಾದರೆ, ಚಿತ್ರರಂಗದವರು ಪರಸ್ಪರ ಬೆಂಬಲಿಸುವುದು ಮುಖ್ಯ ಎಂದು ಯಶ್ ಅಭಿಪ್ರಾಯಪಟ್ಟರು.

“ಕೆಲವೊಮ್ಮೆ ಗಡಿ ದಾಟಿ, ಪಣಕಿಟ್ಟು ಸೋಲು-ಗೆಲುವು ಮೀರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತವೆ. ಕೆಲವೊಮ್ಮೆ ಮುಂದೆ ಬರುವವರಿಗೆ ಮೆಟ್ಟಿಲಾಗುತ್ತವೆ. ಆ ಮೆಟ್ಟಿಲು ಕೆತ್ತುವ ಕೆಲಸವನ್ನು ಆ ಕಾಲದಲ್ಲಿ ಪ್ರತಿಯೊಬ್ಬರೂ ಮಾಡಬೇಕು” ಎಂದು ಅವರು ಹೇಳಿದರು.

https://x.com/SreeDharaNEL/status/2110766691580039572

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗಳ ವಿಎಫ್‌ಎಕ್ಸ್, ನಟರ ಅಭಿನಯ ಹಾಗೂ ತಾಂತ್ರಿಕ ಗುಣಮಟ್ಟದ ಬಗ್ಗೆ ನಡೆಯುವ ಟೀಕೆಗಳ ಬಗ್ಗೆಯೂ ಯಶ್ ಮಾತನಾಡಿದರು.

“ನಾವು ಯಾವಾಗಲಾದರೂ ಹೊರಗಡೆ ಹೋಗಿ ಏನಾದರೂ ಸಾಧಿಸಬೇಕು ಎಂದಾಗ, ನಮ್ಮೊಳಗೆ ಜಗಳ ಮಾಡಿಕೊಂಡು ಕುಳಿತರೆ ಜಗತ್ತಿಗೆ ಸವಾಲು ಹಾಕಲು ಸಾಧ್ಯವಿಲ್ಲ. ಬ್ರಿಟಿಷರು ಅನುಸರಿಸಿದ್ದು ಇದೇ ‘ಡಿವೈಡ್ ಆ್ಯಂಡ್ ರೂಲ್’ ನೀತಿ. ನಾವು ಏನಾದರೂ ಸಾಧಿಸಬೇಕಾದರೆ ಎಲ್ಲರೂ ಒಂದಾಗಬೇಕು. ಸಿನಿಮಾದ ಕಲೆ ಮತ್ತು ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಮೆಚ್ಚಬೇಕು” ಎಂಬ ಸಂದೇಶ ನೀಡಿದರು.

ರಣಬೀರ್ ಕಪೂರ್ ಬದ್ಧತೆಯನ್ನು ಹೊಗಳಿದ ಯಶ್

‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಅವರ ಕೆಲಸದ ಬಗ್ಗೆಯೂ ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಪಾತ್ರಕ್ಕಾಗಿ ರಣಬೀರ್ ತೋರುತ್ತಿರುವ ಶ್ರದ್ಧೆ, ಏಕಾಗ್ರತೆ ಮತ್ತು ಬದ್ಧತೆ ಪ್ರಶಂಸನೀಯ ಎಂದು ಹೇಳಿದರು.

ನಿತೇಶ್ ತಿವಾರಿ ನಿರ್ದೇಶನದಲ್ಲಿ, ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ, ಸಿನಿಮಾ ಕ್ಷೇತ್ರದಲ್ಲಿ ಪರಸ್ಪರ ಕಾಲೆಳೆಯುವುದಕ್ಕಿಂತ ಉತ್ತಮ ಪ್ರಯತ್ನಗಳನ್ನು ಗುರುತಿಸಿ ಬೆಂಬಲಿಸುವುದು ಮುಖ್ಯ ಎಂಬ ಯಶ್ ಅವರ ಮಾತುಗಳು ಗಮನ ಸೆಳೆದಿವೆ. ಪ್ರಾದೇಶಿಕ ಗಡಿಗಳನ್ನು ಮೀರಿ ಭಾರತೀಯ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕೆಂಬ ಅವರ ಸಂದೇಶ ಇದೀಗ ಚರ್ಚೆಯ ವಿಷಯವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!