ಬಾಗಲಕೋಟೆ : ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆ ಪ್ರಕರಣವು ತೀವ್ರ ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಸಣ್ಣಪುಟ್ಟ ಮಾತಿನ ಚಕಮಕಿಯಿಂದ ಆರಂಭವಾದ ಈ ವಿವಾದವು ವಿಕೋಪಕ್ಕೆ ತಿರುಗಿ ದಲಿತ ಯುವಕರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಕಳವಳಕ್ಕೆ ಕಾರಣವಾಗಿದೆ.
ಈ ಘಟನೆಯಲ್ಲಿ ಆಕಾಶ್ ಮಹಾದೇವ ಹರಿಜನ, ವಳಗಡ ಊರಪ್ಪ ಮಾದರ, ದರ್ಶನ್ ವಿಜಯ್ ಮಡ್ಡಿಮನಿ ಹಾಗೂ ವಿನಾಯಕ್ ಚವ್ಹಾಣ್ ಗಾಯಗೊಂಡಿದ್ದಾರೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯಬೇಕು ಹಾಗೂ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.