LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಂಭೀರವಲ್ಲದ ಅಪರಾಧಗಳ ತನಿಖೆಗೆ ದೂರುದಾರರು ಮ್ಯಾಜಿಸ್ಟ್ರೇಟ್ ಬಳಿ ಹೋಗಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು: ಗಂಭೀರ ಸ್ವರೂಪದ್ದಲ್ಲದ ಅಸಂಜ್ಞೆಯ (Non-cognizable) ಅಪರಾಧಗಳ ತನಿಖೆಗೆ ಅನುಮತಿ ಪಡೆಯುವ ಕುರಿತಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ತನಿಖೆಗೆ ಅನುಮತಿ ಕೋರಿ ಮೊದಲಿಗೆ ದೂರುದಾರರನ್ನೇ ಮ್ಯಾಜಿಸ್ಟ್ರೇಟ್ ಬಳಿ ಕಳುಹಿಸಬೇಕು ಎಂಬ ಕಡ್ಡಾಯವಿಲ್ಲ. ಬದಲಾಗಿ, ತನಿಖಾಧಿಕಾರಿ ಅಥವಾ ಪೊಲೀಸರೇ ನೇರವಾಗಿ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿ ತನಿಖೆಗೆ ಅನುಮತಿ ಪಡೆಯಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದರ ರದ್ದತಿಗೆ ಕೋರಿ ಸುಶೀಲ್ ಮಂಡಲ್ ಮತ್ತಿತರ ಏಳು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲರು, ತನಿಖಾಧಿಕಾರಿಯೇ ನೇರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು. ಆದರೆ, ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)-2023ರ ಸೆಕ್ಷನ್ 174(1) ಹಾಗೂ ಹಳೆಯ ಸಿಆರ್‌ಪಿಸಿ ಸೆಕ್ಷನ್ 155(2)ರ ಅಡಿಯಲ್ಲಿ ತನಿಖೆಗೆ ಅನುಮತಿ ಕೋರುವ ಅಧಿಕಾರ ಕೇವಲ ದೂರುದಾರರಿಗೆ ಮಾತ್ರ ಸೀಮಿತವಾಗಿಲ್ಲ. ತನಿಖಾಧಿಕಾರಿ ಅಥವಾ ಪೊಲೀಸ್ ಠಾಣಾಧಿಕಾರಿ ನೇರವಾಗಿ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸುವುದನ್ನು ನಿಷೇಧಿಸುವ ಯಾವುದೇ ನಿಯಮಗಳು ಕಾನೂನಿನಲ್ಲಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ದೂರುದಾರರನ್ನು ಮೊದಲು ಮ್ಯಾಜಿಸ್ಟ್ರೇಟ್ ಬಳಿ ಕಳುಹಿಸಿಲ್ಲ ಎಂಬ ಒಂದೇ ಕಾರಣಕ್ಕೆ, ಕಾನೂನುಬದ್ಧವಾಗಿ ಪಡೆದ ತನಿಖಾ ಅನುಮತಿ ಸ್ವಯಂಚಾಲಿತವಾಗಿ ಅಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೊಲೀಸರು ನೇರವಾಗಿ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ತನಿಖೆ ಮುಂದುವರಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಬಿಎನ್‌ಎಸ್‌ಎಸ್ ಜಾರಿಗೆ ಬಂದ ನಂತರ ಅಸಂಜ್ಞೆಯ ಅಪರಾಧಗಳ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಅಗತ್ಯ ನಿಯಮಗಳನ್ನು ರೂಪಿಸಿ ಜಾರಿಗೆ ತರುವುದನ್ನು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಆದೇಶದ ಪ್ರತಿಯನ್ನು ಕರ್ನಾಟಕ ಕಾನೂನು ಆಯೋಗಕ್ಕೆ ಕಳುಹಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!ಧನ್ತೇರಸ್ 2026: ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವಾಗ? ಬೆಂಗಳೂರು ಸೇರಿ ಪ್ರಮುಖ ನಗರಗಳ ಪೂಜಾ ಸಮಯ ಇಲ್ಲಿದೆಉತ್ತರ ಪ್ರದೇಶದಲ್ಲಿ ಮೂರನೇ ಅವಧಿಗಾಗಿ ಬಿಜೆಪಿಯ ತಂತ್ರ: ಕಲ್ಯಾಣ ಯೋಜನೆ, ಮಹಿಳಾ ಮತ ಮತ್ತು ಯೋಗಿ ವರ್ಚಸ್ಸಿನ ಮೇಲೆ ಭರವಸೆಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಟಾಪ್ 5 ಕಂಪನಿಗಳು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ!