LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಅವನ ಆಪ್ತರನ್ನೂ ಬಿಡುವುದಿಲ್ಲ: ಟೈಗರ್ ಶ್ರಾಫ್ ಮೇಲೆ ದಾಳಿ ಬೆನ್ನಲ್ಲೇ ಬಿಷ್ಣೋಯ್ ಗ್ಯಾಂಗ್ ನ ಅನಿಲ್ ಪಂಡಿತ್ ಬೆದರಿಕೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಟೈಗರ್ ಶ್ರಾಫ್ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿ ಬೆನ್ನಲ್ಲೇ ಬಿಷ್ಣೊಯ್ ಗ್ಯಾಂಗ್ ಅನಿಲ್ ಪಂಡಿತ್ ಆಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಬೆದರಿಕೆ ಹಾಕಿದ್ದಾನೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಹೊಣೆಯನ್ನು ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದೀಗ ಇನ್ನಷ್ಟು ಎಚ್ಚರಿಕೆ ಸಂದೇಶ ರವಾನಿಸಿದೆ. ಬಿಷ್ಣೋಯ್ ಗ್ಯಾಂಗ್ ನ ಅನಿಲ್ ಪಂಡಿತ್ ಎಂಬಾತ ಆಡೋಯೋ ಬಿಡುಗಡೆ ಮಾಡಿದ್ದು, ನಟ ಸಲ್ಮಾನ್ ಖಾನ್ ನಮ್ಮ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಬಾಲಿವುಡ್ ನ ಒನ್ನಷ್ಟು ಜನರ ಮೇಲೆ ದಾಳಿ ನಡೆಯಲಿದೆ ಎಂದು ಬೆದರಿಕೆ ಹಾಕಿದ್ದಾನೆ.

ಸುಶಾಂತ್ ಸಿಂಗ್ ರಜಪೂತ್ ನನ್ನು ಕೊಂದಾಗ ಈ ಸರ್ಕಾರ ಎಲ್ಲಿ ಹೋಗಿತ್ತು? ಆಗ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಈಗ ಏನು ಮಾಡುತ್ತದೆ? ಸರ್ಕಾರ ಮೊದಲು ಸಲ್ಮಾನ್ ಖಾನ್ ಗೆ ಮೊದಲು ನಮ್ಮ ಬಳಿ ಕ್ಷಮೆ ಕೇಳುವಂತೆ ಹೇಳಲಿ . ನಾವು ಭಗತ್ ಸಿಂಗ್ ರೀತಿಯ ಚಿಂತನೆ ಇಟ್ಟುಕೊಂಡಿದ್ದೇವೆ. ನಮ್ಮ ಸಂಘರ್ಷ ಏನಿದ್ದರೂ ದೇಶದ್ರೋಹಿಗಳ ವಿರುದ್ಧ.

ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ. ಬಾಲಿವುಡ್ ನ ಅಷ್ಟೂ ಕಲಾವಿದರು ಪಾಕಿಸ್ತಾನ, ದುಬೈನಲ್ಲಿ ಕುಳಿತಿರುವ ನಾಯಿ ದಾವೂದ್ ನ ಹಣದಲ್ಲಿ ಬದುಕುತ್ತಿದ್ದಾರೆ. ಅದರ ದುಪ್ಪಟ್ಟು ಹಣವನ್ನು ಇವರು ಅವನಿಗೆ ದುಡಿದು ನೀಡುತ್ತಿದ್ದಾರೆ. ಆ ನಾಯಿ ಆ ಹಣವನ್ನು ನಮ್ಮ ಭಾರತದ ನಾಶಕ್ಕೆ ಬಳಸುತ್ತಿದ್ದಾನೆ. ಆ ನಾಯಿ ಕೆಟ್ಟದನ್ನೇ ಹಬ್ಬಿಸಿದ್ದಾನೆ. ಡ್ರಗ್ಸ್ ಸಾಗಾಟ ಮಾಡಿದ, ಸ್ಫೋಟ ಮಾಡಿದ. ಆದರೆ ಅವನ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು ನಾವು ಅವನ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ನಮ್ಮ ಹಿಂದೆ ಬಿದ್ದಿದೆ.

ಬೇರೆ ಯಾವುದೇ ವಿಚಾರವಿಲ್ಲ. ನಾವು ನಮ್ಮಮನೆ, ಕುಟುಂಬ ಬಿಟ್ಟು ಬಂದಿದ್ದೇವೆ. ಸಲ್ಮಾನ್ ಖಾನ್ ಬಗ್ಗೆ ಮಾತನಾಡುವುದಾದರೆ ಎಲ್ಲಿಯವರೆಗೆ ಈತ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯವರೆಗೂ ಆತನ ಬೆನ್ನು ಬೀಳುತ್ತೇವೆ ಅವನ ಬದುಕಿನ ನೆಮ್ಮದಿ ಹಾಳು ಮಾಡುತ್ತೇವೆ. ಕ್ಷಮೆ ಕೇಳುವಂತೆ ಸರ್ಕಾರ ಸಲ್ಮಾನ್ ಖಾನೆಗೆ ಯಾಕೆ ಹೇಳುವುದಿಲ್ಲ? ಕ್ಷಮೆ ಕೇಳಿದರೆ ನಮಗೆ ಅವನ ಮೇಲೆ ಯಾವುದೇ ದ್ವೇಷ ಇರುವುದಿಲ್ಲ. ಆತ ಕ್ಷಮೆ ಕೇಳದಿದ್ದರೆ ಅವನ ಎಷ್ಟು ಆಪ್ತರಿದ್ದಾರೋ ಅವರೆಲ್ಲರಿಗೂ ನಾಶ ಕಾದಿದೆ. ಅವನ ಸುತ್ತಮುತ್ತ ಎಷ್ಟು ಜನ ಕೆಲಸ ಮಾಡುತ್ತಾರೋ ಅವರೆಲ್ಲರನ್ನು ನಾವು ಕೊಲ್ಲುತ್ತೇವೆ. ನಮ್ಮವರನ್ನು ಕೊಂದರೆ ನಮ್ಮ 200 ಜನರು ತಯಾರಾಗಿದ್ದಾರೆ. ನಮ್ಮಲ್ಲಿ ಹುಡುಗರ ಕೊರತೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಅಪ್ರಾಪ್ತ ಸೇರಿ ಮೂವರ ಬಂಧನ

ಮುಂಬೈ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡಿನ ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನ ‘ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್’ (ATF) ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರ ಮೂಲದ ಹೃತಿಕ್ ಕುಮಾರ್, ಹರಿಯಾಣ ಮೂಲದ ಫೂಲ್ ಸಿಂಗ್ ಹಾಗೂ ಹರಿಯಾಣ ಮೂಲದ ರೆಹಾನ್ ಎಂದು ಗುರುತಿಸಲಾಗಿದೆ. ಅಪ್ರಾಪ್ತರನ್ನು ಬಳಸಿಕೊಂಡು ಗ್ಯಾಂಗ್ಸ್ಟರ್ ಗಳು ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.

ಮುಂಬೈನಿಂದ ದೆಹಲಿಯತ್ತ ರೈಲಿನಲ್ಲಿ (ರೈಲು ಸಂಖ್ಯೆ 12939) ಪ್ರಯಾಣಿಸುತ್ತಿದ್ದ ಈ ಆರೋಪಿಗಳನ್ನ ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪಿಗಳು, ವಸಾಯಿಯಲ್ಲಿ ರೈಲು ಹತ್ತಿದ್ದರು. ರೈಲು ಕೋಟಾ ನಿಲ್ದಾಣಕ್ಕೆ ಬಂದಾಗ ಈ ಮೂವರು ಆರೋಪಿಗಳನ್ನ ತಡೆಹಿಡಿಯಲಾಗಿದೆ.

12939 ಸಂಖ್ಯೆಯ ರೈಲು ‘ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್’ ಆಗಿದ್ದು, ಪುಣೆ ಜಂಕ್ಷನ್‌ನಿಂದ ಜೈಪುರ ಜಂಕ್ಷನ್‌ ನಡುವೆ ಸಂಚರಿಸುತ್ತದೆ. ಈ ರೈಲು ಕಲ್ಯಾಣ ಜಂಕ್ಷನ್ ಮತ್ತು ವಸಾಯಿ ರಸ್ತೆಯಲ್ಲಿ ಸ್ಟಾಪ್‌ ಹೊಂದಿದ್ದು, ಗುಜರಾತ್ ಮತ್ತು ಮಧ್ಯಪ್ರದೇಶದ ಮೂಲಕ ಹಾದು ರಾಜಸ್ಥಾನವನ್ನ ಪ್ರವೇಶಿಸುತ್ತದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಟೈಗರ್ ಶ್ರಾಫ್ ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಫುಟ್‌ಬಾಲ್ ಮೈದಾನದಿಂದ ಹೊರಡುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ನಟ ಅಪಾಯದಿಂದ ಪಾರಾಗಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಈ ಗ್ಯಾಂಗ್‌ನ ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಪೋಸ್ಟ್ ಪ್ರಕಟವಾಗಿತ್ತು. ಆದರೆ, ಆ ಪೋಸ್ಟ್‌ನ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಹಲವು ತಂಡಗಳನ್ನ ರಚಿಸಿದ್ದಾರೆ. ಪ್ರಕರಣವನ್ನ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಟೈಗರ್ ಶ್ರಾಫ್ ಮೇಲೆ ದಾಳಿ ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1) (ಕೊಲೆ ಯತ್ನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!